ಈ ರಕ್ತಚಂದನ ಎಂಬ ಕುತೂಹಲಕಾರಿ ಶೀರ್ಷಿಕೆಯ ಕಥಾ ಸಂಕಲನದಲ್ಲಿ ೧೭ ವಿವಿಧ ಸಣ್ಣ ಕತೆ ಮತ್ತು ನೀಳ್ಗತೆಗಳಿವೆ.
ಈ ಕತೆಗಳು ೨೦೧೫ ರಿಂದ ೨೦೧೮ರವರೆಗಿನ ಮೂರು ವರ್ಷದ ಅವಧಿಯಲ್ಲಿ ನಾಡಿನ ಜನಪ್ರಿಯ ವಾರಪತ್ರಿಕೆ ಮತ್ತು ಮಾಸಿಕಗಳಾದ ಸುಧಾ, ಕರ್ಮವೀರ, ಉತ್ಥಾನ, ತುಷಾರ ಮತ್ತು ವಿಕ್ರಮ ದಲ್ಲಿ ಬೆಳಕು ಕಂಡವು.
ನನ್ನ ಮೊದಲ ಸಣ್ಣಕತೆ –ವಜ್ರಬೇಟೆಯು ತುಷಾರ ಮಾಸಿಕದಲ್ಲಿ ೨೦೧೫ರಲ್ಲಿ ಪ್ರಕಟವಾಗಿ ನನ್ನ ಬರಹದ ಪ್ರಕ್ರಿಯೆಗೆ ಪ್ರೋತ್ಸಾಹ ನೀಡಿತು. ನಂತರ ಮಿಕ್ಕ ಕತೆಗಳು ಸಂಪಾದಕರ ವಿಶ್ವಾಸ ಮತ್ತು ಜನ ಮನ್ನಣೆಯನ್ನು ಪಡೆದುಕೊಂಡು ಒಂದೊಂದಾಗಿ ಸಾಹಿತ್ಯಲೋಕಕ್ಕೆ ಪರಿಚಯವಾದವು.
ಇದರಲ್ಲಿ ಪತ್ತೇದಾರಿ, ಸಾಮಾಜಿಕ ಮತ್ತು ರಹಸ್ಯದ ಹೂರಣವಿರುವ ವೈವಿಧ್ಯಮಯ ಕತೆಗಳು ನಿಮ್ಮ ಅಭಿರುಚಿಗೆ ತಕ್ಕುದಾಗಿದ್ದು ರಂಜಿಸಬಹುದು ಎಂದು ನಂಬಿದ್ದೇನೆ