ಪ್ರಕಾಶಕರು: ವಂಶಿ ಪ್ರಕಾಶನ
Publisher: Vamshi Prakashana
ಜೇಮ್ಸ್ ಅಲೆನ್ ರವರು ವಿಶ್ವದಾದ್ಯಂತ 'ವ್ಯಕ್ತಿ ವಿಕಾಸ' ಮತ್ತು ‘ಸ್ಫೂರ್ತಿದಾಯಕ ಬರಹ’ಗಳಿಗೆ ಪ್ರಸಿದ್ಧರಾಗಿರುತ್ತಾರೆ. ಅವರ ಬಹಳ ಪ್ರಸಿದ್ಧವಾದ ಒಂದು ಕೃತಿ “As man thinketh” (1903) ಆಗಿದ್ದು, ಇದನ್ನೇ ‘ವ್ಯಕ್ತಿಯ ಅರಿವಿನಂತೆ ವ್ಯಕ್ತಿತ್ವ’ ಎನ್ನುವ ಹೆಸರಿನಲ್ಲಿ ಅನುವಾದಿಸಲಾಗಿದೆ.
ಈ ಕೃತಿಯು ಹಲವು ಬಾರಿ ಮುದ್ರಣಗೊಂಡಿದೆ. ಹಾಗೆಯೇ ಅನೇಕ ಪ್ರಕಾಶಕರಿಂದ ಪ್ರಕಟಗೊಂಡಿದೆ. ವಿಶ್ವದ ಹಲವು ಭಾಷೆಗಳಿಗೆ ತರ್ಜುಮೆ ಗೊಂಡಿದೆ.
“ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನದ ಶಿಲ್ಪಿಗಳು ತಾವೇ ಆಗಿರುತ್ತಾರೆ.”
ಯಾರು ತಮ್ಮ ಚಿಂತನೆಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ಉತ್ತೇಜಿಸುತ್ತಾರೋ, ಅಂತಹವರಿಗೆ ಮನಸ್ಸು ಎಂಬುದು ಸನ್ನಡತೆಯ ಆಂತರಿಕ ವಸ್ತ್ರವಿನ್ಯಾಸ ಹಾಗೂ ಸನ್ನಿವೇಶದ ಬಾಹ್ಯ ವಸ್ತ್ರ ನೇಯ್ಗೆ ಮಾಡುವಂತಹ ಒಬ್ಬ ನುರಿತ ನೇಕಾರನಿದ್ದಂತೆ, ಅಂತಹವರು ಇದುವರೆಗೂ ಅಜ್ಞಾನದಿಂದ ಮತ್ತು ನೋವಿನಿಂದ ನೇಯ್ದಿರಬಹುದಾ ದಂತಹವರು; ಆದರೆ ಇನ್ನು ಮುಂದೆ ಭವಿಷ್ಯದಲ್ಲಿ ತಿಳುವಳಿಕೆ ಮತ್ತು ಸಂತಸದಿಂದ ನೇಯ್ಗೆ ಮಾಡುತ್ತಾರೆ.
-ಜೇಮ್ಸ್ ಅಲೆನ್
ಪುಟಗಳು: 72
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !