ನನ್ನ ಚಿನ್ನುಳ ಸರಸ ವಿರಸಗಳು : ಪ್ರವಾಸಿ | ಹಾಸ್ಯ ಕತೆ | ಕತೆಯ ಒಳನುಡಿ ಶೈಲಿ - ಶಿಷ್ಟ ಸ್ವರೂಪದ ಕನ್ನಡ | ಯಾವ ದನಿಯಲ್ಲಿ ಆಡಿಯೋ ಕತೆಯಾಗಬೇಕು ಅನ್ನುವ ಕುರಿತು ಲೇಖಕರ ಆಯ್ಕೆ: ಗಂಡು ಧ್ವನಿ
ನನ್ ಚಿನ್ನು ಅಂದ್ರೆ ಸುಮ್ನೆ ನಾ? ತುಂಬಾ ಜಾಣೆ ಅವಳು. ಅವಳು ಕೂಡಾ ಒಬ್ಬ ಸಾಮಾನ್ಯ ಹೆಣ್ಣೇ. ಆದರೆ ಅವಳ ಲೋಕ ಜ್ಞಾನ ಅಪಾರ. ಜನರನ್ನು ಹಾಗೂ ಜಗತ್ತನ್ನು ನೋಡುವ ಅವಳ ಒಳಗಣ್ಣು ಅರ್ಥಗರ್ಭಿತ. ಅವಳ ಒಂದೊಂದು ಮಾತು ಹಸಿ ಸಿಮೆಂಟ್ ಗೋಡೆಗೆ ಉಸುಕಿನ ಹಳ್ಳ ಹೊಡೆದಂತೆ. ಗಟ್ಟಿಯಾಗಿ ಅಂಟಿಕೊಂಡು ಬಿಡುತ್ತವೆ ಮನಸ್ಸಿಗೆ.
ನಾನು ಈ ವೇದಿಕೆಯಲ್ಲಿ ತುಂಬಾ ಹೊತ್ತು ಬರೆಯಲು ಅಥವಾ ಓದಲು ಕುಳಿತಾಗ ಒಳಗಡೆ ಪಾತ್ರೆ ಪಗಡೆಗಳು
ಚಿನ್ನುಳ ಸಿಟ್ಟಿನಿಂದ ನೆಲಕ್ಕೆ ಅಪ್ಪಳಿಸುತ್ತಳೋ ಕೈಯಿಂದ ಜಾರುತ್ತಲೋ ಇರುತ್ತವೆ.
ಹೀಗೆ ಸಾಗುತ್ತಲೇ ಇರುತ್ತದೆ ಈ ಪ್ರಹಸನ ನಾನು ಒಳಗೆ ಹೋಗಿ ಬರುವವರೆಗೂ.
ನಾನು ನಗುತ್ತಾ ಒಳಹೋಗಿ ಆ ಪಾತ್ರೆಗಳನ್ನೆಲ್ಲ ಎತ್ತಿಕೊಂಡು" ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ ಮಹಾರಾಣಿಯ ಹಾಗೆ "ಅಂತ ನಗುತ್ತಾ ಹಾಡಿದಾಗ ಚಿನ್ನುಳ ಕೋಪ ಮಂಗಮಾಯ ಆಗುತ್ತದೆ. ಇದು ಅವಾಗಾವಾಗ ನಡೆಯುವ ನನ್ನ ಚಿನ್ನುಳ ಪ್ರಹಸನ.
ಈಗಂತೂ ಕರೊನಾ ಕೃಪೆಯಿಂದಾಗಿ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದೇನೆ ವರ್ಕ್ ಫ್ರಮ್ ಹೋಮ. ಇದರಿಂದಾಗಿ ಅವಳಿಗೆ ಕೆಲಸ ತುಂಬಾ ಹೆಚ್ಚಾಗಿದೆ. ನನಗೆ ಯಾವಾಗ ಬೇಕೋ ಆವಾಗ ಚಹಾ -ಕಾಫಿ, ತಿಂಡಿ ತೀರ್ಥಗಳನ್ನು ಹೇಳಿದಾಗ ಬೇಜಾರಿಲ್ಲದೆ ತಂದು ಕೊಡುವಳು ನನ್ನ ಚಿನ್ನು. ಆದರೆ ಒಮ್ಮೊಮ್ಮೆ ಮಾಡಿ ಮಾಡಿ ಬೇಜಾರಾದಾಗ ಈ ತರಹ ಪಾತ್ರೆ-ಪಗಡಗಳ ಆಟಾಟೋಪ ಶುರುವಾಗುತ್ತದೆ ಅಡಿಗೆಮನೆಯಲ್ಲಿ. ಆದರೂ ನಾನು ಈಗ ಅವಳ ಮಗ್ಗುಲಲ್ಲೇ ಕುಳಿತುಕೊಂಡು ಕೆಲಸ ಮಾಡುತ್ತಿರುವುದು ಅವಳಿಗೆ ತುಂಬಾ ಸಂತೋಷ ತಂದಿದೆ. ನನ್ನ ತೊಡೆಯ ಮೇಲೆ ತಲೆಯಿಟ್ಟು ಮಲಗಿ ಅದು ಇದು ಹರಟುತ್ತಲೇ ಇರುತ್ತಾಳೆ ನಾನು ಕೇಳಲಿ ಕೇಳದಿರಲಿ. ಸಾಫ್ಟ್ವೇರ್ ಕಂಪನಿಯ ಮೀಟಿಂಗ್ ಸುರುವಾಗುವಾಗ ನಾನು ಅವಳನ್ನು ಹೇಗೋ ರಮಿಸಿ ಇನ್ನು ಒಂದು ತಾಸು ನೀನು ಕೋಣೆಯ ಒಳಗೆ ಬರಬೇಡ. ನಾನು ಬಾಗಿಲು ಹಾಕಿಕೊಳ್ಳುವೆ ಅಂತ ಸಾಗ ಹಾಕಲು ನೋಡಿದಾಗ,ಸಿಟ್ಟಿನಿಂದ ಮೂಗೂ ಮುರಿಯುತ್ತಾ ಹೊರಗೆ ಹೋಗುತ್ತಾಳೆ .
ಈ ಕಂಪನಿಯವರು ಕೂಡ ಹಾಗೆ ಮಾಡುತ್ತಿದ್ದಾರೆ ಈಗೀಗ. ಕರೋನಾ ಬರುವುದಕ್ಕಿಂತ ಮುಂಚೆ
ಆಫೀಸಿಗೆ ಹೋಗಿ ಎಷ್ಟು ಕೆಲಸ ಮಾಡುತ್ತಿದ್ದೇವೋ ಅದರ ಎರಡು-ಮೂರು ಪಟ್ಟು ಕೆಲಸ ಹೆಚ್ಚಿಗೆ ಕೊಟ್ಟು ಜೀವ ತಿನ್ನುತ್ತಿದ್ದಾರೆ ನಮ್ಮದು. ಒಂದೊಂದು ಸಲ ರಾತ್ರಿ 10:30 ಗಂಟೆವರೆಗೂ ಕೆಲಸ ಮಾಡಲು, ಮೀಟಿಂಗ್ ಇಟ್ಟುಕ್ಕೊಂಡು ನಮ್ಗೆ ಸಾಕು ಸಾಕು ಮಾಡಿಬಿಟ್ಟಿದ್ದಾರೆ. ಕರ್ಮ ನಮ್ಮದು. ಈ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು!
ಒಂದೊಂದು ಸಲ ರಾತ್ರಿ ತುಂಬಾ ಲೇಟ್ ಆಗಿ ಕೆಲಸ ಮುಗಿದಾಗ ನಾನು ಬರೋವರೆಗೂ ಊಟ ಮಾಡುವುದಿಲ್ಲ ನನ್ನ ಚಿನ್ನು. ಅವಳಿಗೆ ನನ್ನ ಜೊತೆಗೆ ಊಟ ಮಾಡಿದರೆ ಮಾತ್ರ ಊಟ ರುಚಿಸುವುದು. ತುಂಬಾ ತುಂಬಾ ತೃಪ್ತಿ ನನ್ನ ಜೊತೆ ಊಟ ಮಾಡಿದರೆ. ನನ್ನ ಈ ಸಾಫ್ಟ್ವೇರ್ ಕೆಲಸ ಮುಗಿಯುವುದನ್ನೇ ಕಾಯುತ್ತಿರುತ್ತಾಳೆ. ಊಟ ಮಾಡಲು ನನ್ನ ಜೊತೆಗೇನೆ. ನನ್ನ ಕೆಲಸ ಮುಗಿದ ಕೂಡಲೇ ಊಟಕ್ಕೆ ಕರೆದು ಡೈನಿಂಗ್ ಟೇಬಲ್ನಲ್ಲಿ ಇಬ್ಬರಿಗೂ ಊಟ ರೆಡಿ ಮಾಡುತ್ತಾಳೆ. ಇಂತಹ ಸುಂದರ
ಮನಸ್ಸಿನವಳು ನನ್ನ ಈ ಚಿನ್ನು. ಒಮ್ಮೊಮ್ಮೆ ಈ ಕಂಪನಿ ಅವರು ತುಂಬಾ ಲೇಟ್ ಮಾಡಿ ನನಗೆ ಕೆಲಸದಿಂದ ಮುಕ್ತಿ
ಕೊಟ್ಟಾಗ, ನಮ್ಮ ಪ್ರೋಜೆಕ್ಟ್ ಮ್ಯಾನೇಜರ್ನ ಹೆಣ ಎತ್ತಿ ಬಿಡುತ್ತಾಳೆ.
"ಅವನಿಗೆ ಗೊತ್ತಾಗುವುದಿಲ್ಲವೇ ಇತ್ತೀಚಿಗೆ ನಾವು ಲಗ್ನವಾಗಿದ್ದು ಅಂತ? ಎಲ್ಲರಿಗೂ ಮದುವೆ ಆಮಂತ್ರಣ ಕೊಟ್ಟಿದ್ದೀರಲ್ಲ. ಅವನಿಗೆ ಸರಿ ಹೇಳಿ ನೀವೇನು ಹೊಸದಾಗಿ ಕೆಲಸಕ್ಕೆ ಸೇರಿಲ್ಲ ಕಂಪನಿಗೆ. ನಿಮ್ಮದು ಹತ್ತು ವರ್ಷ ಕತ್ತೆಯ ಕೆಲಸವಾಗಿದೆ( ನನಗೆ ಇಂಡೈರೆಕ್ಟ್ ಆಗಿ ಉಗಿಯುವದನ್ನು ನೋಡಿ ) ಈ ಸಾಫ್ಟ್ ವೇರ್ ಉದ್ಯೋಗದಲ್ಲಿ .
ಬಿಟ್ಟುಬಿಡಿ ಈ ಕಂಪನಿ. ಇಂಥ ಕೆಲಸ ನನಗೆ ಬೇಕಾಗಿಲ್ಲ. ಆರಾಮ್ ಇರಬೇಕು ನಾವಿಬ್ಬರೂ ಇಲ್ಲಿ. ಬರೀ ಕೆಲಸ, ಕೆಲಸ ಅಂದರೆ ಹೇಗೆ? ನಿಮ್ಮ ಪ್ರೊಜೆಕ್ಟ್ ಮ್ಯಾನೇಜರಿಗೆ ಹೆಂಡತಿ-ಮಕ್ಕಳು ಇಲ್ಲವೇ? ಅಂತ ಅವನ ಜನ್ಮ ಜಾಲಾಡುತ್ತಾಳೆ. "
" ಲೆ ಚಿನ್ನು ಕೆಲಸ ಬಿಟ್ಟರೆ ಹೊಟ್ಟೆ ಹೇಗೆ ತುಂಬುವುದು? ಅಂದರೆ, " ಹುಟ್ಟಿಸಿದ ದೇವರು ಹುಲ್ಲು ತಿನ್ನಿಸುತ್ತಾನೆಯೇ? ಏನಾದರೂ ಬೇರೆ ಕೆಲಸ ಮಾಡೋಣ ಬಿಡಿ. ಎಲ್ಲರೂ ನಿಮ್ಮ ಹಾಗೆ ಕೈತುಂಬಾ ಸಂಬಳ ಪಡೆಯುತ್ತಾರೆಯೇ? ಹತ್ತು-ಹನ್ನೆರಡು ಸಾವಿರದಲ್ಲಿ ಸಂಸಾರ ಮಾಡುತ್ತಾರೆ. ಅಂತಹ ಕೆಲಸ ಸುರು ಮಾಡೋಣ ಅಂತ ಧೈರ್ಯದ ಜೊತೆಗೆ ಸ್ವಲ್ಪ ಬುದ್ಧಿ ಮಾತು ಹೇಳುತ್ತಾಳೆ . ಒಮ್ಮೊಮ್ಮೆ ನನಗೂ ಕೂಡ ಹಾಗನಿಸಿದೆ.
" ಇ ಸಾಫ್ಟ್ವೇರ್ ಕ್ಷೇತ್ರಕ್ಕೆ ಏಕೆ ಬಂದೆ ನಾನು? ಸುಮ್ಮನೆ ಯಾವುದಾದರೂ ಬ್ಯಾಂಕಲ್ಲಿ ಆಫೀಸರ ಅಂತ ಸೇರಿಕೊಂಡಿದ್ದರೆ ಒಳ್ಳೆಯದಾಗುತ್ತಿತ್ತೋ ಏನೋ" ಅಂತ ಎಷ್ಟೋ ಸಾರಿ ಅನಿಸಿದೆ.
ಈ ಕೋಡಿಂಗ್ ಬರೆಯುವುದು ಚೆನ್ನಾಗಿಯೆ ಮಾಡಿದರೂ ಕೂಡ ಈ ಟೆಸ್ಟಿಂಗ್ ಮಾಡುವವರು
ಒಮ್ಮೊಮ್ಮೆ ಸರಿಯಾಗಿ ಅದನ್ನು ಮಾಡದೆ ಬಿಟ್ಟು ಬಿಡುತ್ತಾರೆ. ಆಗ ಆ app
ವರ್ಕ್ ಆಗದಿದ್ದರೆ ನಮ್ಮದೇ ತಲೆ ತಿನ್ನುತ್ತಾರೆ ಈ ಪ್ರಾಜೆಕ್ಟ್ ಮ್ಯಾನೇಜರ್. ಒಮ್ಮೊಮ್ಮೆ ಈ ಸಪೋರ್ಟ್ ಟೀಮ್ ನವರು ಕೂಡ ಏನೇನೋ ಬಗ್ಸ್ ಫಿಕ್ಸ್ ಮಾಡಿ ನಮಗೇನೇ ನಾಜೂಕಾಗಿ ಸರಿ ಪಡಿಸಲು ಹೇಳಿ ಬಿಡುತ್ತಾರೆ. ಆಗ ಈ ಪ್ರಾಜೆಕ್ಟ್ ಮ್ಯಾನೇಜರ್ ಏನೇನೋ ಮಾತನಾಡುತ್ತಾನೆ. ತಲೆ ಕೆಟ್ಟು ಕರ ಕರ ಕೆರೆದುಕೊಳ್ಳುವಂತೆ ಮಾಡಿ ಬಿಡುತ್ತಾನೆ.
ಆದರೆ ನಮ್ಮ ಕಂಪನಿಯ ಸ್ಥಾಪಕರಿಗೆ ನಾನೆಂತಹ ಪರ್ಫೆಕ್ಟ್ ಕೆಲಸಗಾರ ಅಂತ ಗೊತ್ತಿರುವುದರಿಂದ ಮತ್ತು ಅವರು ನನಗೆ ತುಂಬಾ ಗೌರವ ಕೊಡುತ್ತಿದ್ದುದರಿಂದ ಇವನ್ನೆಲ್ಲ ಒಮ್ಮೊಮ್ಮೆ ಸಹಿಸಿಕೊಳ್ಳಬೇಕಾಗುತ್ತದೆ. ಅತಿ ಮಿತಿ ಮೀರಿದಾಗ ನಮ್ಮ ಕಂಪನಿಯ ಸ್ಥಾಪಕರಿಗೆ ಡೈರೆಕ್ಟ ಆಗಿ ನಾನೇ ಭೇಟಿಯಾಗಿ ಈ ಪ್ರಾಜೆಕ್ಟ್ ಮ್ಯಾನೇಜರ್ ವಿರುದ್ಧ ಕೆಂಡ ಕಾರುತ್ತೇನೆ.ಆಗ ನಮ್ ಬಾಸ್ ಅವನಿಗೆ ತಿಳಿಹೇಳಿ ಅವನನ್ನು ಸುಮ್ಮನೆ ಕೂಡಿಸುತ್ತಾರೆ, ಇದು ನಾನು ಎಲ್ಲ ಕಂಪನಿಗಳಲ್ಲಿಯೂ ಪಾಲಿಸಿಕೊಂಡು ಬಂದ ಒಂದು ಯೋಗ್ಯತೆ. ಅದಕ್ಕೆ ನಾನು ಒಂದು ಸಾಫ್ಟ್ವೇರ್ ಕಂಪನಿಯಲ್ಲಿ ಒಂದು ವರ್ಷ ಅಥವಾ ಒಂದುವರೆ ವರ್ಷಕ್ಕಿಂತ ಹೆಚ್ಚಿಗೆ ಕೆಲಸ ಮಾಡುವುದಿಲ್ಲ. ಬೇರೆ ಕಂಪನಿಗೆ ಶಿಫ್ಟ್ ಆಗಿ ಹೋಗಿ ಬಿಡುತ್ತೇನೆ.
"ಯೋಗ್ಯತೆ ಇರುವ ಮನುಷ್ಯ ಎಲ್ಲಿಯೂ ಬದುಕುತ್ತಾನೆ "ಎಂಬುದು ನನ್ನ ಸಿದ್ಧಾಂತ!
ನನ್ನ ಚಿನ್ನುಗೆ ಅದಕ್ಕೇನೆ ನಾನು ತುಂಬಾ ಅಚ್ಚುಮೆಚ್ಚು. ನನ್ನ ಕೆಲಸದ ಅಚ್ಚುಕಟ್ಟುತನ, ಗಟ್ಟಿತನ ಇವೆಲ್ಲವೂ ಅವಳಿಗೆ ಗೊತ್ತು . ನಮಗೆ ಕಂಪನಿಯವರು "ಎಷ್ಟು ಸಂಬಳ ಕೊಡುತ್ತಾರೆಯೋ ಅಷ್ಟಕ್ಕಾದರೂ ನಾವು ನ್ಯಾಯ ಸಲ್ಲಿಸಲೇಬೇಕು" ಎಂಬ ನಿಲುವು ಅವಳದ್ದು. ಅವಳು ಕೂಡ ಸಾಫ್ಟ್ವೇರ್ ಇಂಜಿನಿಯರಿಯೇ . ಆದರೆ ನನ್ನ ಸಂಬಳಕ್ಕೆ ಅವಳ ಸಂಬಳಕ್ಕೂ ತುಂಬಾ ತುಂಬಾ ವ್ಯತ್ಯಾಸ.
ಲಗ್ನವಾಗಿ ಹೊಸತಾಗಿ ಬಂದ ಒಂದು ತಿಂಗಳಿಗೆ ಅವಳು ನನ್ನ ಸಂಬಳ ಎಷ್ಟು ಅಂತ ಕೇಳಿದಾಗ, ಕಾಡಿಸಿ ಪಿಡಿಸಿ ಅವಳಕ್ಕಿಂತ ಕಮ್ಮಿ ಅಂತ ಹೇಳಿದ್ದೆ. ಕೊನೆಗೂ ಅವಳು ತನ್ನ ಮೇಲೆ ಆಣೆ ಹಾಕಿ ನನ್ನ ಸಂಬಳ ಎಷ್ಟು ಅಂತ ಕೇಳಿದಾಗ ಅನಿವಾರ್ಯವಾಗಿ ನನ್ನ ಪೇಸ್ಲಿಪ್ ತೋರಿಸಿದಾಗ ಅವಳು ಹೌಹಾರಿ ಬೆಚ್ಚಿ ಬಿದ್ದಿದ್ದಳು. ಎರಡು ದಿನ ಅವರ ಅಪ್ಪ ಅಮ್ಮನ ಮುಂದೆ ನನ್ನ ಸಂಬಳದ ಪ್ರಚಾರ ಮಾಡಿಬಿಟ್ಟಿದ್ದಳು ಡಂ ಡಂ ಡಂಗುರ ಹೊಡೆದು ಬಿಟ್ಟಿದ್ದಳು.