“ತರಂಗ” ಜನಪ್ರಿಯ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿ ಓದುಗರ ಮೆಚ್ಚುಗೆ ಗಳಿಸಿದ ಕಾದಂಬರಿ ಇದು.
ರಾಜ್ಯ ಮಟ್ಟದ ಕ್ರಿಕೆಟ್ ಪಟು ಧೀರಜ್ ಮ್ಯಾಚೊಂದನ್ನು ಮುಗಿಸಿ ತನ್ನೂರು ಮೈಸೂರಿಗೆ ವಾಪಸ್ಸಾಗುತ್ತಿರುವಾಗ ಆಟೋದಲ್ಲಿ ಬೆನ್ನಿಗೆ ಯಾವುದೋ ವಸ್ತು ಒತ್ತುತ್ತದೆ. ಧೀರಜ್ ಬ್ಯಾಂಕೊಂದರ ಉದ್ಯೋಗಿ. ಅವನು ಕ್ರೀಡಾಪಟು ಎಂಬ ಕಾರಣದಿಂದ ಅವನಿಗೆ ಉದ್ಯೋಗ ದೊರಕಿರುತ್ತದೆ. ಆಟೋದಲ್ಲಿ ಸಿಕ್ಕಿದ್ದು ಒಂದು ವ್ಯಾನಿಟಿ ಬ್ಯಾಗು. ಅದನ್ನು ವಾಪಸ್ಸು ವಾರಸುದಾರರಿಗೆ ತಲುಪಿಸುವ ಸಲುವಾಗಿ ಮನೆಗೆ ತರುತ್ತಾನೆ. ಅದರಲ್ಲಿ ಒಬ್ಬಳು ಯುವತಿಯ ಫೋಟೊ, ಮತ್ತು ಒಂದು ಮೈಸೂರಿನ ಕರಕುಶಲ ಮಳಿಗೆಯ ರಶೀದಿ ಸಿಗುತ್ತದೆ. ಕರಕುಶಲ ಮಳಿಗೆಯಲ್ಲಿ ವಿಚಾರಿಸಿದಾಗ ರಾಜಾಸ್ಥಾನ ರಾಜ್ಯದ ಉದಯಪುರದ ವಿಳಾಸ ಸಿಗುತ್ತದೆ.
ಅಲ್ಲಿಂದ ಶುರುವಾಗುತ್ತದೆ ಕಾದಂಬರಿ!
ಮೈಸೂರಿನಲ್ಲಿ ಆಟೋದಲ್ಲಿ ಸಿಕ್ಕ ಒಂದು ವ್ಯಾನಿಟಿ ಬ್ಯಾಗು ಧೀರಜ್ ಉದಯಪುರದ ಹುಡುಗಿಯೊಬ್ಬಳ ಕಡೆಗೆ ಎಳೆಯುತ್ತದೆ. ವಿಚಿತ್ರ ಘಟನೆಗಳು ಅವನನ್ನು ಸೆಳೆಯುತ್ತವೆ!! ಸಂಮೋಹಿನಿಯಂತೆ ಅವನನ್ನು ಪರವಶನನ್ನಾಗಿ ಮಾಡಿದ ಯುವತಿಯ ಅನ್ವೇಷಣೆ ಹೇಗೆ ಕೊನೆಗೊಳ್ಳುತ್ತದೆ? ಆಕೆ ಇವನಿಗೆ ಸಿಗುತ್ತಾಳೆಯೆ?
ಆ ಸುಂದರ ರಾಜಾಸ್ಥಾನಿ ಹುಡುಗಿಗಾಗಿ ಕನಸಿದ ಧೀರಜನ ಹುಡುಕಾಟ ಕೊನೆಗೆ ಎಲ್ಲಿಗೆ ತಲುಪುತ್ತದೆ? ನಿಜಕ್ಕೂ ಸುನಯನಾ ಅವನಿಗೆ ಸಿಗುತ್ತಾಳಾ? ಈ ಕುತೂಹಲಕ್ಕೆ ಕಾದಂಬರಿಯ ಕೊನೆಯಲ್ಲಿ ಉತ್ತರ ಸಿಗುತ್ತದೆ!
ಎತ್ತಣ ಮಾಮರ ಎತ್ತಣ ಕೋಗಿಲೆ! (ಇಬುಕ್), ಎಸ್.ಜಿ.ಶಿವಶಂಕರ್,Ettana Maamara Ettana kogile,S.G.Shivashankar