
ಲೆಮೂರಿಯಾ - ನಿಧಿಯ ವಿಧಿ :
ಇಸವಿ 1550 ರಲ್ಲಿ, ಬೌದ್ಧ ಭಿಕ್ಕುಗಳ ಮುಖ್ಯಸ್ಥ ಸಾಮೆನೆರಾ ವಶದಲ್ಲಿದ್ದ ಅತ್ಯಂತ ಗೌಪ್ಯ ಮತ್ತು ಪುರಾತನ ಲೆಮೂರಿಯಾ ಖಂಡದ ಪಳೆಯುಳಿಕೆಗಳ ನಕ್ಷೆ, ಸ್ಪೇನ್ ನೌಕಾಪಡೆಯ ಕ್ಯಾಪ್ಟನ್ನಿನ ಕೈಸೇರಿ ನಡೆಯಿತೊಂದು ದುರಂತ. ಮತ್ತೆ ಇಸವಿ 2017 ರಲ್ಲಿ, ಅಂದಿನ ಲೆಮೂರಿಯಾ ಇಂದಿನ ಕುಮರಿಕಂಡದ ನಿಧಿಯ ಕಬಳಿಸಲು ಹೊಂಚುಹಾಕುತ್ತಿರುವ ಕಡಲುಗಳ್ಳರ ಬೆನ್ನುಬಿದ್ದ ಭಾರತೀಯ ನೌಕಾಪಡೆ. ಜೊತೆಜೊತೆಗೇ ತೆರೆದುಕೊಳ್ಳುವ ಲೆಮೂರಿಯಾದ ನಿಧಿಯ ಬಗೆಗಿನ ಮೈನವಿರೇಳಿಸುವ ದಂತಕಥೆ. ಕಡೆಗೂ ಯಾರ ಪಾಲಾಗುವುದು ಕುಮರಿಕಂಡದ ನಿಧಿ!!!