Click here to Download MyLang App

ಪಿತೃ ವಿಜ್ಞಾನ ಪರಿಚಯ

ಪಿತೃ ವಿಜ್ಞಾನ ಪರಿಚಯ

e-book

ಪಬ್ಲಿಶರ್
ಹೇಮಂತ್ ಕುಮಾರ್ ಜಿ
ಮಾಮೂಲು ಬೆಲೆ
Rs. 150.00
ಸೇಲ್ ಬೆಲೆ
Rs. 120.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಲೇಖಕರ ನುಡಿ:- ನಮಗೆ ಪಿತೃ/ಪಿತರ ಎಂದರೆ ಗತಿಸಿದ ಪೂರ್ವಜರು ಎಂದು ತಿಳಿದಿರಬಹುದು. ಅಷ್ಟೇ ಅಲ್ಲದೆ ಪ್ರೇತ ಪಿತೃ, ದಿವ್ಯ ಪಿತೃ, ಋತು ಪಿತೃ ಎಂಬ ವಿಭಾಗವೂ ಇದೆ. ಸಾಹಿತ್ಯದಲ್ಲಿ ಪಿತೃ/ಪಿತರ ಶಬ್ದವು ಅಗ್ನಿ, ಸೋಮ, ಋತು, ಔಷಧಿ, ಯಮ, ದೇವ, ಪ್ರಾಣ, ಪ್ರಜಾಪತಿ, ಅನ್ನಾದಿ ಕನಿಷ್ಠ ೩೦ ಭಾವಗಳಲ್ಲಿ ಬಳಕೆಯಾಗಿದೆ. ಈ ಕಾಲಘಟ್ಟದಲ್ಲಿ ಕೇವಲ ವ್ಯಕ್ತ, ಇಂದ್ರಿಯಗಮ್ಯ ವಿಚಾರಗಳ ಚಿಂತನೆ ಮಾಡುವುದೇ ವೈಚಾರಿಕತೆ ಹಾಗೂ ವೈಜ್ಞಾನಿಕತೆ ಎಂದಾಗಿದೆ. ಆರ್ಷೇಯ ಸಾಹಿತ್ಯದ ಮುಖೇನ ಪೂರ್ವಿಕರು, ಅಂದರೆ ಪಿತೃಗಳ ಸಂಬಂಧೀ ಕೆಲ ಅಭೌತಿಕ ಅಗೋಚರ ವಿಚಾರಗಳ ಮೇಲೆ ವೇದ ವಿಜ್ಞಾನ ದೀಪದಿಂದ ಬೆಳಕು ಚೆಲ್ಲುವ ಪ್ರಯತ್ನವಿದು. ಈ ಸಂಕ್ಷಿಪ್ತ ಗ್ರಂಥವು ಅರ್ಥ ಗಾಂಭೀರ್ಯತೆ ಹಾಗೂ ವಿಷಯಗೌರವದ ದೃಷ್ಟಿಯಿಂದ ಸರ್ವಥಾ ಮೌಲ್ಯಯುತವಾಗಿದೆ. ಭಾಷಾ ಪ್ರಯೋಗ ಪ್ರೌಢವೆನ್ನಿಸಿದರೂ ಈ ಗ್ರಂಥದ ಗಹನ ಅನುಸಂಧಾನ ಮಾಡುವ ಯಾವುದೇ ಬುದ್ಧಿವಂತ ವ್ಯಕ್ತಿಗೆ ಇದರಲ್ಲಿ ಪ್ರತಿಪಾದಿತ ವಿಷಯಗಳ ಯಥಾರ್ಥ ವೈಜ್ಞಾನಿಕತೆಯು ಅವಶ್ಯಕವಾಗಿ ಗೋಚರಿಸುತ್ತದೆ. ಇದರಿಂದ ತನ್ನ ಮತ್ತು ಮನುಷ್ಯರೆಲ್ಲರ ಕಲ್ಯಾಣಕ್ಕಾಗಿ ಶಾಸ್ತ್ರೋಕ್ತ ಸನ್ಮಾರ್ಗದಲ್ಲಿ ಆಗ್ರಹ ಪೂರ್ವಕ ನಡೆಯಲು ಪ್ರೇರಣೆ ಸಿಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಋತ-ಸತ್ಯ, ಬ್ರಹ್ಮಸತ್ಯ-ದೇವಸತ್ಯ, ಅಗ್ನಿ-ಯಮ-ಸೋಮ, ವಸು-ರುದ್ರ-ಆದಿತ್ಯ, ಪೃಥ್ವೀ-ಅಂತರಿಕ್ಷ-ದ್ಯೌಃ ಇತ್ಯಾದಿಗಳ ವಿಶೇಷ ವಿಜ್ಞಾನ ಜಗತ್ತೂ ಈ ಪಿತೃವಿಜ್ಞಾನದಲ್ಲಿ ಅನಾವರಣಗೊಂಡಿದೆ. ಇನ್ನು ಔರ್ಧ್ವದೈಹಿಕ ಕ್ರಿಯೆ, ಉತ್ತರಕ್ರಿಯೆ, ಸಪಿಂಡೀಕರಣ, ಮಾಸಿಕ ಶ್ರಾದ್ಧ, ಸಾಂವತ್ಸರಿಕ ಶ್ರಾದ್ಧಾದಿ ಪ್ರಕ್ರಿಯೆಗಳೂ ವೇದೋಕ್ತ ವೈಜ್ಞಾನಿಕ ಮಹತ್ವ ಪಡೆದಿವೆ. ಅವುಗಳನ್ನು ವೇದೋಕ್ತ ವೈಜ್ಞಾನಿಕ ಕ್ರಮದಲ್ಲಿ ಅರ್ಥ ಮಾಡಿಕೊಳ್ಳುವ ಅಗತ್ಯತೆ ಸಮಾಜಕ್ಕಿದೆ. ರೂಪ, ರೂಪಾಂತರ, ಭೇದ, ಆಜ್ಞಾ, ಸಂಜ್ಞಾ, ಕ್ರಿಯಾ, ಕರಣ, ನಿರೂಪಣ, ಪ್ರಕಟ, ಪರಿಜ್ಞಾನ, ಸ್ಮೃತ, ನೃತ, ಕೃತ, ಕಥಾ ಎಂಬ ೧೪ ಮುಖ್ಯ ಅಂಶಗಳನ್ನೊಳಗೊಂಡದ್ದು ಯಾವುದೋ ಅದು ವಿಜ್ಞಾನವೆನ್ನಿಸಿಕೊಳ್ಳುತ್ತದೆ. ಈ ರೀತಿ ಪಿತೃ ಮತ್ತು ವಿಜ್ಞಾನ ಶಬ್ದಗಳ ಸ್ಥೂಲ ವಿವರಣೆ ಇರುತ್ತದೆ. ಈ ಚೌಕಟ್ಟಿನಲ್ಲಿ ಪಿತೃವಿಜ್ಞಾನದ ೪೦ ಮುಖ್ಯ ಬಿಂದುಗಳನ್ನು ಪಿತೃವಿಜ್ಞಾನ ಪರಿಚಯ ಎಂಬ ನಮ್ಮ ಹೊಸ ಪುಸ್ತಕದಲ್ಲಿ ಪರಿಚಯಿಸಲಾಗಿದೆ. ಪಿತೃವಿಜ್ಞಾನ ಪರಿಚಯದಿಂದ ಎಲ್ಲರೂ ಪಿತೃಭಕ್ತಿ ಪರಾಯಣರಾಗಲೀ ಎಂಬ ಸದಾಶಯದಿಂದ ಈ ಕಿರುಹೊತ್ತಿಗೆಯನ್ನು ಜಗದೊಳು ಇನ್ನಿಲ್ಲದಂತೆ ಮೆರೆವ ಕನ್ನಡ ಭಾಷೆಯಲ್ಲಿ ಸಂಕಲಿಸಿ ಲೋಕಾರ್ಪಣೆ ಮಾಡುತ್ತಿದ್ದೇನೆ. ತಪ್ಪುಗಳನ್ನೆಲ್ಲಾ ಮಾನುಷ ಸಹಜ ದೇಶ-ಕಾಲ ಪರಿಮಿತಿಯ ದೋಷಗಳೆಂದು ಪರಿಗಣಿಸಿ ಕ್ಷಮಿಬೇಕಾಗಿ ಪಿತೃಭಕ್ತ ಪ್ರಜೆಗಳಲ್ಲಿ ವಿನಮ್ರ ವಿನಂತಿ. ದೇವಪಿತೃಗಳು ಎಲ್ಲರಿಗೂ ಒಳಿತು ಮಾಡಲಿ ಎಂದು ಮನಸಾ ಪ್ರಾರ್ಥಿಸುತ್ತೇನೆ. ಈ ಪುಸ್ತಕವನ್ನು ಬರೆಯುವುದಕ್ಕೂ ಪ್ರಕಟಿಸುವುದಕ್ಕೂ ಸಹಕರಿಸಿದ ವಸುಧೈವ ಕುಟುಂಬಕ್ಕೆನ್ನ ನಮನ. - ಹೇಮಂತ್ ಕುಮಾರ್ ಜಿ B.E., MTech., (M.Sc. Phy) https://www.vedavidhya.com

Customer Reviews

No reviews yet
0%
(0)
0%
(0)
0%
(0)
0%
(0)
0%
(0)