ನಿಮ್ಮಿಷ್ಟದ ಕತೆಗೆ ನಿಮ್ಮದೇ ದನಿ ! - ಯೋಜನೆಯ ಪರಿಚಯ
ನಿಮ್ಮ ದನಿಯಲ್ಲಿ ಕತೆಯೊಂದಕ್ಕೆ ಜೀವ ತುಂಬಿ ಅದ್ಭುತವಾದ ಆಡಿಯೋಕತೆಯಾಗಿಸುವ ಶಕ್ತಿಯಿದೆಯೇ? ಪ್ರಪಂಚದಾದ್ಯಂತ ಇರುವ ಕನ್ನಡ ಓದುಗರನ್ನು, ಕೇಳುಗರನ್ನು ನಿಮ್ಮ ದನಿಯ ಮೂಲಕ ತಲುಪುವ ಆಸೆ ನಿಮ್ಮಲ್ಲಿದೆಯೇ?
ಇನ್ನು ಕಾಯಬೇಕಿಲ್ಲ..
ಮೈಲ್ಯಾಂಗ್ ನಿಮಗಾಗಿ ತಂದಿದೆ "ನಿಮ್ಮಿಷ್ಟದ ಕತೆಗೆ ನಿಮ್ಮದೇ ದನಿ" ಯೋಜನೆ. ನೀವು ಮಾಡಬೇಕಿರುವುದು ಇಷ್ಟೇ:
- www.mylang.in/myvoice ತಾಣಕ್ಕೆ ಭೇಟಿ ಕೊಡಿ.
- ಇಲ್ಲಿರುವ ಚೆಂದ ಚೆಂದದ ಕತೆಗಳಲ್ಲಿ ನಿಮ್ಮಿಷ್ಟದ ಕತೆಯೊಂದನ್ನು ಆಯ್ಕೆ ಮಾಡಿಕೊಂಡು, ನಿಮ್ಮ ಮೊಬೈಲ್/ಲ್ಯಾಪ್‍ಟಾಪ್ ಮೂಲಕ ಒಳ್ಳೆಯ ಗುಣಮಟ್ಟದಲ್ಲಿ ರೆಕಾರ್ಡ್ ಮಾಡಿ. ಕತೆ ಓದುವಾಗ ನಿಮ್ಮ ಹೆಸರು, ಕತೆಯ ಹೆಸರು ಮತ್ತು ಬರೆದವರ ಹೆಸರನ್ನು ಹೇಳಲು ಮರೆಯದಿರಿ.
- 7259268000 ನಂಬರಿಗೆ ಕತೆಯನ್ನು ವಾಟ್ಸಾಪ್ ಮಾಡಿ ಇಲ್ಲವೇ contact@mylang.in ಗೆ ಇಮೇಲ್ ಮಾಡಿ
- ನಿಮ್ಮ ಆಡಿಯೋಕತೆಯನ್ನು ಒಳ್ಳೆಯ ಹಿನ್ನೆಲೆ ಸಂಗೀತ ಮತ್ತು ಎಫೆಕ್ಟ್ಸ್ ಜೊತೆ ಮೈಲ್ಯಾಂಗ್‍ನ ಸಾವಿರಾರು ಓದುಗರಿಗೆ ನಾವು ತಲುಪಿಸುತ್ತೇವೆ, ಉಚಿತವಾಗಿ !
- ಪ್ರತಿ ತಿಂಗಳು ಅತೀ ಹೆಚ್ಚು ಜನಮನ್ನಣೆ ಪಡೆಯುವ ಆಡಿಯೋಕತೆ ನೀವು ದನಿ ನೀಡಿದ ಕತೆಯಾಗಿದ್ದಲ್ಲಿ ನಿಮಗೆ ಒಂದು ಸಕತ್ ಬಹುಮಾನ ಮೈಲ್ಯಾಂಗ್ ವತಿಯಿಂದ ದೊರೆಯಲಿದೆ !
ಪ್ರಕಟಣೆಯ ಅಂತಿಮ ನಿರ್ಧಾರ ಮೈಲ್ಯಾಂಗ್‍ನದ್ದಾಗಿರಲಿದೆ.
ಇನ್ನೇಕೆ ತಡ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿ ನಿಮ್ಮ ದನಿಯ ಸೊಬಗಿನಲ್ಲಿ !