Click here to Download MyLang App

ಡಾ."ಅಂಬೆಗಾಲು" ಅರುಣಾ ದೇವಿ : ರಾಜೇಂದ್ರ ಕುಮಾರ್ ಗುಬ್ಬಿ | ಸಾಮಾಜಿಕ | ಕತೆಯ ಒಳನುಡಿ ಶೈಲಿ - ಶಿಷ್ಟ ಸ್ವರೂಪದ ಕನ್ನಡ |

ಡಾll "ಅಂಬೆಗಾಲು" ಅರುಣಾ ದೇವಿ.........

 

     ಅರುಣಾ ದೇವಿ.....ಎಂದರೆ   ಈ ಹೆಸರಿನವರು ಊರಿನಲ್ಲಿ ಸಾವಿರಾರು ಜನರಿದ್ದಾರೆ,

ಡಾll ಅರುಣಾ ದೇವಿ......ಎಂದರೂ ಸುಮಾರು ಜನರಿದ್ದಾರೆ ಅವರ ಹೆಸರಿನವರು. ಆದರೆ........

ಡಾll ಅಂಬೆಗಾಲು ಅರುಣಾ ದೇವಿ....... ಎಂದರೆ ಬಹುಶಃ ಇಡೀ ಭಾರತಕ್ಕೆ ಇವರು ಒಬ್ಬರೇ ಒಬ್ಬರು ಇರುವುದು.

     ಇವರೇ ಕನ್ನಡದ ಖ್ಯಾತ ಬರಹಗಾರ್ತಿ, ಕವಿಯಿತ್ರಿ, ಸಾಹಿತಿ, ತಾಯಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.

 

        ಅವರಿಗೆ ಈಗ ಎಪ್ಪತ್ತೈದರ ಹರೆಯ, ಈಗಲೂ ಅವರು ಕುಳಿತಿರುವ ಕುರ್ಚಿ, ಮೇಜಿನ  ಸುತ್ತಲೂ ಇಡೀ ವಿಶ್ವದ ಖ್ಯಾತ ಬರಹಗಾರರು ಬರೆದ ಎಲ್ಲಾ ರೀತಿಯ, ಎಲ್ಲಾ ಭಾಷೆಯ  ಪುಸ್ತಕಗಳು, ಬರಹಗಳೇ ತುಂಬಿರುತ್ತವೆ, ಈಗಲೂ ಅವರು ಕನ್ನಡಕವನ್ನು ಉಪಯೋಗಿಸುವುದಿಲ್ಲ, ಪ್ರತಿದಿನ ಬೆಳಿಗ್ಗೆ ಐದು ಗಂಟೆಗೆ ಏಳುವ ಇವರು ಮಲಗುವುದಂತೂ ಯಾವುದೇ ಇಂತಿಷ್ಟು ಅಂತ ಸಮಯವಿಲ್ಲ, ಅವರು

 

ತಮ್ಮ

 ಯಾವಾಗಲಾದರೂ ಯಾವುದಾದರೊಂದು ಪುಸ್ತಕವನ್ನು ಓದುತ್ತಿರುತ್ತಾರೆ ಅಥವಾ ಯಾವುದಾದರೊಂದು ವಿಷಯದ ಬಗ್ಗೆ ಲೇಖನಗಳನ್ನು ಬರೆಯುತ್ತಿರುತ್ತಾರೆ. ಇದು ಅವರ ಈ ಹತ್ತು, ಹದಿನೈದು ವರುಷಗಳಿಂದ ನಡೆದುಕೊಂಡು ಬಂದ ದಿನಚರಿ.

      ಇವರ ಈ ಆರೋಗ್ಯಕರ ನಡೆಗೆ  ಅವರ ಇಬ್ಬರು ಗಂಡುಮಕ್ಕಳೂ ಅವರ ಹೆಂಡತಿಯರು ಹಾಗೂ ಅವರ ಮಕ್ಕಳು ಕಾರಣ....... ಅವರುಗಳು ಯಾವಾಗಲೂ ದೇಶ, ವಿದೇಶ  ಅಂತ ಪ್ರವಾಸಕ್ಕೆ ಹೋಗುತ್ತಿರುತ್ತಾರೆ, ಇವರನ್ನು ಕೇಳದೆ ಇವರಿಗೂ ಹೇಳದೇ..........ಇವರ ಸಹಾಯಕ್ಕೆಂದು ಒಬ್ಬ ಸಹಾಯಕಿಯನ್ನು ಇವರೊಡನೆ ಬಿಟ್ಟು.

 

       ಹೀಗೇ ಒಂದು ದಿನ ಅರುಣಾ ದೇವಿಯವರನ್ನು ಬಿಟ್ಟು ಎಲ್ಲರೂ ವಿದೇಶಕ್ಕೆ ಪ್ರವಾಸಕ್ಕೆಂದು ಹೋಗಿದ್ದರು, ಆದರೆ ಆಗ ಇವರ ಸಹಾಯಕ್ಕೆಂದು ಇದ್ದ ಸಹಾಯಕಿ ವಿಮಲಾ ಬಾಯಿ, ಇದ್ದಕ್ಕಿದ್ದಂತೆ ಅನಾರೋಗ್ಯದ ಕಾರಣ  ಕೆಲಸಕ್ಕೆ ಹೇಳದೇ ಕೇಳದೇ ರಜೆ ಹಾಕಿದ್ದಳು, ಇಷ್ಟುದಿನ ಇದಾವುದರ ಬಗ್ಗೆ ಚಿಂತಿಸದ ಡಾll ಅರುಣಾ ದೇವಿಯವರಲ್ಲಿ  ಈಗ

 

ಒಂಟಿತನದ  ಚಿಂತೆ ಕಾಡತೊಡಗಿತು, ತನ್ನ ಕೆಲಸಗಳನ್ನೆಲ್ಲಾ ತಾನೇ ಮಾಡಿಕೊಳ್ಳಬೇಕಾಯಿತು, ಒಂಟಿ ಜೀವನ ಎಂದರೇನು ಎಂದು ಈ ಎಪ್ಪತ್ತೈದು ವರ್ಷಗಳ ಕಾಲ ಯೋಚಿಸಿರದ ಈ ಅರುಣಾ ದೇವಿಯವರಲ್ಲಿ  ಈಗ ಅರ್ಥವಾಗುತ್ತಿದೆ, ಕಾರಣ ಅವರನ್ನು ಗಮನಿಸುವವರಾರೂ ಅವರ ಹತ್ತಿರವಿರಲಿಲ್ಲ, ಒಂದು ಲೋಟ ನೀರು ಬೇಕೆಂದರೂ ಅಡುಗೆ ಕೋಣೆಗೆ ಸ್ವತಃ ತಾನೇ ಎದ್ದು ಹೋಗಿ ಕುಡಿದು ಬರಬೇಕು, ಇನ್ನು ತನ್ನ ಮಕ್ಕಳಾಗಲೀ, ಸೊಸೆಯರಾಗಲೀ, ಮೊಮ್ಮಕ್ಕಳಾಗಲೀ ತನ್ನ ಜೊತೆ ಇರದೆ ಎಲ್ಲೋ ಸುತ್ತಾಡಲು ಹೋಗಿದ್ದಾರೆ, ತಾನು ಸರಿಇದ್ದರೆ ಎಲ್ಲವೂ ಸರಿ ಇರುವುದು, ಎಂದು ಬಹಳ ಬೇಗ ತಿಳಿದುಕೊಂಡರು.

       ಈ ಕೆಲಸದಾಕೆ......ಪಾಪ ಅವಳೂ ಮನುಷ್ಯಳಲ್ಲವೇ..........ಅವಳಿಗೂ ಖಾಯಿಲೆ ಕಸಾಲೆ ಎಲ್ಲಾ ಸಹಜತಾನೆ ಎಂದು ತನಗೆ ತಾನೇ ಸಮಾಧಾನ ಪಟ್ಟುಕೊಂಡರು, ಆಗ ಇದೇ ಊರಿನಲ್ಲಿರುವ ತನ್ನ ಮಗಳು, ಅಳಿಯರಿಗೆ ಫೋನು ಕರೆ ಮಾಡಿದರು ಅರುಣಾದೇವಿಯವರು, ಅತ್ತಲಿಂದ ಉತ್ತರ ಬಂದಿತು, ಅಮ್ಮಾ ನಾವಿಬ್ಬರೂ ಹೈದರಾಬಾದಿಗೆ  ಮದುವೆಗೆ ಬಂದಿರುವೆವು, ಬರುವುದು ಇನ್ನೂ ಒಂದು ವಾರವಾಗುವುದು, ಮನೆಯಲ್ಲಿ ಮಗ

 

ಪ್ರಶಾಂತನಿದ್ದಾನೆ ಅವನಿಗೆ ಫೋನು ಕರೆ ಮಾಡಿ ನಿಮ್ಮಲ್ಲಿಗೆ ಬರುವಂತೆ ತಿಳಿಸುವೆ, ಎಂದು ಹೇಳಿ ಅವರ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಫೋನು ಕರೆ ಕಡಿತಗೊಳಿಸಿದರು.

 

         ಈಗಂತೂ ಅರುಣಾ ದೇವಿಯವರು ಮತ್ತಷ್ಟು ಚಿಂತಿಸುವಂತಾಯಿತು, ತಾನು ಆರೋಗ್ಯದಿಂದಿದ್ದಾಗ ಎಲ್ಲರೂ ನಾ ಮುಂದು ತಾ ಮುಂದು ಎಂದು ಆರೈಕೆ ಮಾಡುತ್ತಾರೆ, ಆದರೆ ನಾನು ಕೈಲಾಗದೇ ಮೂಲೆಯಲಿ ಕುಳಿತರೆ ಯಾರೂ ಬರುವುದಿಲ್ಲವಲ್ಲಾ......ಎಂದು ತುಂಬಾ ನೊಂದರು, ಹಾಗೂ ಅವರ ಬಾಲ್ಯಾವಸ್ಥೆಯಿಂದ ಇದುವರೆಗೂ ಅವರ ಜೀವನದ ಕಥೆಯನ್ನೊಮ್ಮೆ ಸ್ಮೃತಿಪಟಲದಲ್ಲಿ ತಂದುಕೊಂಡರು.

 

        "ಡಾll ಅಂಬೆಗಾಲು ಅರುಣಾ ದೇವಿ" ಯವರು

 ಸ್ವಾತಂತ್ರ್ಯ ಹೋರಾಟಗಾರರಾದ ದ್ವಾರಸಮುದ್ರ ಧರ್ಮಯ್ಯ ನವರ ಮೊಮ್ಮಗಳು, ಅವರ  ನಾಲ್ಕು ಜನ ಮಕ್ಕಳು, ಮೊದಲೆರಡು ಹೆಣ್ಣು ಮಕ್ಕಳು, ನಂತರ ಇಬ್ಬರು ಗಂಡು ಮಕ್ಕಳು, ಈ ಗಂಡು ಮಕ್ಕಳಲ್ಲಿ ಕೊನೆಯ ಮಗನ ಮಗಳೇ  ಅರುಣಾ ದೇವಿಯವರು, ಮೊದಲೆರಡು ಹೆಣ್ಣು ಮಕ್ಕಳ ಮಕ್ಕಳುಗಳೇ  ಬ್ಯಾರಿಸ್ಟರ್ ಬಲರಾಂ ‌ಹಾಗೂ ಮೇಜರ್ ಮನೋಜ್

 

ಕುಮಾರ್, ಈ ಇಬ್ಬರೂ ಅರುಣಾ ದೇವಿಯವರನ್ನು ಪ್ರೀತಿಸಿ ಮದುವೆಯಾಗಲು ಹಾತೊರೆಯುತ್ತಿದ್ದವರು.

 

        "ಡಾll ಅಂಬೆಗಾಲು ಅರುಣಾ ದೇವಿ" ಯಾರು  ಎಂದು ಕೇಳಿದರೆ ಭಾರತೀಯ ಸಾಹಿತ್ಯ ವಲಯದಲ್ಲಿ ಚಿರಪರಿಚಿತ ಹೆಸರು.   ಕಾರಣ ಅವರು ಸಾಹಿತ್ಯ ಕೃಷಿ ಪ್ರಾರಂಭ ಮಾಡಿದಾಗ ಪ್ರಪ್ರಥಮವಾಗಿ ಬರೆದ ಕೃತಿ "ಅಂಬೆಗಾಲು" ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು.  ಡಾll ಅರುಣಾ ದೇವಿ ಯವರು ವೈದ್ಯಕೀಯ ಶಿಕ್ಷಣದಲ್ಲಿ ಪದವಿ ಪಡೆದು ಡಾಕ್ಟರ್ ಆದವರಲ್ಲ, ಅವರು  ಅತ್ಯುತ್ತಮ  ಬರಹಗಾರರೆಂದು   ವಿಶ್ವವಿದ್ಯಾಲಯಗಳೇ ನೀಡಿದ ಡಾಕ್ಟರೇಟ್ ಪದವಿ.   /

 

        ಈ ಅಂಬೆಗಾಲು ಅರುಣಾ ದೇವಿಯವರು ತನ್ನ ಮೂವತ್ತನೇ ವಯಸ್ಸಿಗೆ ಎಲ್ಲಾ ಓದು ಮುಗಿದ ನಂತರ ಅವರು ಕನ್ನಡ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರಿದ ನಂತರ ಮೊದಲಬಾರಿಗೆ ಈ "ಅಂಬೆಗಾಲು" ಎಂಬ ಕೃತಿ ಬರೆದರು, ಅತೀ ಚಿಕ್ಕ ವಯಸ್ಸಿಗೇ ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದವರು. ಅದುವರೆಗೂ ಅವರು ಯಾರೆಂದು ಯಾರಿಗೂ ತಿಳಿಯದೇ ಇದ್ದವರು, ಅಂಥಾ ಸಮಯದಲ್ಲಿ ಅವರ ಈ ಕೃತಿಗೆ ಯಾವಾಗ ಕೇಂದ್ರ

 

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತೋ..... ರಾತ್ರೋರಾತ್ರಿ ಪ್ರಸಿದ್ದಿಗೆ ಬಂದವರು ಈ

ಅರುಣಾದೇವಿಯವರು, ಅವರ ಜೊತೆ "ಅಂಬೆಗಾಲು" ಸೇರಿಕೊಂಡು "ಅಂಬೆಗಾಲು ಅರುಣಾ ದೇವಿ" ಆದರು.

ಅವರು ಇನ್ನೂ ಸಾಹಿತ್ಯ ಕ್ಷೇತ್ರದಲ್ಲಿ ಅಂಬೆಗಾಲಿಡುವ ಹಂತದಲ್ಲಿ ಅವರನ್ನು ಎತ್ತರಕ್ಕೆ ಕೊಂಡೊಯ್ದ ಈ ಕೃತಿ ಅವರ ಜೊತೆಜೊತೆಗೇ ಇದೆ, ಅಂದಿನಿಂದ ಅವರ ಸ್ನೇಹಿತರ ಬಳಗ ಹೆಚ್ಚಾಯಿತು, ಅವರಿಗಿಂತ ಹಿರಿಯರೂ ಅವರ ಈ ಕೃತಿ ಕೊಂಡು ಓದಿ ತಮ್ಮ ಮನದಾಳದ ಮೆಚ್ಚುಗೆ ಸೂಚಿಸತೊಡಗಿ, ಅವರ ಸ್ನೇಹಕ್ಕಾಗಿ ಹಾತೊರೆಯತೊಡಗಿದರು, ಅವರನ್ನು ಒಮ್ಮೆ ನೋಡಿ, ಅವರೊಡನೆ ಮಾತನಾಡಬೇಕೆಂದು ಇಡೀ ದೇಶದ ಎಲ್ಲಾ ತರಹದ ಕವಿಗಳು, ಬರಹಗಾರರು, ಸಾಹಿತಿಗಳು, ಕಾಯತೊಡಗಿದರು, ಅರುಣಾರವರೂ ಅವರ ಅಂತಸ್ತಿಗೆ ತಕ್ಕಂತೆ ಬೆಳೆಯತೊಡಗಿದರು, ಮೊದಲೇ ಸೌಂದರ್ಯದ ಖನಿಯಂತಿದ್ದ  ಅವರ ಸೌಂದರ್ಯ, ಅವರ ಆ ತಾರುಣ್ಯದ ವಯಸ್ಸು ಅವರೊಡನೆ ಪ್ರೀತಿ ಪ್ರೇಮ, ಸಖ್ಯ  ಎಲ್ಲವೂ ಒಂದೊಂದಾಗಿ ಒದಗಿಬಂದಂತೆ ಅವರ ಘನತೆ  ಹೆಚ್ಚತೊಡಗಿದಂತೆ ಅವರ ಅಭಿಮಾನಿಬಳಗ ಹೆಚ್ಚತೊಡಗಿತು, ಹಾಗೇ ಅವರನ್ನು ಪ್ರೀತಿಸುವ ಪ್ರೇಮಿಗಳೂ ಹೆಚ್ಚಾದರು, ಹೀಗೆ ಅರುಣಾ ರವರನ್ನು ಪ್ರೀತಿಸುವಲ್ಲಿ ನಾ ಮುಂದು ತಾಮುಂದು

 

ಎಂದು ಪೈಪೋಟಿಯಲ್ಲಿ ಮುಂದಲೆಗೆ ಬಂದವರೆಂದರೆ,

ಡಾll ಅರುಣಾ ರವರ ತಂದೆಯ ಇಬ್ಬರು ಹಿರಿಯ  ಸಹೋದರಿಯರ  ಮಕ್ಕಳು.

 ಒಬ್ಬರು :  ಬ್ಯಾರಿಸ್ಟರ್ ಬಲರಾಂರವರು, ಅವರು ಪ್ರಖ್ಯಾತ ವಕೀಲರೆಂದು ಚಿಕ್ಕ ವಯಸ್ಸಿನಲ್ಲೇ ಹೆಸರು ಮಾಡಿದವರು, ಅವರು ವಾದ ಮಂಡಿಸುತ್ತಿದ್ದಾರೆ ಎಂದರೆ,  ನ್ಯಾಯಾಧೀಶರೇ ಮೂಗಿನ ಮೇಲೆ ಬೆರಳಿಟ್ಟು ನೋಡುತ್ತಿದ್ದರು, ಆ ನ್ಯಾಯಾಲಯದಲ್ಲಿ ಇತರ ಹಿರಿಯ ವಕೀಲರುಗಳೂ ತಮ್ಮ ಕೆಲಸಕಾರ್ಯಗಳನ್ನು ಬದಿಗಿಟ್ಟು, ಇವರು ವಾದ ಮಂಡಿಸುವ ವೈಖರಿಯನ್ನು ನೋಡಲು ಬಂದು ಸೇರುತ್ತಿದ್ದರು, ಅವರಿಗೆ ಈ ಬ್ಯಾರಿಸ್ಟರ್ ಪದವಿ ಕೊಟ್ಟವರು ಬೇರಾರೂ ಅಲ್ಲ, ಅವರ ಅಭಿಮಾನಿಗಳೇ, ಅಂಥಾ ಖ್ಯಾತ ವಕೀಲರು

ಡಾll ಅಂಬೆಗಾಲು ಅರುಣಾರನ್ನು ಪ್ರೀತಿಸುತ್ತಿದ್ದರು, ಪ್ರೀತಿಸಿ, ತಮ್ಮ ತಾಯಿಯ ಕಡೆಯಿಂದ ಹೇಳಿಸಿ ಮದುವೆಯಾಗಲೂ ಪ್ರಯತ್ನಿಸುತ್ತಿದ್ದರು.  

        ಇವರ ಮತ್ತೊಬ್ಬ ಪ್ರತಿಸ್ಪರ್ಧಿ ಪ್ರೇಮಿ  ಮೇಜರ್ ಮನೋಜ್ ಕುಮಾರ್ ರವರು, ಇವರೂ ಸಹ ಅತೀ ಚಿಕ್ಕ ವಯಸ್ಸಿಗೇ ಮೇಜರ್ ಹುದ್ದೆಗೇರಿದ್ದವರು, ಯಾವುದೇ ಕಠಿಣ ಸಂದರ್ಭಗಳು ಬಂದರೂ ಅದನ್ನು ತಾನೇ ಮುಂದಾಳತ್ವ ವಹಿಸಿ ಅತ್ಯಂತ ಸರಳವಾಗಿ

 

ನಿಭಾಯಿಸುತ್ತಿದ್ದುದ್ದರಿಂದ ಅವರಿಗೆ ಈ ಅಧಿಕಾರ ದೊರೆತಿತ್ತು.

   ಈ ಮೂವರ ವೃತ್ತಿ, ಪ್ರವೃತ್ತಿಗಳು, ಹವ್ಯಾಸಗಳು ಬೇರೆಬೇರೆಯಾದರೂ ಒಬ್ಬರನ್ನೊಬ್ಬರು ಸಂಧಿಸುತ್ತಿದ್ದುದು, ಅವರುಗಳ ಕೆಲಸಗಳೆಲ್ಲಾ ಮುಗಿದ ನಂತರ ಸ್ನೂಕರ್ ಕ್ಲಬ್ ನಲ್ಲಿ, ಅಲ್ಲಿಯೂ ಇತರೆ ಎಲ್ಲಾ ಸದಸ್ಯರುಗಳಿದ್ದರೂ ಈ ಮೂವರೂ ಒಬ್ಬರಿಗಿಂತ ಒಬ್ಬರು ಈ ಸ್ನೂಕರ್ ಆಟದಲ್ಲಿ ಅತ್ಯಂತ ಪ್ರಾವೀಣ್ಯತೆ ಪಡೆದು,  ಬಲಾಢ್ಯರಾಗಿದ್ದರು, ಈ ಅರುಣಾರವರು ಇಲ್ಲದಿದ್ದ ವೇಳೆ ಅವರನ್ನು ಮದುವೆಯಾಗಲು ಈ ಬ್ಯಾರಿಸ್ಟರ್ ಹಾಗೂ ಮೇಜರ್ ಆರೋಗ್ಯಕರ ಸ್ಪರ್ಧೆಗಳನ್ನು ಒಡ್ಡಿ,  ಪೈಪೋಟಿ ಮೇಲೆ ತಮಾಷೆಗಾಗಿ ಪಂದ್ಯಗಳನ್ನು ಕಟ್ಟಿ ಯಾರು ಆಟ  ಗೆಲ್ಲುವರೋ ಅವರಿಗೇ ಅರುಣಾ ದೊರಕುವಳೆಂದು........ಆದರೆ ವಿಪರ್ಯಾಸವೆಂದರೆ ಇಬ್ಬರೂ ಆಟವಾಡಿದ ಆಟಗಳಲ್ಲಿ ಒಮ್ಮೆ ಬಲರಾಂ, ಮತ್ತೊಮ್ಮೆ ಮನೋಜ್ ಗೆಲ್ಲುತ್ತಿದ್ದರು, ಈ ಅರುಣಾ ತನಗೇ ಸಿಗಬೇಕೆಂದು ತಮಾಷೆಗಾಗಿ ಜಗಳವಾಡುತ್ತಿದ್ದರು, ಆದರೂ ಅರುಣಾ ರವರು ಈ ಇಬ್ಬರನ್ನೂ ಸಮಾನವಾಗಿ ನೋಡುತ್ತಿದ್ದರು ಕಾರಣ‌ಇಬ್ಬರೂ ಸಂಬಂಧಿಗಳಾಗಿದ್ದರು, ಅಲ್ಲದೇ ಇಬ್ಬರಲ್ಲೂ ಸಮಾನವಾದ ಪ್ರತಿಭೆ, ಅಂದ,ಚೆಂದ,  ಹಣ ಎಲ್ಲವೂ ಇದ್ದಿದ್ದರಿಂದಲೂ,  ತಂದೆಯವರು

 

ಯಾರಿಗೆ ಮದುವೆ ಮಾಡುವರೋ ಅವರನ್ನೇ ಮದುವೆಯಾಗುವುದಾಗಿ ಹೇಳುತ್ತಿದ್ದರು ಈ ತ್ರಿಕೋನ ಪ್ರೇಮಕಥೆ ಅದೆಲ್ಲಿಗೆ ಹೋಗಿ ಮುಕ್ತಾಯವಾಗುವುದೋ ಎಂದು ಉಳಿದವರೆಲ್ಲರೂ ಕಾತರರಾಗಿ ಕಾಯುತ್ತಿದ್ದರು,  ಇದರಿಂದ ಮೂರನೆಯವರು ಯಾರೂ ಅರುಣಾ ರವರನ್ನು ಪ್ರೀತಿಸಲು ಪ್ರಯತ್ನಿಸುತ್ತಿರಲಿಲ್ಲ.

     ಹೀಗೇ ತ್ರಿಕೋನ ಪ್ರೇಮಕಥೆ ಬಹಳ ದಿನಗಳವರೆಗೆ ನಡೆಯುತ್ತಲೇಇತ್ತು, ಹೀಗೇ ತ್ರಿಕೋನ ಪ್ರೇಮಕಥೆ ಆಗಿಂದಾಗ್ಗೆ ವಿಚಿತ್ರ ತಿರುವುಗಳನ್ನು ಪಡೆಯುತ್ತಿರುವ ಸಂದರ್ಭದಲ್ಲಿ ಮೇಜರ್ ಮನೋಜ್ ಕುಮಾರ್ ಅವರನ್ನು, ಭಾರತ-ಪಾಕ್ ಗಡಿಪ್ರದೇಶದಲ್ಲಿ ಉಗ್ರಗಾಮಿಗಳ ಉಪಟಳ ಜಾಸ್ತಿಯಾಗಿದ್ದುದರಿಂದ ಈ ಕೂಡಲೇ ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ನಿಯೋಜನೆ ಮಾಡಿತ್ತು, ಆ  ಆಹ್ವಾನದ ಮೇರೆಗೆ ಹೋಗಬೇಕಾಗಿ ಬಂದಿದ್ದರಿಂದ ಕೂಡಲೇ ಹೊರಟು ಬಿಟ್ಟರು.

 

        ಈಗಂತೂ ಡಾll ಅರುಣಾ ದೇವಿ ಯವರ ಎದುರಿಗಿದ್ದವರು ಕೇವಲ ಬ್ಯಾರಿಸ್ಟರ್ ಬಲರಾಂ ಮಾತ್ರ, ಆದರೂ ಎಂದೋ ಒಮ್ಮೆ ತಿಂಗಳಿಗೋ, ಎರಡು ತಿಂಗಳಿಗೋ  ಮೇಜರ್ ರವರಿಂದ ಫೋನು ಕರೆ ಬರುತ್ತಿತ್ತು.  ಆದರೆ ಇದರ ಮಧ್ಯೆ ಬ್ಯಾರಿಸ್ಟರ್

 

ಬಲರಾಂ ಅವರು ತನ್ನ ಹೆತ್ತವರ ಮುಖಾಂತರ  ಒತ್ತಡ ತಂದು ಅರುಣಾ ದೇವಿಯವರ ತಂದೆಯವರಲ್ಲಿ ಮಾತುಕಥೆ ನಡೆಸಿ, ಮದುವೆಗೆ ನಿಶ್ಚಯ ಮಾಡಿಯೇ ಬಿಟ್ಟರು, ಒಂದು ಕಡೆ ಮೇಜರ್ ರವರು ತನ್ನ ಕೆಲಸದ ಒತ್ತಡದಿಂದಾಗಿ ಅವರೂ ಈ ಪ್ರೇಮಕಥೆಯಲ್ಲಿ ಪಕ್ಕಕ್ಕೆ ಸರಿದು ಬಿಟ್ಟರು.                    ‌                           //

 

      ಇದರಿಂದ ಡಾllಅರುಣಾದೇವಿಯವರ ಮದುವೆ ಬ್ಯಾರಿಸ್ಟರ್ ಬಲರಾಂರವರೊಂದಿಗೆ ಪಕ್ಕಾ ಆಗಿಬಿಟ್ಟಿತು, ಆಗ ಅರುಣಾದೇವಿಯವರಿಗೆ ಸುಮಾರು ಮೂವತ್ತೆರಡು ವರ್ಷ ವಯಸ್ಸು ಇರಬೇಕು.

ಹೀಗೆ ಒಂದು ಸುಮುಹೂರ್ತದಲ್ಲಿ ಡಾ llಅರುಣಾ ದೇವಿ ಹಾಗೂ ಬ್ಯಾರಿಸ್ಟರ್ ಬಲರಾಂ ಅವರುಗಳ ಮದುವೆ ಅದ್ಧೂರಿಯಿಂದ ನಡೆದು, ಅರುಣಾ ದೇವಿಯವರ ಅಸಂಖ್ಯಾತ ಅಭಿಮಾನಿಗಳು ಈ ಮದುವೆಗೆ ಬಂದು ಹರಸಿ ಆಶೀರ್ವದಿಸಿದರು, ಆದರೆ ಕೆಲಸದ ಒತ್ತಡದಿಂದಾಗಿ ಮೇಜರ್ ಮನೋಜ್ ಕುಮಾರ್ ಬರಲಾಗಲೇ ಇಲ್ಲ, ಹಾಗೂ ಮನೋಜ್ ರವರ ಹೆತ್ತವರು ಸಹ ಬರಲಿಲ್ಲ, ಹೀಗೆ ಅರುಣಾದೇವಿ- ಬಲರಾಂ ದಂಪತಿಗಳ ಜೀವನ ಸಾಗಿತ್ತು, ಅವರೂ ತಮ್ಮ ಕೆಲಸಗಳ ಮಧ್ಯೆ ಸಾಹಿತ್ಯ ಕೃಷಿಯಲ್ಲೂ ಮುಂದುವರೆಯುತ್ತಾ,  ಇಡೀ ದೇಶದಲ್ಲಿ ಮತ್ತಷ್ಟು

 

ಹೆಸರು ಮಾಡುತ್ತಾ, ದೇಶ ವಿದೇಶಗಳಲ್ಲಿ ಹೋಗಿ  ಸನ್ಮಾನಗಳಿಗೆ ಭಾಜನರಾಗುತ್ತಿದ್ದರು. 

 

      ಹೀಗೇ ತುಂಬಾ ವರುಷಗಳು ಕಳೆಯಿತು.

ದಿನಗಳುರುಳಿದಂತೆ ಅವರಿಗೆ ಮೂವರು ಮಕ್ಕಳುಗಳಾದವು, ಮೊದಲೆರಡು ಗಂಡುಮಕ್ಕಳು, ಆನಂತರ ಒಂದು ಹೆಣ್ಣು ಮಗಳು, ಅವರುಗಳೂ ಚೆನ್ನಾಗಿ ಓದಿ, ಕೆಲಸಗಳಿಗೆ ಸೇರಿದ್ದರು,

ಈಗ ಅಂಬೆಗಾಲು ಅರುಣಾ ದೇವಿ, ಬ್ಯಾರಿಸ್ಟರ್ ಬಲರಾಂ ದಂಪತಿಗಳು ಮತ್ತಷ್ಟು ಉತ್ತುಂಗಕ್ಕೇರಿದ್ದರು, ಅವರ ಹೆಣ್ಣು ಮಗಳಿಗೆ ಮದುವೆಯೂ ನಡೆದು ಅವಳು ತನ್ನ ಗಂಡನ ಮನೆಗೆ ಹೋಗಿದ್ದಳು.  ಹೀಗೇ ಇರುವಾಗ ಬಲರಾಂ ರವರು ತಮ್ಮ ನ್ಯಾಯಾಲಯದ ಕೆಲಸಗಳನ್ನು ಮುಗಿಸಿ ಸಂಜೆಯ ವೇಳೆಯಲ್ಲಿ ತಮ್ಮ ಕಾರಿನಲ್ಲಿ ಮನೆಯಕಡೆ ಬರುವಾಗ ಅವರು ತೀವ್ರತರನಾದ ಹೃದಯಾಘಾತವಾಗಿ ಕಾರು ಚಲಾಯಿಸುವಾಗಲೇ  ನಿಧನರಾಗಿ ಅರುಣಾ ರವರನ್ನು ಹಾಗೂ ಅಪಾರ ಬಂಧು ಬಳಗವನ್ನು ತೊರೆದುಹೋದರು.

 

   ಈಗಂತೂ ಅರುಣಾ ದೇವಿಯವರು ಒಂದರ್ಥದಲ್ಲಿ ಒಂಟಿಯಾಗಿದ್ದರು,  ಆದರೂ ಅವರಿಗೆ ತುಂಬಾ ಜವಾಬ್ದಾರಿ ಹೊರಿಸಿ‌ಹೋಗಿದ್ದರು, ಬಲರಾಂ ರವರು,

 

ಅದೇ.....ಇಬ್ಬರು ಗಂಡುಮಕ್ಕಳ ಮದುವೆ...... ಹೆಣ್ಣು ‌ಮಗಳೇನೋ ಗಂಡನ ಮನೆಯಲ್ಲಿ ಸುಖವಾಗಿದ್ದಳು, ಅವಳಿಗೂ ಒಂದು ಗಂಡು ಮಗು ಹುಟ್ಟಿತ್ತು.  ಸರಿ ಇಬ್ಬರೂ ಗಂಡು ಮಕ್ಕಳು ಮದುವೆ ವಯಸ್ಸಿಗೆ ಬಂದಿದ್ದರು,  ಇಬ್ಬರಿಗೂ ಎರಡು ವರುಷಗಳ ಅಂತರ ಅಷ್ಟೇ..... ಆದ್ದರಿಂದ ಅವರೀರ್ವರಿಗೂ ಒಂದೇ ಬಾರಿ ಮದುವೆ ಮಾಡಲು ತಯಾರಿ ಮಾಡಿಕೊಂಡು ತಮಗೆ ತಿಳಿದ ಒಂದೇ ಮನೆಯಿಂದ ಅವಳಿ ಹೆಣ್ಣು ಮಕ್ಕಳನ್ನು ತಂದು ಮನೆಯ ಸೊಸೆಯರನ್ನಾಗಿ ಮಾಡಿಕೊಂಡು ಒಂದರ್ಥದಲ್ಲಿ ಅವರು ನಿರಾಳವಾದರು, ಈಗ ಜವಾಬ್ದಾರಿ ಸ್ವಲ್ಪ ಮಟ್ಟಿಗೆ ಕಡಿಮೆಯೇ ಆಗಿದ್ದರಿಂದ ಅದೂ ಅಲ್ಲದೆ ಅವರೂ ಆಗತಾನೆ ನಿವೃತ್ತರಾಗಿ ವಿಶ್ರಾಂತಿ ಜೀವನ ನಡೆಸಲು ಸಕಲ ಏರ್ಪಾಟುಗಳನ್ನು ಮಾಡಿಕೊಂಡರು, ಈಗಂತೂ ವಿಶ್ರಾಂತಿ ಜೀವನದಲ್ಲಿಯೂ ಅವರೇನೂ ವಿಶ್ರಾಂತಿ ಪಡೆಯುತ್ತಿರಲಿಲ್ಲ, ಅವರ ಸಾಹಿತ್ಯ ಕೃಷಿ ಮುಂದುವರೆದೇ ಇತ್ತು.  ಅವರು ಹಗಲು ರಾತ್ರಿ ಎನ್ನದೇ ಕಥೆ, ಕವನ,  ಬೇರೆ ಭಾಷೆಯ ಪುಸ್ತಕಗಳನ್ನು ಕನ್ನಡಕ್ಕೆ, ಕನ್ನಡದ ಪುಸ್ತಕಗಳನ್ನು ಬೇರೆ ಭಾಷೆಗೆ ತರ್ಜುಮೆ ಮಾಡುತ್ತಾ ಹಾಗೆಯೇ ಅವರಿವರ ಪುಸ್ತಕಗಳನ್ನು ಓದುತ್ತಾ, ಇಂದು ಈ ಊರಿನಲ್ಲಿ ಸನ್ಮಾನ, ನಾಳೆ ಮತ್ತೊಂದು ಊರಿನಲ್ಲಿ ಪುಸ್ತಕ

 

ಬಿಡುಗಡೆ ಹೀಗೆ ಹಗಲಿರುಳೆನ್ನದೆ ತಮ್ಮ ಬಿಡುವಿಲ್ಲದ ಕೆಲಸಗಳಿಂದ ಯಾವಾಗಲೂ ತೊಡಗಿಸಿಕೊಂಡಿದ್ದರು.

    

      ಇದರ ಮಧ್ಯೆಯೇ ಅವರ ಇಬ್ಬರೂ ಗಂಡು ಮಕ್ಕಳಿಗೆ ಒಂದೊಂದು ಮಕ್ಕಳೂ ಆದವು, ಆ ಮೊಮ್ಮಕ್ಕಳನ್ನು ನೋಡಿಕೊಂಡು, ಅವರುಗಳ ಜೊತೆ ಸಮಯ ವ್ಯಯಮಾಡುವುದು ತುಂಬಾ ಸಂತೋಷದ ವಿಷಯವಾಯಿತು, ಆಗಾಗ ಅವರ ಮಗಳು, ಅಳಿಯ ಹಾಗೂ ಮೊಮ್ಮಗನೂ ಬಂದು ಎಲ್ಲರೊಡನೆ ಅವರು ಕಾಲ ಕಳೆಯುತ್ತಾ........ಹಾಗೂ ಹೀಗೂ ನಿವೃತ್ತಿ ಯಾಗಿ ಅರುಣಾ ದೇವಿಯವರು ಹದಿನೈದು ವರ್ಷಗಳು ಸಂದವು, ಈಗಂತೂ ಮತ್ತಷ್ಟು ಕೃಷವಾಗಿದ್ದರು, ಹೊರಗಡೆ ಹೋಗೋದು ಸ್ವಲ್ಪ ಕಡಿಮೆ ಮಾಡಿದ ಅವರು ಕೇವಲ ತಮ್ಮ ಕೊಠಡಿಯಲ್ಲಿಯೇ ಕುಳಿತು ಲೇಖನಗಳನ್ನು ಬರೆಯುವುದೂ, ಓದುವುದೂ ಹೆಚ್ಚು ಮಾಡುತ್ತಿದ್ದರು, ಅವರನ್ನು,  ಅವರ ಆರೋಗ್ಯವನ್ನು ಗಮನಿಸಲು ಅವರಿಗೆ ಒಬ್ಬ ಸಹಾಯಕಿಯನ್ನು ಇಟ್ಟಿದ್ದರು ಅವರ ಮಕ್ಕಳು, ಕಾರಣ ಅವರ ಕುಟುಂಬದವರು ಆಗಾಗ ಪ್ರವಾಸಗಳಿಗೆ ಹೋಗುತ್ತಿದ್ದರು.

 

    ಹೀಗೆ ಮಕ್ಕಳ ಇಡೀ ಕುಟುಂಬಗಳು ಒಮ್ಮೆ 

 

ಪ್ರವಾಸ ಹೋದ ಸಂದರ್ಭದಲ್ಲಿ ಅರುಣಾ ದೇವಿ ಯವರ ಸಹಾಯಕಿ, ವಿಮಲಾ ಬಾಯಿ ಸಹಾ ತೀವ್ರ ಅನಾರೋಗ್ಯದಿಂದಾಗಿ ರಜೆ ಹಾಕಿದರು, ಈಗ ತನ್ನ ಜೀವನದ ಬಗ್ಗೆ ಮೊದಲಬಾರಿಗೆ ಚಿಂತಿಸುವಂತೆ ಮಾಡಿತು, ಇದುವರೆಗೂ ಈ ಎಪ್ಪತ್ತೈದು ವರ್ಷಗಳ ತುಂಬು ಜೀವನದಲ್ಲಿ ಒಮ್ಮೆಯಾದರೂ ತನ್ನ ಬಗ್ಗೆ ಯೋಚಿಸಿರದ  ಅರುಣಾ ದೇವಿಯವರಿಗೆ ಒಂಟಿ ಜೀವನ ಎಂದರೇನು ಎಂದು ಮನವರಿಕೆಯಾಯಿತು.

 

     ಅದರ ಬಗ್ಗೆಯೇ ಒಂದು ಲೇಖನ ಬರೆಯುವ ಮನಸ್ಸಾಯಿತಾದರೂ ಇಂಥಾ ಸಮಯದಲ್ಲಿ ಅದೂ ತಾನೇ ಅನುಭವಿಸುತ್ತಿರುವಾಗ ಹೇಗೆ ಬರೆಯಲು ಸಾಧ್ಯ, ಕೆಲವು ದಿನಗಳು ಕಳೆಯಲಿ ಮುಂದೆ ತನ್ನದೇ ಒಂದು ಜೀವನ ಚರಿತ್ರೆ ಬರೆಯೋಣ ಎನಿಸಿ, ತನ್ನ ಕೆಲಸಗಳನ್ನು ಮಾಡಿಕೊಳ್ಳಲು ಸಹ ತುಂಬಾ ಶ್ರಮಪಡಬೇಕಾಯಿತು, ಆಗ ತನ್ನ ಮಗಳಿಗೆ ಫೋನು ಮಾಡಿದರು ಡಾll ಅರುಣಾ ದೇವಿಯವರು, ಅವರ ಮಗಳು ಅಳಿಯ ಹೈದರಾಬಾದಿಗೆ ಮದುವೆಗೆ      ಹೋಗಿರುವುದಾಗಿ ಹೇಳಿದ ಅವರ ಮಗಳು,  ತಮ್ಮ ಮಗ, ಅರುಣಾ ದೇವಿಯವರ ಮೊಮ್ಮಗ ಪ್ರಶಾಂತ್ ನಿಗೆ ಹೇಳಿ ಅಜ್ಜಿಯ ಆರೋಗ್ಯ ವಿಚಾರಿಸಿ ಕೊಳ್ಳುವ ಸಲುವಾಗಿ ಕಳಿಸಿದರು.  

 

                           

       ಪ್ರಶಾಂತ ಬಂದನಂತರ ಸ್ವಲ್ಪ ಸಮಾಧಾನ ತಂದುಕೊಂಡರು ಅರುಣಾದೇವಿಯವರು, ಅವನೇ ಇವರ  ಎಲ್ಲಾ ಕೆಲಸಗಳನ್ನು ಮಾಡುತ್ತಾ ಸಹಾಯ ಮಾಡುತ್ತಿದ್ದನು, ಈಗಂತೂ ಯಾವುದೇ ಸಾಹಿತ್ಯ ಕೆಲಸಗಳನ್ನು ಮಾಡುತ್ತಿರಲಿಲ್ಲ, ಹಾಗೂ ಯಾರೇ ಸಂಪರ್ಕಿಸಿದರೂ ಎಲ್ಲಿಗೇ ಕರೆದರೂ ಅವರು ಹೋಗುವುದಕ್ಕೆ ಆಗುತ್ತಿರಲಿಲ್ಲ, ಅವರ ಮನೆಗೆ ಹಲವಾರು ಜನ, ಇವರ ಅಭಿಮಾನಿಗಳು, ಸಾಹಿತ್ಯಾಸಕ್ತರು ಬಂದು ಇವರನ್ನು ಭೇಟಿಮಾಡಿ ಹೋಗುತ್ತಿದ್ದರು.

 

    ಹೀಗೇ ಸಾಗಿತ್ತು ಅರುಣಾ ದೇವಿಯವರ ದಿನನಿತ್ಯದ ಬದುಕು, ಆಗ ಒಮ್ಮೊಮ್ಮೆ ಅವರ ಮೊಮ್ಮಗ ಪ್ರಶಾಂತ್ , ಇವರನ್ನು ಅವರ  ಮನೆಯ ಹತ್ತಿರ ಇರುವ

ಉದ್ಯಾನವನಕ್ಕೆ  ವಾಯುಸೇವನೆಗೆಂದು  ಕರೆದುಕೊಂಡು ಹೋಗುವ ಪರಿಪಾಠ ಮಾಡಿ, ಅದರಂತೆ ಪ್ರತೀದಿನ ಹೋಗುತ್ತಿದ್ದರು, ಒಂದು ದಿನ ಅನತಿ ದೂರದಲ್ಲಿ ಒಬ್ಬರು ಪುರುಷರು ಒಂದು ಕಾಲು ಹಾಗೂ ಮತ್ತೊಂದು ಕೃತಕ ಕಾಲಿನಲ್ಲಿ ಕುಂಟುತ್ತಾ ಹೋಗುತ್ತಿದ್ದರು, ಅವರೊಡನೆ ಮತ್ತಿಬ್ಬರು ಯುವಕರು ಹೋಗುತ್ತಿದ್ದರು, ಆ ಒಂಟಿ ಕಾಲಿನ ಪುರುಷರು

 

ಹಾಗೂ ಇತರರು......ಈ ಅರುಣಾದೇವಿಯವರನ್ನು ದೂರದಿಂದಲೇ ನೋಡಿ ಅವರನ್ನು ಮುಖತಃ ಭೇಟಿಯಾಗದೆ ಮತ್ತೊಂದು ಮಾರ್ಗವಾಗಿ ಹೋಗುತ್ತಿದ್ದರು, ಈ ಅರುಣದೇವಿಯವರ ಕಣ್ಣು ಸ್ವಲ ಮಂದವಾಗಿತ್ತು,  ಅದರಲ್ಲಿಯೇ ಅವರನ್ನು ಗಮನಿಸಿದರು, ಅವರು ಅರುಣಾದೇವಿಯವರನ್ನು ಮಾತನಾಡಿಸದೇ ಹೋದದ್ದು ತುಂಬಾ ಬೇಸರವಾಯಿತು, ಕಾರಣ ಅರುಣಾ ದೇವಿಯವರು ಉದ್ಯಾನವನಕ್ಕೆ ಬಂದರೆಂದರೆ ಜನರು ಮುತ್ತಿಗೆ ಹಾಕಿ, ಅವರೊಡನೆ ಮಾತನಾಡಲು, ಅವರೊಡನೆ ಫೋಟೋ ತೆಗೆಸಿಕೊಳ್ಳಲು, ತಾವುಗಳು ಬರೆದ ಪುಸ್ತಕಗಳನ್ನು ಓದಲು ಉಡುಗೊರೆಯಾಗಿ ಕೊಡಲು, ಹಾಗೂ ಅರುಣಾ ದೇವಿಯವರು ಈ ಪ್ರಸ್ತುತ ಯಾವ ಪುಸ್ತಕ ಬರೆದಿದ್ದಾರೆ ಎಂದು ವಿಚಾರಿಸಲು, ಅಲ್ಲದೆ ಅವರನ್ನು ತಮ್ಮ ಪುಸ್ತಕ ಬಿಡುಗಡೆಗೆ ಆಹ್ವಾನಿಸಲು ಅವರಿಗೆ ಸನ್ಮಾನಿಸುವುದಕ್ಕೆ ಆಹ್ವಾನಿಸಲು.......... ಹೀಗೆ ನಾನಾ ರೀತಿಯ ಜನರು ಅವರಿಂದ ಸುತ್ತುವರೆಯುತ್ತಿದ್ದರು, ಇದು ಅರುಣಾ ದೇವಿ ಯವರಿಗೂ ತುಂಬಾ ಖುಷಿಯ ವಿಚಾರವಾಗಿತ್ತು, ಆದರೆ......ಅವರ್ಯಾರೋ........ಈ ಹಿಂದೆ ನೋಡಿದ ಆಗಿದೆ, ಆದರೆ ಅವರು ನೋಡಿದರೆ ತನಗೆ ಮುಖ ತೋರಿಸಲು ಹಿಂಜರಿಯುತ್ತಿದ್ದಾರಲ್ಲಾ........

 

ಅವರ್ಯಾರು ನೋಡು ಸ್ವಲ್ಪ........ನನಗೆ ಕಣ್ಣು ಸ್ವಲ ಮಂಜು ಮಂಜಾಗಿ ಕಾಣ್ತಾ ಇದೆ, ಎಂದು ಪ್ರಶಾಂತನಿಗೆ ಹೇಳಿದರು, ಆಗ ಪ್ರಶಾಂತ..... ಹೇಳಿದನು, ಅವರು  ನಮ್ಮ ಮಿಲ್ಟ್ರಿ ಅಜ್ಜ ಅಲ್ವಾ........ಅಜ್ಜಿ, ಅದೇ ಮೇಜರ್  ಮನೋಜ್ ತಾತ...... ಎನ್ನುತ್ತಿದ್ದಂತೆ ಅರುಣಾ ದೇವಿಯವರು ಮತ್ತೆ  ನಲವತ್ಮೂರು ವರ್ಷಗಳ ಹಿಂದಕ್ಕೆ ಹೋದರು.

 

      ಅರುಣಾ ದೇವಿಯವರ ವಿವಾಹ ಬ್ಯಾರಿಸ್ಟರ್ ಬಲರಾಂ ಅವರೊಡನೆ ನಿಶ್ಚಯವಾಗಿತ್ತು, ಆಗ ಮೇಜರ್ ಮನೋಜ್ ಅವರ ತಾಯಿ, ಅರುಣಾ ದೇವಿಯವರ ತಂದೆ......ತನ್ನ ಸಹೋದರನಲ್ಲಿ ಮಾತುಕತೆಗೆ ಬಂದಿದ್ದರು, ತನ್ನ ಮಗನಿಗೇ ಅರುಣಾ ದೇವಿಯವರನ್ನು ತಂದುಕೊಳ್ಳಬೇಕು, ಅವರನ್ನೇ ತನ್ನ ಸೊಸೆಯನ್ನಾಗಿ ಮಾಡಿಕೊಳ್ಳಬೇಕೆಂಬ ಅಭಿಲಾಷೆ ಹೊಂದಿದ್ದರು, ಅಂದರಂತೆ ಮೇಜರ್ ಮನೋಜ್ ಅವರ ಹೆತ್ತವರು ಮನೋಜ್ ರವರ ಅನುಪಸ್ಥಿತಿಯಲ್ಲಿ ಮಾತುಕಥೆ ಮಾಡಲು ಬಂದರೆ...... ಅಷ್ಟರಲ್ಲಿ ಬಲರಾಂ ಅವರೊಡನೆ ಮದುವೆ ನಿಶ್ಚಯವಾಗಿದ್ದರಿಂದ ಈ ವಿಷಯದ ಬಗ್ಗೆ ಮಾತನಾಡಲು, ಅರುಣಾ ದೇವಿಯ ಹೆತ್ತವರು ನಿರಾಕರಿಸಿದರು, ಈ ಎಲ್ಲಾ ಬೆಳವಣಿಗೆಗಳಿಂದ ಮೇಜರ್ ಮನೋಜ್ ಅವರ ಕುಟುಂಬದವರು

 

ಅರುಣಾ ದೇವಿಯವರ ಕುಟುಂಬ ಹಾಗೂ ಬಲರಾಂ ಅವರ ಕುಟುಂಬದೊಡನೆ ಜಗಳವಾಡಿ, ಅವೆರಡೂ ಕುಟಂಬದವರೊಡನೆ ಮಾತುಕಥೆ ನಿಲ್ಲಿಸಿ, ಆ ಇಬ್ಬರೂ ಮದುವೆಗೂ ಯಾರೂ ಬರಲಿಲ್ಲ, ಅಲ್ಲದೇ ಮೇಜರ್ ಮನೋಜ್ ಅವರೂ ತಮ್ಮ ಕೆಲಸಕಾರ್ಯಗಳ ಒತ್ತಡದಲ್ಲಿ ಮುಂದೆ ಮದುವೆಯಾಗಲೂ ಬಯಸಲಿಲ್ಲ, ಅವರು ಒಂಟಿಯಾಗಿಯೇ ಇರಬಯಸಿದರು. ಹೀಗೆ ಮಾತುಕತೆಗಳು ನಿಂತು ಇಂದಿಗೆ ನಲವತ್ಮೂರು ವರ್ಷಗಳು ಸಂದಿವೆ.

 

    ಈ ಮಧ್ಯದಲ್ಲಿ ಅರುಣಾದೇವಿಯವರ ಮದುವೆಯಾಗಿ ಸುಮಾರು ಸುಮಾರು ವರ್ಷಗಳೇ ಸಂದಿರಬೇಕು, ಆಗ ಮೇಜರ್ ಮನೋಜ್ ರವರ ಜೀವನದಲ್ಲಿ ಒಂದು ದುರ್ಘಟನೆ ನಡೆಯಿತು, ಒಮ್ಮೆ ಕಾಶ್ಮೀರದ  ಒಂದು  ಭಾಗದಲ್ಲಿ ಉಗ್ರರನ್ನು ಸೆರೆಹಿಡಿಯುವ ಸಮಯದಲ್ಲಿ ಮೇಜರ್ ರವರ  ಕಾಲಿಗೆ ಗುಂಡು ತಾಗಿ ಒಂದು ಕಾಲನ್ನೇ ಕತ್ತರಿಸಬೇಕಾಗಿ ಬಂದಿತ್ತು, ಅದನ್ನು ಧೈರ್ಯವಾಗಿ ನಿಭಾಯಿಸಿದರು ಮನೋಜ್ ರವರು .

 

   ಈ ವಿಷಯ ಅರುಣಾದೇವಿಯವರಿಗೆ ತಿಳಿದರೂ ಮನೋಜ್ ಅವರನ್ನು ಬಂದು ನೋಡಲಾಗಲಿಲ್ಲ, 

 

ಕಾರಣ ಅಷ್ಟರೊಳಗೆ ಅರುಣಾ ದೇವಿಯವರ ಹಾಗೂ ಮನೋಜ್ ರವರು ಕುಟುಂಬ ಬದ್ಧ ವೈರಿಗಳಾಗಿದ್ದರು, ಇದರಿಂದ  ಅರುಣಾ ದೇವಿಯವರು ಮನೋಜ್ ರವರನ್ನು ಒಮ್ಮೆಯೂ ಭೇಟಿಯಾಗುವ ಸಂಭವವೇ ಬರಲಿಲ್ಲ,                                                          ////

 

     ಆ ಕಹಿನೆನಪಿನಿಂದ ಮೇಜರ್ ಮನೋಜ್ ರವರು ಡಾll ಅರುಣಾದೇವಿಯವರನ್ನು ಮುಖತಃ ಭೇಟಿಯಾಗಲು ಮನಸ್ಸು ಬಾರದೇ ಹಾಗೇ ಮುಖ ಮರೆಮಾಚಿ ಹೋದದ್ದು ಅರುಣಾದೇವಿಯವರಿಗೆ ಸ್ವಲ್ಪ ಬೇಜಾರಾಗಿತ್ತು, ಆದರೂ ಇಂದಾದರೂ ಅವರನ್ನು ಮಾತನಾಡಿಸಲೇಬೇಕೆಂದೂ, ಅವರು ಕಾಲು ಕಳೆದುಕೊಂಡಾಗಲೂ ಮಾತನಾಡಿಸಲು ಕೆಲವು ಸಮಸ್ಯೆಗಳು ಎದುರಾಗಿದ್ದಿದ್ದರಿಂದ ಈಗಲಾದರೂ ಅವರನ್ನು ಭೇಟಿಯಾಗಲೇಬೇಕೆಂದು ತೀರ್ಮಾನಿಸಿ, ಪ್ರಶಾಂತನ ಮುಖಾಂತರ ಮನೋಜ್ ರವರನ್ನು ಕರೆಯಲು ಕಳಿಸಿ, ತಾವು ಅಲ್ಲಿ ಅವರನ್ನು ನೋಡಲು ಬಂದವರೊಡನೆ ಮಾತನಾಡುತ್ತಾ ಕಲ್ಲಿನ ಬೇಂಚಿನ ಮೇಲೆ ಕುಳಿತರು.

 

     ಪ್ರಶಾಂತ  ಓಡಿಹೋಗಿ ಮನೋಜ್ ತಾತ ರವರ ಬಳಿ ಬಂದು " ಮನೋಜ್ ತಾತ........ನಾನು ಡಾll

 

ಅರುಣಾ ದೇವಿಯವರ ಮೊಮ್ಮಗ" ಅಜ್ಜಿ ಅಲ್ಲಿ ನಿಮಗಾಗಿ , ನಿಮ್ಮನ್ನು ಮುಖತಃ ಭೇಟಿಯಾಗಿ ಮಾತನಾಡಿಸಲು ಕಾತುರರಾಗಿದ್ದಾರೆ, ದಯವಿಟ್ಟು, ಹಳೆಯದೆಲ್ಲವನ್ನು ಮರೆತು ಸ್ವಲ್ಪ ಬನ್ನಿ, ಎಂದು ಅವರನ್ನು ಬೇಡಿಕೊಂಡನು, ಇವನ ಕೋರಿಕೆಗೆ ಅವರ ಜೊತೆಯಲ್ಲಿದ್ದ ಅವರ ಅಣ್ಣನ ಮೊಮ್ಮಕ್ಕಳೂ ಸಹ ಹೇಳಿದರು ತಾತ.......ತಾತ...... ಅರುಣಾ ಅಜ್ಜಿ ಬಂದಿದ್ದಾರಂತೆ, ಅವರ ಹೆಸರು ತುಂಬಾ ಕೇಳಿದ್ದೇವೆ, ಆದರೆ ಅವರನ್ನು ನೋಡೇ ಇಲ್ಲ, ಒಮ್ಮೆ ಅವರನ್ನು ನೋಡೋಣ ಬನ್ನಿ......ಎಂದು ಗೋಗರೆದರು, ಇವರ ಈ ಕೋರಿಕೆಗೆ ಮನೋಜ್ ಅವರೂ ಸರಿ.....ನಡೆಯಿರಿ,

ಎಂದು ನಿಧಾನವಾಗಿ ಕುಂಟುತ್ತಾ ಅವರ ಅಣ್ಣನ ಮೊಮ್ಮಕ್ಕಳು ಹಾಗೂ ಪ್ರಶಾಂತನ ಜೊತೆ ಅರುಣಾ ದೇವಿಯವರ ಬಳಿ ಬಂದರು.

 

     ಮೇಜರ್ ಮನೋಜ್ ಅವರದು ಸೈನ್ಯದ  ಸದೃಢವಾದ, ಎತ್ತರವಾದ  ಮೈಕಟ್ಟು, ಅಗಲವಾದ ಮುಖ, ದಟ್ಟವಾದ ಮಿಲಿಟರಿ ಮೀಸೆ, ಗಡಸು ಧ್ವನಿ, ನಿವೃತ್ತಿಯಾಗಿ ಇಪ್ಪತ್ತೈದು ವರ್ಷಗಳಾಗಿದ್ದರೂ ಅದೇ ಮೇಜರ್  ಗತ್ತು.

 

    ಅವರು ಅರುಣಿದೇವಿಯವರ ಎದುರಿಗೆ 

 

ಬಂದೊಡನೆ ಅರುಣಾ ದೇವಿಯವರೇ ಎದ್ದು ನಿಂತು ಎರಡೂ ಕೈಗಳನ್ನು ಎತ್ತಿ ನಮಸ್ಕರಿಸಿದರು, ಪ್ರತ್ಯುತ್ತರವಾಗಿ ಮೇಜರ್ ರವರೂ ವಂದಿಸಿದರು.

 

     ಕ್ಷಣಕಾಲ ಅವರುಗಳು ಒಬ್ಬರನ್ನೊಬ್ಬರು ನೋಡುತ್ತಲೇ ನಿಂತರು, ಇಬ್ಬರ ಕಣ್ಣುಗಳಲ್ಲೂ ನೀರು ಧಾರಾಕಾರವಾಗಿ ಹರಿಯಿತು, ತಮ್ಮ ತಮ್ಮ ಹಳೆಯ ನೆನಪುಗಳೆಲ್ಲಾ ಕಣ್ಣು ಮುಂದೆ ಬಂದು ನಿಂತವು. ಇವರಿಬ್ಬರೂ ಸಂಧಿಸಿದ್ದು ಅರುಣಾ ದೇವಿಯವರ ಮದುವೆಗೂ ಮೊದಲು, ಆನಂತರದಲ್ಲಿ ಎಲ್ಲಿಯೂ, ಒಮ್ಮೆಯೂ ಭೇಟಿಯಾಗುವ ಪ್ರಮೇಯವೇ ಬಂದಿರಲಿಲ್ಲ. ಆನಂತರ ಅವರೀರ್ವರೂ ಉಭಯ ಕುಶಲೋಪರಿ ವಿಚಾರಿಸಿದ ನಂತರ ತಮ್ಮ ಜೊತೆಯಲ್ಲಿ ಬಂದಿದ್ದ ಅವರುಗಳ ಮೊಮ್ಮಕ್ಕಳನ್ನು ಪರಿಚಯ ಮಾಡಿಸಿದರು, ಆ ಹುಡುಗರು...... ಅವರುಗಳು ಹುಟ್ಟುವುದಕ್ಕೆ ಮೊದನಿಂದಲೂ ಈ ಎರಡೂ ಸಂಬಂಧಗಳು  ತುಂಬಾ ದೂರವಾಗಿದ್ದವು, ಅವರುಗಳಿಗೆ ಒಬ್ಬರನ್ನೊಬ್ಬರು ಪರಿಚಯವೇ ಇರಲಿಲ್ಲ, ಅದೂ ಈ ಅರುಣಾದೇವಿಯವರ ಮದುವೆಯ ವಿಷಯದಲ್ಲಿ ದಾಯಾದಿಗಳ ಕಲಹ ಸುಮಾರು ನಲವತ್ಮೂರು ವರ್ಷಗಳ ಕಾಲ  ನಡೆದು, ಈಗ ಒಂದು ಹಂತಕ್ಕೆ ಬಂದು ನಿಂತಿದೆ. ಆದರೆ

 

ಅರುಣಾ ದೇವಿಯವರಿಗೆ ಹಾಗೂ ಮನೋಜ್ ಅವರ ಅರಿವಿಗೇ ಬಾರದಂತೆ ಮೂರೂ ಮನೆಯ ಹಿರಿಯರ  ಮಧ್ಯೆ ಜಗಳ ತಂದಿಟ್ಟಿದ್ದು ನಾಲ್ಕನೆಯವರು, ಅವರುಗಳು ಮಾಡಿದ  ಅಚಾತುರ್ಯದಿಂದ, ಹಾಗೂ ಅವರ ತಂದಿಟ್ಟು ತಮಾಷೆ ನೋಡುವ ಬುದ್ಧಿಯಿಂದ ಇಷ್ಟು ದಿನ ಈ ಮೂರೂ ಮನೆಯವರು ತುಂಬಾ ದ್ವೇಷದಿಂದ ಬಹಳ ದೂರ ದೂರವಿದ್ದರು, ಅದು ಇಂದಿಗೆ ಬಹುಷಃ ಮುಗಿಯುವ ಲಕ್ಷಣಗಳು ಗೋಚರಿಸುತ್ತಿತ್ತು.

    

      ಆ ಮೂವರೂ ಮೊಮ್ಮಕ್ಕಳು ಒಂದೆಡೆ ಸೇರಿ ತಮ್ಮ ಸಂಬಂಧಗಳ ಬಗ್ಗೆ ಕುತೂಹಲದಿಂದ ತಿಳಿದುಕೊಳ್ಳುವ ಬಗ್ಗೆ ಹಾಗೂ ಮುಂದೆ ಈ ಮೂರೂ ಸಂಸಾರಗಳನ್ನು ಒಂದು ಮಾಡುವ ಬಗ್ಗೆ ಚರ್ಚಿಸುತ್ತಿದ್ದರು.

 

    ಮೇಜರ್ ಮನೋಜ್ ಹಾಗೂ ಅರುಣಾ ದೇವಿಯವರು ಒಂದು ಕಲ್ಲು ಬೇಂಚಿನ ಮೇಲೆ ಕುಳಿತು ತಮ್ಮ ನಲವತ್ಮೂರು  ವರ್ಷಗಳ ಹಿಂದಿನಿಂದ ನಡೆದ ವಿದ್ಯಮಾನಗಳನ್ನೆಲ್ಲಾ ಮೆಲುಕು ಹಾಕತೊಡಗಿದರು, ಅರುಣಾ ದೇವಿಯವರ ಮದುವೆಯ ನಂತರ ಏನೇನೆಲ್ಲಾ ಘಟನೆಗಳು ತಮ್ಮಗಳ ಕುಟುಂಬದಲ್ಲಿ

 

ನಡೆದವು, ಹಾಗೂ ಇವರಿಬ್ಬರಿಗೂ ಏನೊಂದೂ ತಿಳಿಯದಂತೆ ನಡೆದು ಈ ಮೂರೂ ಕುಟುಂಬಗಳಲ್ಲಿ ಅಂತಃಕಲಹಕ್ಕೆ ಕಾರಣವಾಗಿದ್ದನ್ನು ನೆನಪಿಸಿಕೊಂಡು ಪಶ್ಚಾತ್ತಾಪ ಪಟ್ಟರು. 

 

     ಮೇಜರ್ ಮನೋಜ್ ರವರು ತಮ್ಮ ನಿವೃತ್ತಿಯ ಮುಂಚಿನ ದಿನಗಳ ಸೇವೆಯಲ್ಲಿನ ಹಳೆಯ  ನೆನಪುಗಳನ್ನು ಅರುಣಾ ದೇವಿಯವರ ಹತ್ತಿರ ಹೇಳಿಕೊಳ್ಳುತ್ತಿದ್ದರು.  ಅರುಣಾದೇವಿಯವರೂ ಸಹ ತಮ್ಮ ಜೀವನದ ಅನುಭವಗಳನ್ನು ಹೇಳಿಕೊಂಡರು.

 

     ಅಂದು ಸಮಯ ಬೆಳಗಿನಜಾವ, ಮೇಜರ್ ಮನೋಜ್ ರವರ ಮುಂದಾಳತ್ವದಲ್ಲಿ ಸೈನಿಕರು...... ಉಗ್ರವಾದಿಗಳು ಉಳಿದುಕೊಂಡಿದ್ದ ಹಳೇ ಕಟ್ಟಡದ ಸುತ್ತಲೂ ಸುತ್ತುವರೆದು ಅವರ ಗುಂಡಿನ ದಾಳಿಗೆ ಪ್ರತಿಗುಂಡು ಚಲಾಯಿಸುತ್ತಾ ಒಬ್ಬೊಬ್ಬರೇ ಉಗ್ರವಾದಿಗಳನ್ನು ಬಲಿಪಡೆಯುವತ್ತ ನುಗ್ಗುತ್ತಿರುವ ಸಮಯದಲ್ಲಿ ಸುತ್ತಲೂ ಕಗ್ಗತ್ತಲು , ಇನ್ನೇನು ಎಲ್ಲಾ ಉಗ್ರವಾದಿಗಳನ್ನು ಸದೆಬಡಿದಿದ್ದು, ಒಳಗಿನಿಂದ ಯಾವುದೇ ಪ್ರತಿರೋಧ ಬರದಿದ್ದರಿಂದ ಸ್ವತಃ ಮೇಜರ್ ಅವರೇ ಆ ಹಳೇ  ಕಟ್ಟಡದ ಬಾಗಿಲು ಮುರಿದು ಮೊದಲು ಒಳನುಗ್ಗಿದ ಅವರಿಗೆ ಅದಾವುದೋ ಮೂಲೆಯಲ್ಲಿ ಒಬ್ಬ ಭಯೋತ್ಪಾದಕ 

 

ಅವಿತು ಕುಳಿತಿದ್ದನೋ....... ಅವನು ಚಲಾಯಿಸಿದ ಒಂದು ಗುಂಡುಗಳು ನೇರವಾಗಿ ಅವರ ಬಲಭಾಗದ ತೊಡೆ ತೂರಿಕೊಂಡು ಹೋಗಿ ಬಲವಾದ ಆಘಾತವನ್ನು ಉಂಟುಮಾಡಿದವು, ಕೂಡಲೇ ಕುಸಿದುಬಿದ್ದರು, ಮೇಜರ್, ಅಷ್ಟರಲ್ಲಿ ಅವರ ಬೆಂಗಾವಲು ಸೈನಿಕನೊಬ್ಬ ಕೂಡಲೇ ತನ್ನ ಬಂದೂಕಿನಿಂದ ಆ ಉಗ್ರವಾದಿಯ ದೇಹಕ್ಕೆ ಗುಂಡಿಟ್ಟು ಹೊಡೆದುರುಳಿಸಿದನು. ಸುಮಾರು ಏಳೆಂಟು ಉಗ್ರಗಾಮಿಗಳು ಪ್ರಾಣ ಕಳೆದುಕೊಂಡು, ಅವರ ಅಪಾರ ಶಸ್ತ್ರ ಗಳು ಸೈನ್ಯದ ಪಾಲಾಗಿದ್ದವು.

 

     ಕೂಡಲೆ ಮನೋಜ್ ರವರನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿದರು, ಅವರ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು, ಮೂರು ದಿನಗಳ ಚಿಕಿತ್ಸೆಯ ನಂತರ ಅಂತಿಮವಾಗಿ ಮೇಜರ್ ಅವರ ಬಲ ಕಾಲನ್ನು ತೊಡೆಯವರೆಗೂ ಕತ್ತರಿಸಿ ತೆಗೆದು ಹಾಕಿದರು,

ಈಗ ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೋಜ್ ರವರು ಅಂತಿಮವಾಗಿ ಒಂದು ಕಾಲಿಲ್ಲದೇ ಅಂಗವಿಕಲರಿಗಾಗಿ, ಸೈನ್ಯದಿಂದ ನಿವೃತ್ತಿಯಾಗಿ, ಮನೆಗೆ ಹಿಂದಿರುಗಿ, ವಿಶ್ರಾಂತಿ ಪಡೆಯುತ್ತಿದ್ದರು.

 

     ಅರುಣಾ ದೇವಿಯವರು ಕೇಳಿದರು "ಏಕೆ

 

ಮದುವೆಯಾಗಲಿಲ್ಲವೇ......ಎಂದು" ಅದಕ್ಕೆ ಮನೊಜ್ ರವರು ಈ ಸೈನ್ಯದ ಬಿಡುವಿರದ ಕೆಲಸಗಳ ಮಧ್ಯದಲ್ಲಿ ಅದೇಕೋ ಮದುವೆ, ಸಂಸಾರದ ಕಡೆಗೆ ಗಮನ ಹೋಗಲೇ ಇಲ್ಲ, ಎಂದರು.

 

     ಆದರೆ ಅರುಣಾ ದೇವಿಯವರ ಪತಿ, ಬಲರಾಂ ಅವರು ಹೃದಯಾಘಾತವಾಗಿ ನಿಧನವಾದದ್ದು ಮನೋಜ್ ರವರಿಗೆ ತಿಳಿದಿತ್ತು, ಆಗ ಅವರು ಕಾಶ್ಮೀರದಲ್ಲಿ ಕರ್ತವ್ಯದ ಮೇಲಿದ್ದರು, ಬಂದು ಅರುಣಾದೇವಿಯವರಿಗೆ ಸಾಂತ್ವನ ಹೇಳಲೂ ಸಾಧ್ಯವಾಗಲಿಲ್ಲ ಎಂದು ಮನೋಜ್ ರವರು ಅರುಣಾದೇವಿಯವರಲ್ಲಿ ಕ್ಷಮೇಕೋರಿದರು.

 

     ಅರುಣಾ ದೇವಿಯವರೂ ಸಹ ಮೇಜರ್ ರವರು ಉಗ್ರವಾದಿಗಳು ವಿರುದ್ಧ ದ ಹೋರಾಟದಲ್ಲಿ ತಮ್ಮ ಕಾಲು ಕಳೆದುಕೊಂಡಿದ್ದಕ್ಕೆ ಹಾಗೂ ಆ ವಿಷಯ ತಮಗೆ ತಿಳಿದಿದ್ದರೂ ಸಹ‌ ಇದುವರೆಗೂ ತಾವು ಮನೋಜ್ ರವರನ್ನು ‌ಒಮ್ಮೆಯೂ ಭೇಟಿಯಾಗದಿದ್ದಕ್ಕೆ ತುಂಬಾ ವ್ಯಥೆ ಪಟ್ಟು ಮನೋಜ್ ರವರಲ್ಲಿ ಕ್ಷಮೆ ಕೋರಿದರು.

 

    ಅರುಣಾ ದೇವಿಯವರು ಹೇಳಿದರು " ಹೋಗಲಿ ಬಿಡಿ, ಎಲ್ಲಾ ಸಂಶಯಗಳು ತಿಳಿಯಾಗುವ ಸಂದರ್ಭ

 

ಬಂದಿದೆ ಮುಂದಾದರೂ ಎಲ್ಲರೂ ಒಂದಾಗಿ ಬಾಳುವ" ಎಂದು ಹೇಳಿ, ಮನೋಜ್ ರವರು ತಮ್ಮ ಕಾಲು ಕಳೆದುಕೊಂಡಿದ್ದು  ತಿಳಿದಿದ್ದರೂ, ಅವರಿಗೆ ಒಮ್ಮೆ ಯೂ ಮನೋಜ್ ರವರನ್ನು ‌ಭೇಟಿಯಾಗಲು ಸಾಧ್ಯವೇ ಆಗಲಿಲ್ಲ,  ಕಾರಣ,  ಈ ಮದುವೆ ಆದಂದಿನಿಂದಲೂ ಮನೋಜ್ ಅವರ ಕುಟುಂಬದವರು ಅರುಣಾ ದೇವಿ ಹಾಗೂ ಬಲರಾಂ ಅವರು ಕುಟುಂಬದವರೊಂದಿಗೆ ದ್ವೇಷ ಸಾಧಿಸುತ್ತಾ ಬಹಳ ವರುಷಗಳವರೆಗೂ ಅದು ಮುಂದುವರೆದಿತ್ತು, ಅದೂ ಅಲ್ಲದೇ ಅರುಣಾ ದೇವಿಯವರ ಈ ಬಿಡುವಿರದ ಸಾಹಿತ್ಯ ಕೃಷಿ ಹುಲುಸಾಗಿ ಬೆಳೆಯುತ್ತಿದ್ದ ಸಂದರ್ಭದಲ್ಲಿ ಅವರು ತುಂಬಾ ಉತ್ತುಂಗದಲ್ಲಿದ್ದರು ಹಾಗೂ ಅವರಿಗೆ ಈ ಸಂಸಾರಗಳ ತಾಪತ್ರಯಗಳ ಬಗ್ಗೆ ಗಮನವೇ ಇರಲಿಲ್ಲ,  ಅಂಥಾ ಸಮಯದಲ್ಲಿ ಈ ಮೇಜರ್ ಮನೋಜ್ ಅವರ ಅಪಘಾತದ ವಿಷಯ ತಿಳಿದು ಮನದಲ್ಲಿ ತುಂಬಾ ನೊಂದಿದ್ದರು. ಆನಂತರದಲ್ಲಿ ಈ ವಿಷಯವನ್ನು ಎಲ್ಲರೂ ಮರೆತಿದ್ದರಿಂದ ಅರುಣಾದೇವಿಯವರೂ  ಮರೆತಿದ್ದರು. ಇಂದು ಮನೋಜ್ ರವರನ್ನು ನೋಡುವವರೆಗೂ  ಸಹ ಅವರು ತುಂಬಾ ಕಾತರರಾಗಿದ್ದರು.

 

      ತಮ್ಮ ಮೂರೂ ಕುಟುಂಬಗಳ ಮಧ್ಯೆ ನಾಲ್ಕನೆಯವರ ಪ್ರವೇಶದಿಂದ ಈ ನಲವತ್ಮೂರು ವರ್ಷಗಳು, ಒಂದಕ್ಕೊಂದು ಕುಟುಂಬದ ಮಧ್ಯೆ ಬಿರುಕು ಬಿಡಲು ಕಾರಣವಾಗಿದ್ದು ಅದು ಈಗ ಅರ್ಥವಾಗಿತ್ತು.

 

     ಡಾllಅಂಬೆಗಾಲು ಅರುಣಾ ದೇವಿಯವರು ಹಾಗೂ ಮೇಜರ್ ಮನೋಜ್ ಅವರ ಮಧ್ಯಸ್ಥಿಕೆಯಲ್ಲಿ ಬ್ಯಾರಿಸ್ಟರ್ ಬಲರಾಂ ಅವರ ಕೂಟುಂಬದವರನ್ನೂ ಮನವೊಲಿಸಿ ಮೂರೂ ಕುಟುಂಬಗಳ ಅಷ್ಟೂ ಮಂದಿ, ಅಂದರೆ‌ ಸುಮಾರು ನೂರು ಮಂದಿ,   ಒಂದು ದಿನ ಔತಣಕೂಟ ಏರ್ಪಡಿಸಿ ಸಂತೋಷದಿಂದ ತಮ್ಮ ತಮ್ಮ ಮನಸ್ತಾಪಗಳನ್ನು ಮರೆತು ಮತ್ತೆ ಮೊದಲಿನಂತೆ ಸಂಬಂಧಿಕರಾದರು.

      

    

-ರಾಜೇಂದ್ರ ಕುಮಾರ್ ಗುಬ್ಬಿ

                            ಕನಸುಗಳ ಕಥೆಗಾರ