Click here to Download MyLang App

ಶ್ರೀಮಂತ ಬಾಲಕ........ಮನೋಜ್ : ರಾಜೇಂದ್ರ ಕುಮಾರ್ ಗುಬ್ಬಿ | ಕೌಟುಂಬಿಕ ಕತೆ | ಕತೆಯ ಒಳ ನುಡಿಶೈಲಿ - ಶಿಷ್ಟ ಸ್ವರೂಪದ ಕನ್ನಡ |

ಶ್ರೀಮಂತ ಬಾಲಕ........ಮನೋಜ್
(ಮಕ್ಕಳ ನೀತಿ ಕಥೆ)

ಮನೋಜ್ ಹತ್ತು ವರ್ಷದ ಹುಡುಗ, ತುಂಬಾ
ಶ್ರೀಮಂತ ಬಾಲಕನಾದರೂ, ಶಾಲೆಯಲ್ಲಿ, ಶಾಲೆಯ
ಹೊರಗಡೆಯೂ ಅಷ್ಟೇ ಚೂಟಿಯಾದ ಅವನು
ಎಲ್ಲಾ ವಿಷಯಗಳನ್ನು ಬಲುಬೇಗನೆ ಗ್ರಹಿಸುವ
ಸಾಮರ್ಥ್ಯ ಹೊಂದಿರುವವನು, ಅದೇರೀತಿ ಈತ
ಪ್ರತಿದಿನ ಗಮನಿಸುತ್ತಿದ್ದನು, ಅಮ್ಮನ ಅಡುಗೆ
ಕೋಣೆಯಲ್ಲಿ ನಾಲ್ಕೈದು ಕಪಾಟುಗಳಿದ್ದುದ್ದನ್ನು,
ಹಾಗೂ ಅವರ ಮನೆಯಲ್ಲಿ ಪ್ರತಿದಿನ ಉಳಿದ
ಆಹಾರ ಪದಾರ್ಥವಾಗಲೀ, ಅಥವಾ ಹೊರಗಡೆ
ಹೋದಾಗ ಕೊಂಡು ತಂದ ವಸ್ತುಗಳೇ ಆಗಲೀ,
ಮನೆಯಲ್ಲಿ ತುಂಬಾ ದಿನ ಬಳಸಿ ಬಿಸಾಡುವಂತಹ
ವಸ್ತುಗಳೇ ಆಗಲೀ,

ಅವುಗಳು ಯಾವ ಯಾವ ಕಪಾಟಿನಲ್ಲಿ
ಸೇರಬೇಕೆಂದು ನಿಶ್ಚಯಿಸಿ ಆತನ ಅಮ್ಮ ಆ
ಕಪಾಟಿನಲ್ಲಿಟ್ಟಿರುತ್ತಿದ್ದರು, ಅವರು ಬೇರ್ಪಡಿಸುವ
ವಸ್ತುಗಳು ಅದೇ ಕಪಾಟಿಗೆ ಸೇರುವಂತೆ
ನೋಡಿಕೊಂಡು, ಅಪ್ಪಿತಪ್ಪಿಯೂ ಬೇರೆ ಕಪಾಟಿಗೆ
ಹೋಗದಂತೆ ನೋಡಿಕೊಳ್ಳುತ್ತಿದ್ದರು, ಆದಿನ
ಅಥವಾ ಎಂದಾದರೂ ಅವರ ಮನೆಗೆ, ಆ ಕಪಾಟಿಗೆ
ಸಂಬಂಧಪಟ್ಟ ಜನ ಬಂದಾಗ ಆ
ಕಪಾಟಿನಲ್ಲಿಟ್ಟಿದ್ದ ವಸ್ತುಗಳನ್ನು ಅವರಿಗೆ
ಕೊಡುವುದಕ್ಕಾಗಿ.........

ಒಂದೊಮ್ಮೆ ಮನೋಜ್ ಮರೆತು ಅವರು
ಕೊಟ್ಟ ಪದಾರ್ಥಗಳು, ದಿನಬಳಕೆ ವಸ್ತುಗಳು,
ಅವರು ಹೇಳಿದ ಕಪಾಟು ಸೇರಿಸದೆ ಬೇರೆ
ಕಪಾಟಿಗೇನಾದರೂ ಸೇರಿಸಿ ಬಿಟ್ಟರೆ ತುಂಬಾ
ಕೊಪಗೊಳ್ಳುತ್ತಿದ್ದರು., ಜೋರಾಗಿ ಗದರಿಕೊಂಡು
ಎರಡು ಏಟುಗಳನ್ನೂ ಕೊಡುತ್ತಿದ್ದರು.

ಮನೋಜ್ ನ ತಾಯಿ ಪ್ರತಿವಾರದ
ಕೊನೆಯದಿನ, ತಿಂಗಳು ಕೊನೆಯದಿನ, ರಜಾದಿನಗಳು
ಬಂದವೆಂದರೆ.......ಅವರ ಆತ್ಮೀಯ ಬಂಧುಗಳು,
ಗೆಳೆಯರು, ಅವರ ಸರಿಸಮಾನರಾದ ಅಕ್ಕಪಕ್ಕದ
ಜನರನ್ನು ತಮ್ಮ ವಿಶಾಲವಾದ ಮನೆಯಲ್ಲಿ
ಸೇರಿಸುವುದು, ಕಿಟ್ಟಿ ಪಾರ್ಟಿ ಮಾಡುವುದು,
ಅವರುಗಳಿಗೆ ನಾನಾ ವಿಧವಾದ ಕಾಣಿಕೆಗಳನ್ನು
ನೀಡುವುದು, ಅವರಿಂದಲೂ ಸ್ವೀಕರಿಸುವುದು,
ತರಹೇವಾರಿ ಭಕ್ಷ್ಯ ಭೋಜನಗಳನ್ನು
ಮಾಡಿಸುವುದು, ಎಲ್ಲರೂ ಅಷ್ಟಿಷ್ಟು
ತಿನ್ನುವುದೂ, ಉಳಿದ ಆಹಾರ ತಟ್ಟೆಯಲ್ಲಿ
ಬಿಡುವುದು, ಅದನ್ನು ಯಥೇಚ್ಛವಾಗಿ
ಚೆಲ್ಲುವುದು, ಸಾವಿರಾರು, ಲಕ್ಷಾಂತರ ಹಣ
ನೀರಿನಂತೆ ಖರ್ಚು ಮಾಡುವುದು, ಇದೇ ಅವರ
ಅಭ್ಯಾಸವಾಗಿ ಹೋಗಿತ್ತು.

ಒಂದನೇ ಕಪಾಟಿನಲ್ಲಿ:
ತಮ್ಮ ಆತ್ಮೀಯ ಬಂಧುಗಳಿಗೆ :

ತಾವು ಬಳಸಲು ಏನೇನು ವಸ್ತುಗಳನ್ನು
ಕೊಳ್ಳುವರೋ ಅಥವಾ ವಿದೇಶಕ್ಕೆ ಹೋದಾಗ
ತಂದಂತಹ ವಸ್ತುಗಳು, ಬೇರೆ, ಬೇರೆ ರಾಜ್ಯದ
ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟಾಗ ತಂದ
ತರಹೇವಾರಿ ವಸ್ತುಗಳೇ ಹೇರಳವಾಗಿ ತುಂಬಿದ್ದವು,
ತುಂಬಾ ಬೆಲೆಬಾಳುವ ಉಡುಪುಗಳು, ಬಟ್ಟೆ-ಬರೆ,
ಮಾಲ್ ಗಳಲ್ಲಿ ಖರೀದಿಸಿದ ಹೊಸ, ಹೊಸ
ವಸ್ತುಗಳು, ಚಿನ್ನದ ಬೆಳ್ಳಿಯ ಒಡವೆಗಳು,
ಆಟಿಕೆಗಳು, ಹಣ, ಇನ್ನಿತರೇ ಆಡಂಬರದ
ವಸ್ತುಗಳು. ತಮ್ಮ ಘನತೆಗೆ ತಕ್ಕಂತೆ ನೀಡುವ
ವಸ್ತುಗಳು.

ಎರಡನೆಯದರಲ್ಲಿ: ಮೇಡಂ ಭೂಮಿ

ತಮ್ಮ ನೆಚ್ಚಿನ ಗೆಳೆಯ/ಗೆಳತಿಯರಿಗೆ:
ಅದರಲ್ಲಿ ಆ ಒಂದನೇ ಕಪಾಟಿನಲ್ಲಿ ಇಡಲು
ಇಷ್ಟವಾಗದ, ತುಂಬಾ ಬೆಲೆಬಾಳುವಂತಹವು.......
ಅದರಲ್ಲಿ ಊಟದ ಆಹಾರ ಪದಾರ್ಥಗಳು
ಇರಲಿಲ್ಲ, ಕೇವಲ ತಮ್ಮ ಘನತೆ
ತೋರಿಸಿಕೊಳ್ಳಲು, ಎಂಥಹ ವಸ್ತುಗಳು ಬೇಕೋ
ಅಂತಹ ವಸ್ತುಗಳನ್ನು ಮಾತ್ರ ಇಟ್ಟಿದ್ದರು, ಉದಾ.
: ಎಲ್ಲಾದರೂ ಪ್ರವಾಸಕ್ಕೆಂದು ಹೋದಾಗ ಕೊಂಡು
ತಂದ ತುಂಬಾ ಹೆಚ್ಚೆಚ್ಚು ಬೆಲೆಬಾಳುವ
ಉಡುಗೊರೆಗಳು, ಚಿತ್ರ ಪಟಗಳು, ಮಕ್ಕಳ
ಆಟಿಕೆಗಳು, ಇನ್ನಿತರ ಉಡುಗೊರೆ ವಸ್ತುಗಳು.

ಮೂರನೇ ಕಪಾಟಿನಲ್ಲಿ:

ಮನೆ ಕೆಲಸದವಳಿಗೆ/ಕಾರು ಚಾಲಕರು, ಮನೆಯ
ವಾಚ್ ಮನ್:

ಅದರಲ್ಲಿ ಇವೆರಡಕ್ಕಿಂತಲೂ ಕಡಿಮೆ
ದರ್ಜೆಯ ಆಹಾರ, ಆಹಾರ ಪದಾರ್ಥಗಳು, ಪಾತ್ರೆ
ವಸ್ತುಗಳು, ಇವರು ಉಟ್ಟು, ಮತ್ತೆ ಉಡಲು
ಬೇಜಾರಾದ ಉಡುಪುಗಳು, ಸೀರೆ, ರವಿಕೆಗಳು,
ಹಳೆಯ ಸೈಕಲ್, ಕುರ್ಚಿ, ಟೇಬಲ್, ಆಟದ
ವಸ್ತುಗಳನ್ನು.......ಹೀಗೆ ತಮಗೆ ಬೇಡವಾದ
ವಸ್ತುಗಳನ್ನು ಇದರಲ್ಲಿ ಇಡಲಾಗಿತ್ತು,

ನಾಲ್ಕನೆಯ ಕಪಾಟಿನಲ್ಲಿ :

ಮನೆ ಮನೆ, ರಸ್ತೆಯ ಕಸ ತೆಗೆಯುವವರಿಗೆ :
ಎಂದು ಬರೆಯಲಾಗಿತ್ತು, ಅದರಲ್ಲಿ ಬಿಕ್ಷುಕನಿಗೆ
ನೀಡಲು ಮನಸ್ಸು ಬಾರದಂತಹ, ತಾವು ಬಳಸಲು
ಇಷ್ಟವಾಗದ ಸ್ವಲ್ಪವೇ ಚೆನ್ನಾಗಿರುವ ಆಹಾರ
ಪದಾರ್ಥಗಳು, ಇತರೆ ವಸ್ತುಗಳನ್ನು ಅಂದರೆ
ಬಳಸದೇ ತುಂಬಾ ದಿನವಾಗಿರುವ ಆಹಾರದ ದಿನಸಿ

ಪದಾರ್ಥಗಳು, ಸ್ವಲ್ಪ ಬಣ್ಣ ಮಾಸಿರುವ ,
ಹರಿಯದ, ತುಂಬಾ ಚಿಕ್ಕದಾದ,

ತುಂಬಾ ದೊಡ್ಡದಾದ ಬಟ್ಟೆಗಳು, ಮುರಿದ ಪಾತ್ರೆ,
ಪಗಡೆ, ಕಸದ ತೊಟ್ಟಿಗೆ ಎಸೆಯಲು ಕೈ ಬಾರದೇ
ಇದ್ದಂತಹ ವಸ್ತುಗಳು.

ಐದನೆಯನೇ ಕಪಾಟಿನಲ್ಲಿ:
ಭಿಕ್ಷುಕರಿಗೆ: ಇದು ಈ ದಿನದ ಆಹಾರ ಪದಾರ್ಥಗಳು ,
ಅರಕಲು, ಮುರುಕಲು ಬಟ್ಟೆಗಳು ವಸ್ತುಗಳು
ಎಂದು ಬರೆಯಲಾಗಿತ್ತು,
ಆ ಮೇಲಿನ ನಾಲ್ಕೂ ಕಪಾಟುಗಳಲ್ಲಿ ಇಡಲು
ಯೋಗ್ಯವಲ್ಲದ, ಯಾರೂ ಬಯಸದ ವಸ್ತುಗಳು,
ಅಂದರೆ ಅವರುಗಳು ಪ್ರತೀದಿನ , ರಜಾದಿನಗಳಲ್ಲಿ
ಕಿಟ್ಟಿ ಪಾರ್ಟಿಯಲ್ಲಿ ತಿಂದು ತೇಗಿದ, ತಿನ್ನಲಾಗದೆ
ಬಿಸಾಡಿದ ಅಳಿದುಳಿದ ಆಹಾರ ಪದಾರ್ಥಗಳು
ಕೊನೆಯ ಕಪಾಟಿನಲ್ಲಿ ಇಟ್ಟು, ಅದು ಕೆಟ್ಟು ವಾಸನೆ
ಬಂದಿದ್ದರೂ ಸಹ, ಮರುದಿನ ಅದನ್ನು

ಬಡಬಗ್ಗರಿಗೆ, ದೀನದಲಿತರಿಗೆ ಕೊಡೋದು, ತಮ್ಮ
ಘನತೆಗೆ

ತಕ್ಕದಲ್ಲದ, ನೆಲ ಸ್ವಚ್ಛ ಮಾಡಲೂ
ಯೋಗ್ಯವಲ್ಲದ ಬಟ್ಟೆಬರೆಗಳು, ನಾನಾರೀತಿಯ
ವಸ್ತುಗಳನ್ನು ಭಿಕ್ಷುಕರಿಗೆ ಕೊಡುವುದು.

ಎಸೆಯುವುದು ಏನೇ ಇದ್ದರೂ ಅದನ್ನು ಆ ಐದನೇ
ಕಪಾಟಿನಲ್ಲಿಡುತ್ತಿದ್ದರು.

ಇದೇ ಅವರ ದಿನನಿತ್ಯದ ಆಚರಣೆಯಾಗಿತ್ತು.

ಆತನ ತಾಯಿ ಪ್ರತೀದಿನ ಅದೇ ಜನರಿಗೆ , ಅದೇ
ಕಪಾಟಿನಲ್ಲಿದ್ದ ವಸ್ತುಗಳನ್ನು ಕೊಡುತ್ತಿದ್ದರು,
ಅದನ್ನು ಯಾವಾಗಲೂ ಗಮನಿಸುತ್ತಿದ್ದ
ಮನೋಜ್ , ಪಾಪ ಭಿಕ್ಷುಕರೆಂದರೆ , ರಸ್ತೆ ಸ್ವಚ್ಛ
ಮಾಡುವವರೆಂದರೆ, ಮನೆಗೆಲಸದವರು

ಎಂದರೆ........ಅಮ್ಮನಿಗೆ ಎಲ್ಲಿಲ್ಲದ ಅಸಡ್ಡೆ,
ಆದರೆ ಗೆಳೆಯರು, ಸಂಬಂಧಿಕರು, ಅದರಲ್ಲೂ
ತಮ್ಮ ಸಮಾನವಾಗಿರುವವರು ಎಂದರೆ ಬಹಳ‌
ಇಷ್ಟ, ಆದರೆ ಮನೋಜನಿಗೆ ಎಲ್ಲರೂ ಒಂದೇ
ಎಂಬ ಭಾವನೆ,

ಹೀಗೆ ಹಂತಹಂತವಾಗಿ ವಿಂಗಡಣೆ ಮಾಡಿ ಅವರವರ
ಯೋಗ್ಯತೆಗೆ ತಕ್ಕದಾಗಿ ಆ ವಸ್ತುಗಳನ್ನು ಅದೇ
ಕಪಾಟಿನಲ್ಲಿ ಬೇರ್ಪಡಿಸಿ ಇಟ್ಟು ಆ ದಿನ ಅವರವರಿಗೆ
ಆ ವಸ್ತುಗಳನ್ನು ಕೊಡುತ್ತಿದ್ದರು. ಅದರಲ್ಲೂ
ಭಿಕ್ಷುಕರಿಗೆ ಅಂತ ಕೂಡಿಟ್ಟಿದ್ದ ಆಹಾರವು ತುಂಬಾ
ಹಳಸಿದ ವಾಸನೆ ಬಂದು ಅದು ನಾಯಿಗಳೂ
ತಿನ್ನಲೂ ಅಸಹ್ಯಪಟ್ಟುಕೊಳ್ಳುತ್ತಿದ್ದ
ಆಹಾರವಾಗಿರುತ್ತಿತ್ತು, ಇನ್ನು ಬಟ್ಟೆಗಳಂತೂ ನೆಲ
ಸ್ವಚ್ಛ ಮಾಡಲೂ ಬಳಸಲು, ಕೈಯಿಂದ ಮುಟ್ಟಲು
ಆಗದಂಥಹವು.

ಇದನ್ನೆಲ್ಲಾ ವಿರೋಧಿಸುತ್ತಿದ್ದ ಮನೋಜ್
ಪ್ರತಿದಿನ ಅಮ್ಮನ ಈ ಒಡೆದು ಆಳುವ ನೀತಿಗೆ
ತುಂಬಾ ರೋಸಿ ಹೋಗಿದ್ದು ಬೆಳೆಯುವ ಮುಗ್ಧ
ಮಗುವಿನ ಮನಸ್ಸಿನ ಮೇಲೆ ತುಂಬಾ ಪರಿಣಾಮ
ಬೀರತೊಡಗಿತ್ತು.
ಆಗಾಗ ತನ್ನ ಅಮ್ಮನಲ್ಲಿ ಈ ವಿಚಾರವಾಗಿ
ಪ್ರಶ್ನೆಗಳನ್ನು ಕೇಳುತ್ತಿದ್ದ, ಆದರೆ ಆಕೆಯಿಂದ
ಸರಿಯಾದ ಉತ್ತರ ದೊರಕದೆ ಈ ವಿಚಾರವಾಗಿ ತನ್ನ
ತಂದೆ ಯೊಂದಿಗೂ ಚರ್ಚಿಸುತ್ತಿದ್ದನು.

ತನ್ನ ತಾಯಿ ಮನೆಯಲ್ಲಿ ಇಲ್ಲದಿದ್ದಾಗ
ಮನೋಜ್ ಒಬ್ಬನೇ ಇದ್ದಾಗ ಯಾರಾದರೂ
ಭಿಕ್ಷುಕರು ಬಿಕ್ಷೆಬೇಡಿ ಬಂದರೆ ಅವರಿಗೆಂದು
ಮೀಸಲಿಟ್ಟಿದ್ದ ಕಪಾಟಿನಲ್ಲಿದ್ದ ಹಳೆಯ, ಮಾಸಿದ
ಬಟ್ಟೆಗಳು ಹಾಗೂ ಹಳಸಿದ ಊಟದ ಬದಲಾಗಿ
ಒಳ್ಳೆಯ ವಸ್ತುಗಳಿದ್ಧ ಕಪಾಟಿನ ವಸ್ತುಗಳನ್ನೇ,

ಅಡುಗೆ ಮನೆಯಲ್ಲಿದ್ದ ಬಿಸಿ, ಬಿಸಿ ಆಹಾರವನ್ನೇ
ಕೊಟ್ಟುಬಿಡುತ್ತಿದ್ದ, ಅಥವಾ ರಸ್ತೆ ಕಸಗುಡಿಸಿ

ಸ್ವಚ್ಛ ಮಾಡುವ ಮಂದಿಗೆ....ಸಂಬಂಧಿಕರು ಅಥವಾ
ಸ್ನೇಹಿತರಿಗೆ ಕೊಡುವ ಬೆಲೆಬಾಳುವ ವಸ್ತುಗಳನ್ನು
ಕೊಟ್ಟು ಕಳುಹಿಸುತ್ತಿದ್ದ, ಅಲ್ಲದೇ ಎಲ್ಲಾ
ಅತ್ಯುತ್ತಮ ವಸ್ತುಗಳು ಸಾಮಾನ್ಯ ಜನರಿಗೂ
ಸಿಗುವಂತೆ ನೋಡಿಕೊಂಡಿರುತ್ತಾ ತನ್ನ ತಾಯಿ ಈ
ಮೇಲು ಕೀಳಿನ ಬುದ್ಧಿಯಿಂದ ಹೊರಬಂದು
ಎಲ್ಲರನ್ನೂ ಸಮಾನವಾಗಿ ನೋಡಬೇಕೆಂಬುದೇ
ಮನೋಜನ ಆಸೆ, ಅದರಂತೆ ಕಪಾಟುಗಳ
ವಸ್ತುಗಳನ್ನು ಕಲಸುಮೇಲೊಗರದಂತೆ ಬದಲಾಯಿಸಿ
ಬಡವರಿಗೆ, ರಸ್ತೆ ಕಸಗುಡಿಸುವವರಿಗೆ,
ಮನೆಗೆಲಸದವರಿಗೆ ಅತ್ಯುತ್ತಮ ವಸ್ತುಗಳು
ಸಿಗುತ್ತಿದ್ದವು.

ಈ ಕೆಲಸಕ್ಕೆ ಮನೋಜನ ತಂದೆಯಿಂದ
ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು ಆದರೆ
ಅವನ ತಾಯಿ ಮಾತ್ರ ತುಂಬಾ ಕೋಪಗೊಂಡು

ಎಷ್ಟೋ ಬಾರಿ ಮನೋಜನಿಗೆ ಏಟುಗಳನ್ನು
ಕೊಡುತ್ತಿದ್ದಳು.

ಆದರೆ ಅವನ ಧ್ಯೇಯ ಒಂದೇ......ಈ
ಜನರೆಲ್ಲರನ್ನೂ ಒಂದೇ ತರಹ ಭಾವಿಸಬೇಕೆಂದು,
ಅವನಿಗೆ ಇಬ್ಬಗೆಯ ನೀತಿ ಅನುಸರಿಸುವುದು, ಬಡವ,
ಶ್ರೀಮಂತ, ಸಂಬಂಧಿಕರು, ಆಪ್ತ ಗೆಳೆಯರು,
ಆಳುಗಳು, ಅಧಿಕಾರಿಗಳು, ಮೇಲು ಕೀಳು ಎಂಬ
ಭಾವನೆ ಇರಬಾರದು ಎಂಬುದೇ ಅವನ
ಧ್ಯೇಯವಾಗಿತ್ತು
ಆದರೆ ಆತನ ತಾಯಿ ಪ್ರತಿಯೊಬ್ಬರನ್ನೂ ಅವರವರ
ಯೋಗ್ಯತೆಗನುಸಾರವಾಗಿ ಬೇರ್ಪಡಿಸಿ ಅವರಿಗೆ
ಎಷ್ಟು ಮರ್ಯಾದೆ ಸಲ್ಲಬೇಕೋ ಅಷ್ಟಷ್ಟೇ
ಮರ್ಯಾದೆ ಕೊಡುತ್ತಿದ್ದರು.

ಇದರಿಂದ ಆ ವಠಾರದಲ್ಲಿ ಮನೋಜ್ ನನ್ನು
ಕೆಳವರ್ಗದ, ಮಧ್ಯಮವರ್ಗದ ಅಸಹಾಯಕರು,
ಕಾರ್ಮಿಜನ ತುಂಬಾ ಪ್ರೀತಿಯಿಂದ
ಕಾಣತೊಡಗಿದರು. ಹಾಗೂ ಅವರುಗಳಿಗೆ ಒಳ್ಳೆಯ
ವಸ್ತುಗಳು

ಹೇರಳವಾಗಿ ಸಿಗುತ್ತಿದ್ದುದರಿಂದ ಪ್ರತಿದಿನ ಸಹಾಯ
ಬೇಡಿ ಬರುವವರ ಸಂಖ್ಯೆ ದ್ವಿಗುಣವಾದಂತೆ ಆತನ
ತಂದೆ ಸಹ ಮನೋಜ್ ನ ಕೈ ಬಲಪಡಿಸಿ ಸಹಾಯ
ಮಾಡತೊಡಗಿದರು. ಮನೋಜ್ ಬೆಳೆಯುತ್ತಾ
ಹೋದಂತೆ ಅವನ ಸಾಮಾಜಿಕ ಕಳಕಳಿ ಮತ್ತಷ್ಟು
ಹೆಚ್ಚಾಗಿ, ಯಾರೂ ಬಾಯಿಯಲ್ಲಿ ನೋಡಿದರೂ
ಮನೋಜನ ಹೆಸರು ಕೇಳಿಬರತೊಡಗಿದಂತೆ
ಇದೆಲ್ಲವನ್ನೂ ಗಮನಿಸುತ್ತಿದ್ದ ಅವನ
ಹೆತ್ತವರಿಗೂ ಖುಷಿಯಾದ ವಿಚಾರವಾಯಿತು.
ಆತನ ತಾಯಿಗೆ ಸಹ ಆಗ ಅರ್ಥವಾಯಿತು,
ನಾವುಗಳು ಸಮಾಜದಲ್ಲಿ ಎಲ್ಲರನ್ನೂ
ಸಮಾನವಾಗಿ ಕಾಣಬೇಕು, ಎಂದರಿತು, ಇವನ
ದಾರಿಗೆ ಬಂದು ಸಮಾಜದಲ್ಲಿ ಬಡವ, ಶ್ರೀಮಂತ,
ಧನಿಕ ಭಿಕ್ಷುಕ , ಕೆಲಸಗಾರ, ಮಾಲೀಕ ಎಂಬ
ಭೇದಭಾವ ಮಾಡದೆ ಎಲ್ಲರನ್ನೂ ಸಮಾನವಾಗಿ
ಕಾಣತೊಡಗಿದರು. ಇದರಿಂದ ಮನೋಜನಿಗೆ
ತುಂಬಾ

ಸಂತೋಷವಾಯಿತು.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ
ನಾಣ್ಣುಡಿ ಯಂತೆ, ಮನೋಜನು ಕಾಲ ಕ್ರಮೇಣ
ಬೆಳೆದಂತೆ ಅವನ ಕೆಲಸಕಾರ್ಯಗಳೂ
ಬೆಳೆಯತೊಡಗಿದವು, ಕೈಲಾಗದವರನ್ನು,
ಸಶಕ್ತರನ್ನು , ಸಮಾಜದ ಕೆಳಮಟ್ಟದ ಜನರನ್ನು
ಗುರುತಿಸಿ, ಅವರೊಡನೆ ಬೆರೆಯುತ್ತಾ ಅವರನ್ನು
ಸಮಾಜದ ಮುಖ್ಯವಾಹಿನಿಗೆ ತರಲು
ಪಣತೊಟ್ಟನು.

ನೀತಿ: ಸಮಾಜದಲ್ಲಿ ಕೇವಲ ನಾವು ಬೆಳೆದರೆ
ಸಾಲದು, ನಮ್ಮ ಅಕ್ಕ ಪಕ್ಕದಲ್ಲಿ ಇರುವ
ಸಾಮಾನ್ಯ ವರ್ಗದ ಜನರು ಸಮಾಜದಲ್ಲಿ
ಇತರರಂತೆ ಬೆಳೆಯಲು ಪ್ರೇರೇಪಿಸುವುದೇ ನಮ್ಮ
ಕರ್ತವ್ಯವಾಗಿದೆ.

- ರಾಜೇಂದ್ರ ಕುಮಾರ್ ಗುಬ್ಬಿ
ಕನಸುಗಳ ಕಥೆಗಾರ