ಲೇಖಕರು: ವಿಠಲ್ ಶೆಣೈ
- ಅಮೇರಿಕಾದಲ್ಲಿ ಹುಟ್ಟಿ ಬೆಳೆದ ವಿವೇಕ್, ಭಾರತಕ್ಕೆ ಹಿಂತಿರುಗಿ ಬಂದು ಪ್ಲಸ್ ಮನಿ ಎಂಬ ತನ್ನದೇ ಸ್ಟಾರ್ಟ್ ಅಪ್ ಕಂಪನಿ ತೆರೆದಿದ್ದಾನೆ. ಆದರೆ ಅಕ್ರಮವಾಗಿ ಬಿಟ್ ಕಾಯಿನ್ ಏಟಿಎಂ ತೆರೆದ ಆರೋಪದಲ್ಲಿ ಈಗ ಜೈಲು ಪಾಲಾಗಿದ್ದಾನೆ. ಅವನು ಮಾಡಿದ ತಪ್ಪಾದರೂ ಏನು? ಅವನ ಮುಂದಿನ ದಾರಿಯೇನು?
- ಸೂರಜ್ ಎಂಬ ರಿಯಲ್ ಎಸ್ಟೇಟ್ ಮ್ಯಾಗ್ನೆಟ್ ಗೆ ತನ್ನ ಬಳಿ ಇರುವ ಕಪ್ಪು ಹಣವನ್ನು ಮರೆಮಾಚಿ ಇಡುವ ಚಿಂತೆ. ಅವನ ಅಕ್ಕನ ಮಗ ಪೃಥ್ವಿಗೆ ಬೈಕ್ ಡೀಲರ್ ಶಿಪ್ ತೆರೆಯಲು ದುಡ್ಡು ಬೇಕಾಗಿದೆ. ವಿವೇಕ್ ಗೆ ತನ್ನ ಮೇಲಿನ ಆರೋಪವನ್ನು ಅಲ್ಲಗಳೆಯಬೇಕಾಗಿದೆ. ಉಮಾಗೆ ತಾನು ಕೈ ಹಾಕಿದ ಕೇಸ್ ಗೆ ವಿವೇಕ್ ನ ಸಹಾಯ ಬೇಕಾಗಿದೆ. ಯಾರು ಗೆಲ್ಲುತ್ತಾರೆ? ಯಾರು ತಮ್ಮ ಗುರಿ ತಲುಪುತ್ತಾರೆ?
- ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವ ಪ್ರೇಮ್ ಮತ್ತು ಉಮಾ ಕೇವಲ ಹನ್ನೆರಡು ನಿಮಿಷಗಳಲ್ಲಿ ಕೋಟ್ಯಧಿಪತಿಗಳಾಗುವ ಸಾಧ್ಯತೆಗಳು ಅವರ ಮುಂದೆ ಬಂದು ಒದಗಿದೆ. ಹೇಗೆ? ಯಾವ ರೀತಿಯಲ್ಲಿ? ಅದರಲ್ಲಿ ರಿಸ್ಕ್ ಇಲ್ಲವೇ?
- 1968ನೆಯ ಇಸವಿಯಲ್ಲಿ ಒಂದು ಗ್ರಾಂ ಚಿನ್ನದ ಬೆಲೆ 16 ರೂಪಾಯಿಯಾಗಿತ್ತು. ಆಗ 16 ರೂಪಾಯಿಗೆ ಐದು ಕೆ.ಜಿ ಅಕ್ಕಿ, ಎರಡು ಕೆ.ಜಿ ಸಕ್ಕರೆ, ಸಿನೆಮಾ ಟಿಕೆಟ್ ಎಲ್ಲವೂ ಸಿಗುತ್ತಿತ್ತು. ಆದರೆ ಇವತ್ತು 16 ರೂಪಾಯಿಗೆ ಒಂದು ಕಪ್ ಚಹಾ ಕೂಡಾ ಸಿಗಲಿಕ್ಕಿಲ್ಲ. ಆದರೆ ಒಂದು ಗ್ರಾಂ ಚಿನ್ನವನ್ನು ಮಾರಿದರೆ ಅದೇ ಐದು ಕೆ.ಜಿ ಅಕ್ಕಿ, ಎರಡು ಕೆ.ಜಿ ಸಕ್ಕರೆ, ಸಿನೆಮಾ ಟಿಕೆಟ್ ಎಲ್ಲವೂ ಸಿಗುತ್ತದೆ. ರೂಪಾಯಿಯ ಮೌಲ್ಯ ಯಾಕೆ ಕುಸಿದಿದೆ? ಚಿನ್ನದ ಬೆಲೆ ಯಾಕೆ ಗಗನಕ್ಕೇರಿದೆ?
ಮೇಲಿನ ನಾಲ್ಕು ಪ್ರಶ್ನೆಗಳನ್ನು ಓದಿದ ಮೇಲೆ ಕೆರಳಿರುವ ನಿಮ್ಮ ಕುತೂಹಲ ಪುಸ್ತಕ ಓದಿಯೇ ತಣಿಯಬೇಕು !
ಬಂದಿದೆ ಬ್ಲಾಕ್ ಚೇನ್, ಬಿಟ್ ಕಾಯಿನ್, ಕ್ರಿಪ್ಟೋ ಕರೆನ್ಸಿಯಂತಹ ದುಡ್ಡಿನ ಕುರಿತ ನಮ್ಮ ನಂಬಿಕೆ, ತಿಳುವಳಿಕೆಯನ್ನು ಅಲುಗಾಡಿಸುವ ತಂತ್ರಜ್ಞಾನದ ಸುತ್ತ ಹೆಣೆಯಲಾದ ಹೊಚ್ಚ ಹೊಸ ಕಾದಂಬರಿ "ನಿಗೂಢ ನಾಣ್ಯ"
ಪುಟಗಳು: 168
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !