ಒತ್ತಡದಿಂದ ನಿರಾಳದೆಡೆಗೆ
ನಿಮಗೆ ಒತ್ತಡ ಅನ್ನಿಸುತ್ತಿದೆಯಾ?
ಕೆಲಸದ ಒತ್ತಡ,
ಮನಸ್ಸು ನಿಲ್ಲದೇ ಓಡುವುದು,
ರಾತ್ರಿ ನಿದ್ರೆ ಬರದೇ ಕಳವಳ,
ಸಣ್ಣ ವಿಷಯಕ್ಕೂ ಆತಂಕ,
ಒಳಗೊಂದು ಖಾಲಿತನ…
ಇವೆಲ್ಲಾ ನಿಮಗೆ ಪರಿಚಿತವಾಗಿದ್ದರೆ,
ಈ ಪುಸ್ತಕ ನಿಮ್ಮಿಗಾಗಿ.
ಈ ಪುಸ್ತಕವು
“ಒತ್ತಡವನ್ನು ಹೇಗೆ ಕಡಿಮೆ ಮಾಡಬೇಕು?” ಎಂದು ಕೇಳುವುದಿಲ್ಲ.
ಅದಕ್ಕಿಂತ ಮಹತ್ವದ ಪ್ರಶ್ನೆಯನ್ನು ಕೇಳುತ್ತದೆ:
ಒತ್ತಡವೇ ಯಾಕೆ ಉಂಟಾಗುತ್ತದೆ?
ಒಂದೇ ಪರಿಸ್ಥಿತಿಯಲ್ಲಿ
ಒಬ್ಬ ಶಾಂತವಾಗಿರುತ್ತಾನೆ,
ಇನ್ನೊಬ್ಬ ತೀವ್ರ ಒತ್ತಡಕ್ಕೆ ಒಳಗಾಗುತ್ತಾನೆ.
ಏಕೆ?
ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯಾಣವೇ
ಒತ್ತಡದಿಂದ ನಿರಾಳದೆಡೆಗೆ.
ಈ ಪುಸ್ತಕದಲ್ಲಿ ನೀವು ಓದುವ ಕಥೆಗಳು
ಕಾಲ್ಪನಿಕವಲ್ಲ.
ಅವು ನಿಜವಾದ ಅನುಭವಗಳ ಆಧಾರದ ಮೇಲೆ ಬರೆಯಲ್ಪಟ್ಟವು.
ಹೆಸರುಗಳನ್ನು ಮಾತ್ರ ಬದಲಿಸಲಾಗಿದೆ.
ಈ ಕಥೆಗಳಲ್ಲೇ
ನೀವು ನಿಮ್ಮನ್ನೇ ಕಾಣಬಹುದು.
ಇಲ್ಲಿ ಧ್ಯಾನವನ್ನು
ಒಂದು ಕಠಿಣ ಅಭ್ಯಾಸವಾಗಿ
ಅಥವಾ ಯಾವುದೋ ವಿಶೇಷ ಸಾಧನೆಯಂತೆ ಹೇಳಲಾಗುವುದಿಲ್ಲ.
ಧ್ಯಾನವೆಂದರೆ ಇಲ್ಲಿ
ನಿಮ್ಮೊಳಗೆ ಈಗಾಗಲೇ ಇರುವ ಅರಿವನ್ನು , ಆನಂದವನ್ನು ಗಮನಿಸುವುದು.
ದೇಹದಲ್ಲಿ ಏನಾಗುತ್ತಿದೆಯೋ,
ಮನಸ್ಸಿನಲ್ಲಿ ಏನೋ ನಡೆಯುತ್ತಿದೆಯೋ,
ಭಾವನೆಗಳು ಹೇಗೆ ಬರುತ್ತಿವೆ–ಹೋಗುತ್ತಿವೆಯೋ
— ಇವೆಲ್ಲವನ್ನೂ ಮೃದುವಾಗಿ ನೋಡುವ ಕಲಿಕೆ.
ಈ ಪುಸ್ತಕವನ್ನು ಓದುವಾಗ
ನೀವು ಹೋರಾಡಬೇಕಾಗಿಲ್ಲ,
ನಿಮ್ಮನ್ನು ಬದಲಾಯಿಸಿಕೊಳ್ಳಬೇಕಾಗಿಲ್ಲ.
ಕೇವಲ
ನಿಮ್ಮ ಅನುಭವವನ್ನು ಗಮನಿಸುವುದು ಸಾಕು.
ಅಲ್ಲಿಯೇ
ಒತ್ತಡ ಸಡಿಲಗೊಳ್ಳಲು ಆರಂಭಿಸುತ್ತದೆ.
ಇದು ವೇಗವಾಗಿ ಓದುವ ಪುಸ್ತಕವಲ್ಲ.
ನಿಧಾನವಾಗಿ, ನಿಮ್ಮ ಸಮಯದಲ್ಲಿ ಓದಿ.
ಕೆಲವು ಸಾಲುಗಳು ನಿಮ್ಮೊಳಗೆ
ನಿಶ್ಶಬ್ದವನ್ನು, ನಿರಾಳವನ್ನು ಉಂಟುಮಾಡಬಹುದು.
ಅದೇ ಸಾಕು.