
ಮೂಲ ಕನ್ನಡ : ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ತುಳು ಅನುವಾದ : ಡಾ. ನರೇಂದ್ರ ರೈ ದೇರ್ಲ
ಕನ್ನಡದ ಅತ್ಯಂತ ಜನಪ್ರಿಯ ಕಾದಂಬರಿಗಳಲ್ಲಿ ಒಂದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ "ಕರ್ವಾಲೊ". ಪ್ರಕಟವಾದಾಗಿನಿಂದಲೂ ಸತತವಾಗಿ ಮರುಮುದ್ರಣ ಕಾಣುತ್ತಲೇ ಇರುವ ಈ ಕಾದಂಬರಿ ಎರಡು ತಲೆಮಾರಿನ ಓದುಗರ ಅಚ್ಚುಮೆಚ್ಚಿನ ಕಾದಂಬರಿಗಳಲ್ಲಿ ಒಂದು. ಮೈಲ್ಯಾಂಗ್ ಅಲ್ಲಿ ಇಬುಕ್ ಹಾಗೂ ಆಡಿಯೋ ಬುಕ್ ರೂಪದಲ್ಲೂ ಅತ್ಯಂತ ಜನಪ್ರಿಯವಾಗಿರುವ ಈ ಕಾದಂಬರಿಯನ್ನು ತೇಜಸ್ವಿ ಅವರ ಒಡನಾಡಿ ನರೇಂದ್ರ ರೈ ದೇರ್ಲ ಅವರು ಅಷ್ಟೇ ಸೊಗಸಾಗಿ ಕನ್ನಡದ ಸಹೋದರ ಭಾಷೆ ತುಳುವಿಗೆ ಅನುವಾದಿಸಿದ್ದಾರೆ.
ಈಗ ಕರ್ವಾಲೊ ತುಳು ಅನುವಾದದ ಇಬುಕ್ ಅನ್ನೂ ಮೈಲ್ಯಾಂಗ್ ಮೊಬೈಲ್ ಆಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ಓದಿ !
ಕರ್ವಾಲೋ ಹುಟ್ಟಿದ್ದು ಹೇಗೆ ? ರಾಜೇಶ್ವರಿ ತೇಜಸ್ವಿ ಅವರು ಹೇಳ್ತಾರೆ ಕೇಳಿ:
ಪುಟಗಳು: 150