Click here to Download MyLang App

ಸಂಗ್ರಹ: ಡಾ. ನರೇಂದ್ರ ರೈ ದೇರ್ಲ

ನರೇಂದ್ರ ರೈ ದೇರ್ಲ ತಮ್ಮ ಪರಿಸರ ಸಂಬಂಧಿ ಬರಹಗಳಿಂದ ಗುರುತಿಸಿಕೊಂಡವರು. ತಮ್ಮ ಬರಹಗಳಲ್ಲಿ ಪರಿಸರ ಕಾಳಜಿಯನ್ನು ವ್ಯಕ್ತಪಡಿಸುವ ಅವರು ನಿಸರ್ಗ ಪ್ರೇಮಿ. ಕನ್ನಡ ಪತ್ರಿಕೆಗಳಲ್ಲಿ ಅವರ ಲೇಖನಗಳು, ಅಂಕಣಗಳು ಪ್ರಕಟಗೊಳ್ಳುತ್ತದೆ. ಕೃಷಿ ಇವರ ಮತ್ತೊಂದು ಆಸಕ್ತಿಯ ಕ್ಷೇತ್ರ. ಸ್ವತಃ ಕೃಷಿಕರಾಗಿರುವ ಇವರು, ತಮ್ಮ ಲೇಖನಗಳ ಮೂಲಕ ಕೃಷಿ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಸಾವಯವ ಕೃಷಿಗೆ ಹೆಚ್ಚಿನ ಮಹತ್ವ ನೀಡುವ ನರೇಂದ್ರ ರೈ ಈ ಕುರಿತು ಹಲವು ಜನೋಪಯೋಗಿ ಬರಹಗಳ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಹುಟ್ಟೂರಾದ ದೇರ್ಲದಲ್ಲಿ ವಿವಿಧ ಕೃಷಿ ಪ್ರಯೋಗಗಳನ್ನು ಮಾಡುತ್ತಾ ಆ ಕ್ಷೇತ್ರಕ್ಕೆ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಇವೆಲ್ಲದರ ಜೊತೆಗೆ ನರೇಂದ್ರ ರೈ ಓರ್ವ ಉತ್ತಮ ವಾಗ್ಮಿ, ಸಾಹಿತಿ ಹಾಗೂ ಪ್ರಗತಿಪರ ಚಿಂತಕ. ಉತ್ತಮ ಕನ್ನಡ ಪ್ರಾಧ್ಯಾಪಕರೂ ಹೌದು. ತಮ್ಮ ಮಾತಿನ ಮೂಲಕ ಎಂತಹವರಲ್ಲೂ ಪರಿಸರದ ಕುರಿತು ಕಾಳಜಿ ಮೂಡುವಂತೆ ಮಾಡುವ ಇವರು ಈ ಮೂಲಕ ಉತ್ತಮ ಪರಿಸರ ಕಾಳಜಿ ಮೆರೆಯುತ್ತಿದ್ದಾರೆ. ದೇರ್ಲರು ಮರಗಿಡಗಳನ್ನು ಮನುಷ್ಯರಂತೆ ಕಾಣುತ್ತಾರೆ. ತಮ್ಮ ಬರಹಗಳಲ್ಲಿ ಅವುಗಳನ್ನು ಮಾತನಾಡಿಸುತ್ತಾರೆ. ತಮ್ಮ ಬರಹಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವು ಕೃಷಿಕರ ಪ್ರಯೋಗಶೀಲತೆಯನ್ನು ವಿವರಿಸುತ್ತಾರೆ. ಇದು ಹಲವರಿಗೆ ಪ್ರೇರಣೆಯಾದದ್ದೂ ಇದೆ. ಸಾವಯವ ಕೃಷಿ, ತೇಜಸ್ವಿ ಪತ್ರಗಳು, ಹಸಿರು ಉಸಿರು, ನಿರ್ಮಾಣ, ನೆಲದವರು, ಹಸಿರು ಕೃಷಿಯ ನಿಟ್ಟುಸಿರು, ಇದೂ ಪತ್ರಿಕೋದ್ಯಮ ಮುಂತಾದ ಪುಸ್ತಕಗಳು ಹಾಗೂ ಹಲವಾರು ಅಂಕಣ ಬರಹಗಳು, ಲೇಖನಗಳ ಮೂಲಕ ಪರಿಸರ ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ.

 

ಈಗ ಅವರ ಆರು ಅಮೂಲ್ಯ ಕೃತಿಗಳನ್ನು ಮೈಲ್ಯಾಂಗ್ ಮೊಬೈಲ್ ಆಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲ್, ಟ್ಯಾಬ್ ಗಳಲ್ಲಿ ಓದಿ..

6 ಪುಸ್ತಕಗಳು
  • ತೇಜಸ್ವಿ ಪತ್ರಗಳು (ಇಬುಕ್)
    ನರೇಂದ್ರ ರೈ ದೇರ್ಲ,  ತೇಜಸ್ವಿ,  ಕೆ.ಪಿ.ಪೂರ್ಣಚಂದ್ರ ತೇಜಸ್ವಿ,  Tejaswi Pathragalu,  Tejaswi,  poorna chandra tejaswi,    Narendra Rai Derla,  Kannada,  K.P. Poornachandra Tejaswi,
    ಪಬ್ಲಿಶರ್
    ನರೇಂದ್ರ ರೈ ದೇರ್ಲ
    ಮಾಮೂಲು ಬೆಲೆ
    Rs. 299.00
    ಸೇಲ್ ಬೆಲೆ
    Rs. 299.00
    ಬಿಡಿ ಬೆಲೆ
    ಇಶ್ಟಕ್ಕೆ 
  • ಹಸಿರು-ಉಸಿರು (ಇಬುಕ್)
    ಹಸಿರು-ಉಸಿರು (ಇಬುಕ್)
    ಪಬ್ಲಿಶರ್
    ನರೇಂದ್ರ ರೈ ದೇರ್ಲ
    ಮಾಮೂಲು ಬೆಲೆ
    Rs. 160.00
    ಸೇಲ್ ಬೆಲೆ
    Rs. 160.00
    ಬಿಡಿ ಬೆಲೆ
    ಇಶ್ಟಕ್ಕೆ 
  • ಕರ್ವಾಲೊ ತುಳು (ಇಬುಕ್)
    ತೇಜಸ್ವಿ,  ಡಾ. ನರೇಂದ್ರ ರೈ ದೇರ್ಲ,  ಕೆ.ಪಿ.ಪೂರ್ಣಚಂದ್ರ ತೇಜಸ್ವಿ,  ಕರ್ವಾಲೋ,  ಕರ್ವಾಲೊ ತುಳು ಅನುವಾದ,  ಕರ್ವಾಲೊ,  tulu translation,  Tejaswi,  poorna chandra tejaswi,  Narendra Rai Derla,  kuvempu,  kp purnachandra thejasvi,  kp purnachandra tejsvavi,  kp purnachandra tejasvi,  kp purna chandra tejasvi,  kp poornachandratejasvi,  kp poornachandra tejaswi,  kp poornachandra tejasvi,  kp poornachandra,  karwalo,
    ಪಬ್ಲಿಶರ್
    ಡಾ. ನರೇಂದ್ರ ರೈ ದೇರ್ಲ
    ಮಾಮೂಲು ಬೆಲೆ
    Rs. 125.00
    ಸೇಲ್ ಬೆಲೆ
    Rs. 125.00
    ಬಿಡಿ ಬೆಲೆ
    ಇಶ್ಟಕ್ಕೆ 
  • ಬೇರು - ಬದುಕು (ಇಬುಕ್)
    ಬೇರು - ಬದುಕು,    ಡಾ. ನರೇಂದ್ರ ರೈ ದೇರ್ಲ,  Narendra Rai Derla,  Kannada,  Dr. Narendra Rai Derla,    Beru Baduku,
    ಪಬ್ಲಿಶರ್
    ಡಾ. ನರೇಂದ್ರ ರೈ ದೇರ್ಲ
    ಮಾಮೂಲು ಬೆಲೆ
    Rs. 130.00
    ಸೇಲ್ ಬೆಲೆ
    Rs. 130.00
    ಬಿಡಿ ಬೆಲೆ
    ಇಶ್ಟಕ್ಕೆ 
  • ಬೀಜಧ್ಯಾನ (ಇಬುಕ್)
    ಬೀಜಧ್ಯಾನ,  ಡಾ. ನರೇಂದ್ರ ರೈ ದೇರ್ಲ,  Narendra Rai Derla,  Kannada,  Dr. Narendra Rai Derla,   Beeja Dyana,
    ಪಬ್ಲಿಶರ್
    ಡಾ. ನರೇಂದ್ರ ರೈ ದೇರ್ಲ
    ಮಾಮೂಲು ಬೆಲೆ
    Rs. 175.00
    ಸೇಲ್ ಬೆಲೆ
    Rs. 175.00
    ಬಿಡಿ ಬೆಲೆ
    ಇಶ್ಟಕ್ಕೆ 
  • ಕೊರೋನಾ ನಂತರದ ಗ್ರಾಮಭಾರತ (ಇಬುಕ್)
    ಡಾ. ನರೇಂದ್ರ ರೈ ದೇರ್ಲ,  Narendra Rai Derla,  Koronanantharada Gramabharatha,  Kannada,  Dr. Narendra Rai Derla,
    ಪಬ್ಲಿಶರ್
    ಡಾ. ನರೇಂದ್ರ ರೈ ದೇರ್ಲ
    ಮಾಮೂಲು ಬೆಲೆ
    Rs. 130.00
    ಸೇಲ್ ಬೆಲೆ
    Rs. 130.00
    ಬಿಡಿ ಬೆಲೆ
    ಇಶ್ಟಕ್ಕೆ