Click here to Download MyLang App

ತೇಜಸ್ವಿ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, Tejaswi, Rudraprayagada Narabhakshaka, pornchandra tejasvi, poornchandra tejaswi, poornachsndra tejaswi, poornachandratejaswi poornachandra thejaswi, poornachandra thejasvi, poornachandra tejeswi, poornachandra tejeshwi, poornachandra tejaswi, poornachandra tejasvi, poornachandra tejashvi, poornachadra tejaswi, poorna chandra thejaswi, poorna chandra thajaswi,

ರುದ್ರಪ್ರಯಾಗದ ಭಯಾನಕ ನರಭಕ್ಷಕ (ಆಡಿಯೋ ಬುಕ್)

audio book

ಪಬ್ಲಿಶರ್
ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಬರಹಗಾರ: ಪೂರ್ಣಚಂದ್ರ ತೇಜಸ್ವಿ 

ಓದಿದವರು: 

ಸಚಿನ್ ನಾಯಕ್

ನಿರ್ಮಾಣ ಸಹಾಯ: ಧ್ವನಿಧಾರೆ ಮಿಡಿಯಾ

ಆಡಿಯೋ ಪುಸ್ತಕದ ಅವಧಿ : 6 ಘಂಟೆ 35 ನಿಮಿಷ

ಬದರೀನಾಥ ಹಾಗೂ ಕೇದಾರನಾಥಕ್ಕೆ ದಾರಿಯು ರುದ್ರಪ್ರಯಾಗದಲ್ಲಿ ಕವಲೊಡೆಯುತ್ತದೆ. ಅದೇ ಬದರೀನಾಥದಲ್ಲಿ ಉಗಮವಾಗುವ ಅಲಕನಂದ ಹಾಗೂ ಕೇದಾರನಾಥದಲ್ಲಿ ಜನಿಸುವ ಮಂದಾಕಿನಿ ನದಿಗಳು ರುದ್ರಪ್ರಯಾಗದಲ್ಲಿ ಸಂಗಮವಾಗುತ್ತವೆ.ಅಲಕನಂದ ಹಾಗೂ ಮಂದಾಕಿನಿ ನದಿಗಳು ಸಂಗಮವಾಗುವ ತಾಣ ರುದ್ರಪ್ರಯಾಗ. ಸುಮಾರು 425ಕ್ಕೂ ಹೆಚ್ಚು ಜನರನ್ನು ಕೊಂದಿತ್ತೆಂದು ಹೇಳಲಾದ ರುದ್ರಪ್ರಯಾಗದ ನರಭಕ್ಷಕ ಎಂದೇ ಖ್ಯಾತಿ ಹೊಂದಿದ ಒಂದು ಚಿರತೆಯ ಬಗ್ಗೆ ಇಂಗ್ಲಿಷಿನಲ್ಲಿ ಬಂದ Man Eating Leopard of Rudraprayag ಎಂಬ ರೋಚಕ ಕತೆಯನ್ನು ಅನುವಾದಿಸಿ ರುದ್ರಪ್ರಯಾಗದ ಭಯಾನಕ ನರಭಕ್ಷಕ ಎನ್ನುವ ಹೆಸರಿನ ಪುಸ್ತಕವನ್ನು ಕೆ ಪಿ ಪೂರ್ಣಚಂದ್ರ ತೇಜಸ್ವಿಯವರು ಬರೆದಿದ್ದಾರೆ. ಮೊದಲಿಗೆ ಬೆಂಜಿ ಎಂಬ ಗ್ರಾಮದ ಅಮಾಯಕನನ್ನು ಬಲಿ ತೆಗೆದುಕೊಂಡ ಆ ಚಿರತೆಯು ನರಭಕ್ಷಕನಾಗಿ ಮಾರ್ಪಟ್ಟು ತನ್ನ ಪರಿಸರದ ಜನರನ್ನು ಭೀತಿಯಲ್ಲಿ ಮುಳುಗಿಸಿತು. ಹಸಿವು ತಾಳದಾದಾಗ ಆ ಚಿರತೆ ಮನೆಗಳ ಬಳಿಸಾರಿ ಬಾಗಿಲನ್ನು ತನ್ನ ಪಂಜದಿಂದ ಕೆರೆಯುತ್ತಿತ್ತಂತೆ, ಕಿಟಕಿಗಳಲ್ಲಿ ಇಣುಕುತ್ತಿತ್ತಂತೆ, ಗುಡಿಸಲುಗಳನ್ನು ಧ್ವಂಸ ಮಾಡುತ್ತಿತ್ತಂತೆ. ನರಭಕ್ಷಕ ಚಿರತೆ ಮೃಗವಲ್ಲ; ಪಿಶಾಚಿ ಎಂದೇ ನಂಬಿದ್ದ ರುದ್ರಪ್ರಯಾಗದ ಜನರನ್ನು ಕಾಪಾಡಿದ್ದು ಕಾರ್ಬೆಟ್. ಅಂದಿನ ಬ್ರಿಟಿಷ್ ಸಂಸತ್ತು ಈ ಕುರಿತು ಒಂದು ನಿರ್ಣಯ ಅಂಗೀಕರಿಸಿ ಜಿಮ್ ಕಾರ್ಬೆಟ್ಟನಿಗೆ ಆ ನರಭಕ್ಷಕ ಚಿರತೆಯನ್ನು ಬೇಟೆಯಾಡುವಂತೆ ವಿನಂತಿಸಿತೆಂದು ಹೇಳಲಾಗುತ್ತದೆ. ಹೀಗೆ ರುದ್ರಪ್ರಯಾಗಕ್ಕೆ ಬಂದಿಳಿಯುವ ಜಿಮ್ ಕಾರ್ಬೆಟ್, ಎರಡು ವರ್ಷಗಳ ಕಾಲ ಚಿರತೆ ಬೇಟೆಗೆ ಪ್ರಯತ್ನಿಸುತ್ತಾರೆ. ಒಂದೆರಡು ಸಲ ವಿಫಲರಾಗುತ್ತಾರೆ. ಕೊನೆಗೆ ಬೇಟೆಯಲ್ಲಿ ಸಫಲರಾಗುತ್ತಾರೆ. ಅಂದು ರುದ್ರಪ್ರಯಾಗದ ನಿವಾಸಿಗಳ ಹರ್ಷಕ್ಕೆ ಮೇರೆಯೇ ಇರಲಿಲ್ಲ. ಅವನನ್ನು ಒಬ್ಬ ಸಾಧು ಎಂದು ಪರಿಗಣಿಸಿರುವ ಇಲ್ಲಿನ ಜನರು ಆತ ಆ ನರಭಕ್ಷಕ ಚಿರತೆಯನ್ನು ಕೊಂದ ದಿನವನ್ನು ಇಂದಿಗೂ ಸಂಭ್ರಮದ ಜಾತ್ರೆಯಾಗಿ ಆಚರಿಸುತ್ತಾರೆ.

 

ಕೃಪೆ - ವಿಕಿಪೀಡಿಯ


ಈಗ ಕೇಳಿ ಪ್ಯಾಪಿಲಾನ್‌-1 ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

Customer Reviews

Based on 8 reviews
75%
(6)
13%
(1)
13%
(1)
0%
(0)
0%
(0)
H
H.V.
ಅತ್ಯದ್ಭುತ

ಬಹಳ ಸ್ವಾರಸ್ಯ ಭರಿತ ಕಥೆಗಳು. ಜಿಮ್ ಕಾರ್ಬೆಟ್ ರ ಮೂಲ ಬರಹಕ್ಕಿಂತಲೂ ಕನ್ನಡದ ಅನುವಾದವೇ ಹೆಚ್ಚು ರೋಮಾಂಚನಕಾರಿ. ಸಚಿನ್ ಅವರ ದನಿ, ಕಥೆ ಹೇಳುವ ಪರಿ ಇನ್ನಷ್ಟು ಮಜಾ ಕೊಡುತ್ತದೆ.

C
Customer
Very good

Best story to read and listen.

V
Vinayaka yarlakatti

Better narration required. As compared to "chidambara rahasya", "karvalo", "jugari cross" this narration is not soo attractive to listen. Also background music is bit bored while listening.

L
Lokesh GS
Narrtaion

The narrative part should have been more realistic and emotional. It was pale.

R
Rohan Anand
ಅಧ್ಬುತವಾದ ನಿರೂಪಣೆ

ನಾನೇ ಜಿಮ್ ಕಾರ್ಬೆಟ್ ರೊಂದಿಗೆ ಚಿರತೆ ಹೊಡೆಯಲು ಹೋದ ಅನುಭವ ಆಯಿತು.ಹಿನ್ನೆಲೆ ಸಂಗೀತ ತುಂಬಾ ಚೆನ್ನಾಗಿದೆ.