Click here to Download MyLang App

ಮಲೆಗಳಲ್ಲಿ ಮದುಮಗಳು,   ಕುವೆಂಪು,  malegalli madumaglu,  malegalli madumagalu,  malegalli madhu magalu,  malegallalli madumagalu,  malegallali madumagalu,  malegallali madhumaglu,  malegallali madhumagalu,  malegallale madumagalu , malegali maduumagalu,  malegali madumagalu,  malegali madhumagalu,  malegalallimadhumagalu,  Malegalalli Madumagalu,  malegalalli madu magalu,  malegalalli madhumagalu,  malegalalli madhu magalu,  malegalali madumahalu,

ಮಲೆಗಳಲ್ಲಿ ಮದುಮಗಳು (ಇಬುಕ್)

e-book

ಪಬ್ಲಿಶರ್
ಕುವೆಂಪು
ಮಾಮೂಲು ಬೆಲೆ
Rs. 297.00
ಸೇಲ್ ಬೆಲೆ
Rs. 297.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana

 

ಆಕಾಶವೇ ಚಿಕ್ಕದಾಗಿ, ಕಾಡೇ ದೊಡ್ಡದಾಗಿ; ಕಾಡಿನ ಚೂರುಪಾರು ಜಾಗವನ್ನು ಸವರಿ ತನ್ನ ಬದುಕು ಕಟ್ಟಿಕೊಂಡ ಮನುಷ್ಯ ಕಾಡಿನ ಭವ್ಯತೆಯ ಮುಂದೆ ಕುಬ್ಜನಾಗಿ, ಕಾಡೇ ದೇವರಾಗಿ, ತೊಂದರೆಯನ್ನೂ ಆನಂದವನ್ನೂ ಏಕಕಾಲಕ್ಕೆ ಕೊಡುವ ದಿವ್ಯಾನುಭವವಾಗಿ; ಕಾಡು ಮದುಮಗಳು ಕಾದಂಬರಿಯಲ್ಲಿ ಮೂಡಿಬಂದಿದೆ. ಆ ಅರ್ಥದಲ್ಲಿ ಕುವೆಂಪುರವರ ಅದ್ವಯವಾದೀ ದಾರ್ಶನಿಕತೆಗೆ ಈ ಕಾಡೇ ಒಂದು ಭವ್ಯವಾದ ರೂಪಕ.

ಭರಮೈ ಹೆಗ್ಗಡೆಯವರಿಂದ ಹಿಡಿದು ನಾಯಿ ಗುತ್ತಿಯವರೆಗೆ ಐತ-ಪೀಂಚಲುವಿನಿಂದ ತೊಡಗಿ ಮುಕುಂದಯ್ಯ-ಚಿನ್ನಮ್ಮನವರೆಗೆ ಮತ್ತು ಕಿಲಸ್ತರಿಂದ ಹಿಡಿದು ಹೊನ್ನಾಳಿ ಸಾಬರವರೆಗೆ ಎಲ್ಲರೂ ಈ ಕಾಡಿನ ಮಕ್ಕಳೇ. ಈ ಕಾಡು ಇಲ್ಲದಿದ್ದರೆ ಇಲ್ಲಿಯ ಜನರ ಯಾವ ವ್ಯೂಹವೂ, ಅವರ ಯಾವ ಕನಸೂ, ಅವರ ಯಾವ ಬದುಕೂ ನೆರವೇರಲು ಸಾಧ್ಯವೇ ಇಲ್ಲ. ಹಾಗಾಗಿ ಕಾಡು ಇಲ್ಲಿಯ ಜನರನ್ನು ಪೊರೆಯುವ ಮತ್ತು ಆಗಿಂದಾಗ್ಗೆ ಅವರನ್ನೂ ತರಿದು ಮುಕ್ಕುವ ಕೆಲಸವನ್ನೂ ತಣ್ಣಗೆ ಮಾಡಿಕೊಂಡು ಬಂದಿದೆ. ಕೇವಲ ತನ್ನ ಅಸ್ತಿತ್ವ ಮಾತ್ರದಿಂದಲೇ ಮಾನುಷ ಜೀವನದ ಅನೇಕಾನೇಕ ಅಲ್ಲೋಲಕಲ್ಲೋಲಗಳಿಗೆ ಕಾರಣೀಭೂತವಾಗುವ ಈ ಕಾಡು ಮದುಮಗಳು ಕಾದಂಬರಿಯ ಜೀವದ್ರವ್ಯವೂ ಹೌದು. ಪೊಷಕ ದ್ರವ್ಯವೂ ಹೌದು.

ಈ ಕಾದಂಬರಿಯಲ್ಲಿ ಮರ್ಯಾದಾ ಪುರುಷೋತ್ತಮರಿಲ್ಲ. ಸಾಮಾನ್ಯ ಮನುಷ್ಯ ಬದುಕಿನ ಒಳಜಗತ್ತು ಎಷ್ಟು ವೈವಿಧ್ಯಮಯವೂ, ಜೀವಂತವೂ, ಕ್ರೂರವೂ ಆಗಿದೆ. ಎಷ್ಟೊಂದು ಬಗೆಯ ತಳಮಳಗಳ, ವಿರೋಧಾಭಾಸಗಳ, ದಿಗ್ಭ್ರಮೆಗಳ, ಪೀಕಲಾಟಗಳ ಸಂಕೀರ್ಣ ಸಂದರ್ಭ ಸೃಷ್ಟಿಯಾಗಿ ಮನುಷ್ಯ ಹೇಗೆ ಹತಪ್ರಭನಾಗುತ್ತಾನೆ. ಹತನಾಗುತ್ತಲೇ ಹೇಗೆ ಬೆಳಗುತ್ತಾನೆ ಅಥವಾ ಹೇಗೆ ಮುದುಡುತ್ತಾನೆ ಎನ್ನುವ ಅನೇಕಾನೇಕ ಮನುಷ್ಯ ಚೇತನಗಳ ಒಂದು ಮಹಾಒಕ್ಕೂಟವನ್ನು ಈ ಕಾದಂಬರಿ ನಮಗೆ ಕಾಣಿಸುತ್ತದೆ.

ಕಾಡನ್ನು ಅರ್ಥ ಮಾಡಿಕೊಳ್ಳದವರು ಮದುಮಗಳು ಕಾದಂಬರಿಯನ್ನು ಅರ್ಥಮಾಡಿಕೊಳ್ಳಿಯಾರೇ? ಮನುಷ್ಯರನ್ನು ಅರ್ಥಮಾಡಿಕೊಳ್ಳದವರು ಮದುಮಗಳು ಕಾದಂಬರಿಯನ್ನು ಹೇಗೆ ಓದಬಲ್ಲರು..? ನಾವು ಬದುಕುತ್ತಿರುವ ಸಮಾಜವನ್ನು ಎಡ-ಬಲ ಎಂದು ಈಗಾಗಲೇ ವಿಭಜಿಸಿಕೊಂಡಿರುವವರು ಈ ಕಾದಂಬರಿಯನ್ನು ಓದುವ ಪರಿ ಹೇಗಿದ್ದೀತು..? ಈ ಕಾದಂಬರಿಯನ್ನು ಓದಿದ ಮೇಲೆ, ಇದರ ಕುರಿತು ಇಷ್ಟು ಯೋಚನೆ ಮಾಡಿದ ಮೇಲೆ, ಈ ಕಾದಂಬರಿಯನ್ನು ಅರ್ಥ ಮಾಡಿಕೊಳ್ಳುವುದೆಂದರೆ ನಮ್ಮ ಜನರನ್ನು ಮತ್ತು ಅವರ ಬಾಳ್ವೆಯನ್ನು ಅರ್ಥಮಾಡಿಕೊಳ್ಳುವುದು ಹಾಗೂ ನಮ್ಮ ನಮ್ಮ ಚೌಕಟ್ಟುಗಳನ್ನು ವಿಸರ್ಜಿಸುವುದು ಎಂದು ಹೇಳಿದ ಮೇಲೂ ಪರಿಹಾರವಾಗದೆ ಉಳಿದಿರುವ ಪ್ರಶ್ನೆ ಒಂದೇ.

ಓದುವುದು ಎಂದರೆ ಏನು..?

(ಧಾರವಾಡದ ರಂಗಾಯಣದಲ್ಲಿ ಡಿಸೆಂಬರ್ 9, 2018ರಂದು ನಡೆದ ‘ಮಲೆಗಳಲ್ಲಿ ಮದುಮಗಳು-50’ ವಿಚಾರಸಂಕಿರಣದಲ್ಲಿ ನೀಡಿದ ಉಪನ್ಯಾಸದ ಲೇಖನ ರೂಪದಿಂದ).

ಮೂಲ: http://bit.ly/3puuFWs

 

ಪುಟಗಳು: 712

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 4 reviews
100%
(4)
0%
(0)
0%
(0)
0%
(0)
0%
(0)
S
Skmuruli
ಕನ್ನಡದಲ್ಲಿ ಓದಲ್ಲೆ ಬೇಕಾದ ಕಾದಂಬರಿ ಇದ್ದು

ಇದರಲ್ಲಿ ಬರುವ ಪ್ರತಿಯಂದು ಪಾತ್ರವೂ ಮಹತ್ವಪೂರ್ಣವಾದದ್ದು.
ಇದರಲ್ಲಿ ನಾಯಿಗುತ್ತಿ ಹುಲಿಯ ಪತ್ರಗಳು ಕೊನೆಯ ತನಕ ನಮ್ಮನು ಹಿಡಿದಿಡುತ್ತದೆ
ಬಿಸುಕಲ್ ಸವಾರಿ super

P
Prashantha Kumara

ನನಗೆ ಇನ್ನು ಪುಸ್ತಕ ದೊರೆತಿಲ್ಲ, ದಯವಿಟ್ಟು ತಲುಪಿಸಿ, ನನ್ನ ಸಂಪರ್ಕ ಸಂಖ್ಯೆ 9731985807

P
Prasad
ಇದೊಂದು ಕಾದಂಬರಿ ಪ್ರಕಾರದಲ್ಲಿ ಮೈಲಿಗಲ್ಲು

ಮಲೆನಾಡಿನ ಭಾಷೆ, ಬದುಕನ್ನು ಸಹಜವಾಗಿ ಕಟ್ಟಿಕೊಟ್ಟಿದ್ದಾರೆ.

A
Asha Rai

ಮಲೆಗಳಲ್ಲಿ ಮದುಮಗಳು