ಓದಿದವರು : ಧ್ವನಿಧಾರೆ ಮೀಡಿಯಾ ತಂಡ
ನಿರ್ಮಾಣ ಸಹಾಯ : ಧ್ವನಿಧಾರೆ ಮೀಡಿಯಾ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಮಕ್ಕಳ ಓದುವ ಅಭಿರುಚಿಗೆ ಪೋಷಕವಾಗುವ ಉದ್ದೇಶದ ‘ಜಾಣ ಕಥೆಗಳು’ ಕಥಾಸಂಕಲನ ‘ನವಕರ್ನಾಟಕ ಕಿರಿಯರ ಕಥಾಮಾಲೆ’ಯಲ್ಲಿ ಪ್ರಕಟವಾಗುತ್ತಿದೆ. ಮಕ್ಕಳಿಗೆ ಹೆಚ್ಚು ಪ್ರಿಯವಾಗುವ ಸ್ವಾರಸ್ಯಕರ ಕಥೆಗಳಿವೆ ಈ ಸಂಕಲನದಲ್ಲಿ.
ಹಿರಿಯರಿಂದ ‘ನೀನು ಜಾಣ ಅಥವಾ ಜಾಣೆ’ ಎನ್ನಿಸಿಕೊಳ್ಳಲು ಮಕ್ಕಳು ಹಂಬಲಿಸುವುದು ಸಹಜವಾದುದು. ಸದಾ ಮಕ್ಕಳ ಮೇಲೆ ಸಿಡಿಮಿಡಿಗೊಳ್ಳುವ ತಂದೆ ತಾಯಿಯರು, ಮಕ್ಕಳು ನಿಜವಾದ ಜಾಣತನ ಪ್ರದರ್ಶಿಸಿದಾಗಲಾದರೂ, ತಮ್ಮ ಜಿಪುಣತನ ಬಿಟ್ಟು ಮಕ್ಕಳನ್ನು ಅವರ ಜಾಣತನದ ಬಗ್ಗೆ ತಾರೀಫು ಮಾಡಬೇಕೆಂಬ ಸಂದೇಶ ಸಹ ಈ ಕಥೆಗಳಲ್ಲಿದೆ.
ಚಿತ್ರಕಾರ ರವೀಂದ್ರ ಎನ್. ಹೆಗಡಿ ಅವರು ಈ ಕಥೆಗಳಿಗೆ ಸೂಕ್ತ ಚಿತ್ರ ಬಿಡಿಸಿ ಪುಸ್ತಕದ ಮೆರುಗನ್ನು ಹೆಚ್ಚಿಸಿದ್ದಾರೆ.
ಈ ಸಂಕಲನದಲ್ಲಿ ಹೆಸರಾಂತ ಮಕ್ಕಳ ಕಥೆಗಾರರಾದ ನವಗಿರಿನಂದ, ಪ. ರಾಮಕೃಷ್ಣ ಶಾಸ್ತ್ರಿ , ಪಳಕಳ ಸೀತಾರಾಮ ಭಟ್ಟ , ನೀಲಾಂಬರಿ, ಪಾರ್ವತಮ್ಮ ಮಹಲಿಂಗ ಶೆಟ್ಟಿ , ಜಂಬುನಾಥ ಕಂಚ್ಯಾಣಿ, ದು. ನಿಂ. ಬೆಳಗಲಿ, ಬೇಬಿ ಎಮ್. ಮಾಣಿಯಾಟ್ ಇವರ ಕಥೆಗಳು ಸೇರಿವೆ. ಜಾಣತನದ ಹತ್ತಾರು ಮುಖಗಳನ್ನು ತೋರಿಸುವ ಈ ಕಥೆಗಳೆಲ್ಲಾ ಖುಷಿ ಕೊಡುವಂತಹವೇ. ನೀವೇ ಓದಿ ಆನಂದಿಸಿ.
ಮಕ್ಕಳ ವಿವಿಧ ಕಥಾ ಸಂಕಲನದ ಈ ಮಾಲೆಯಲ್ಲಿ ನೀತಿ ಕಥೆಗಳು, ಪ್ರಾಣಿ-ಪಕ್ಷಿಗಳ ಕಥೆಗಳು, ವಿನೋದ ಕಥೆಗಳು, ಸಾಹಸ ಕಥೆಗಳು, ವೈಜ್ಞಾನಿಕ ಕಥೆಗಳು ಇನ್ನೂ ಮುಂತಾದವು ಬರಲಿವೆ. ಅವೆಲ್ಲವೂ ನಿಮಗೆ ಆನಂದ ಕೊಡುವವೇ ಆಗಿವೆ.
ಆರ್. ಎಸ್. ರಾಜಾರಾಮ್
ನವಕರ್ನಾಟಕ ಪ್ರಕಾಶನ
ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.