Click here to Download MyLang App

ವಿಕಸಿತ ವ್ಯಕ್ತಿತ್ವ ಮತ್ತು ದಶಾಯಾಮಗಳ ಮಹತ್ವ,    ಡಾ. ಕೆ. ಚಿದಾನಂದ ಗೌಡ,  Vikasita Vyaktitva Mattu Dashayamagala Mahatva,  Dr. K. Chidananda Gowda,

ವಿಕಸಿತ ವ್ಯಕ್ತಿತ್ವ ಮತ್ತು ದಶಾಯಾಮಗಳ ಮಹತ್ವ (ಇಬುಕ್)

e-book

ಪಬ್ಲಿಶರ್
ಡಾ. ಕೆ. ಚಿದಾನಂದ ಗೌಡ
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana 

 

ನನ್ನ ಈ ಹೊತ್ತಗೆ “ವಿಕಸಿತ ವ್ಯಕ್ತಿತ್ವ ಮತ್ತು ದಶಾಯಾಮಗಳ ಮಹತ್ವ” ಈ ರೂಪದಲ್ಲಿ ಪ್ರಕಟಗೊಳ್ಳಲು ಕಾರಣರಾದ “ಸಪ್ನಾ ಬುಕ್ ಹೌಸ್” ಇವರಿಗೆ ನಾನು ಕೃತಜ್ಞನಾಗಿದ್ದೇನೆ. ಈ ಬೃಹತ್ ಪುಸ್ತಕ ಮಳಿಗೆಗಳ ಆಡಳಿತ ಮಂಡಳಿ, ಮುಖ್ಯವಾಗಿ ಅವುಗಳ ಮಾಲಿಕರಾದ ಶ್ರೀ ನಿತಿನ್ ಶಾ ಅವರು, ಕರ್ನಾಟಕದ ಮುಖ್ಯ ನಗರಗಳಲ್ಲಿ ಪುಸ್ತಕಮಳಿಗೆಗಳನ್ನು ಸ್ಥಾಪಿಸಿ, ಕನ್ನಡ ಪುಸ್ತಕಗಳು ಓದುಗರಿಗೆ ಸುಲಭವಾಗಿ ಲಭ್ಯವಾಗಿ ಮಾಡುವುದರ ಮೂಲಕ, ಕನ್ನಡಿಗರಲ್ಲಿ, ಅದರಲ್ಲೂ ಬಹುಮುಖ್ಯವಾಗಿ ಯುವಜನರಲ್ಲಿ, ಓದುವ ಹವ್ಯಾಸವನ್ನು ಬೆಳೆಸಿ, ಕನ್ನಡ ನಾಡು ಮತ್ತು ನುಡಿಗೆ ಅಮೂಲ್ಯ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ.

ಒಂದು ರೂಪಕ ಕತೆ ಹೀಗಿದೆ: ಸಾಧುಗಳೊಬ್ಬರ ತಪಸ್ಸಿಗೆ ಒಲಿದ ದೇವರು ಪ್ರತ್ಯಕ್ಷವಾದಾಗ ಸಾಧುಗಳು, “ನಾನು ವಿಶ್ವವನ್ನೇ ಉತ್ತಮ ಮಟ್ಟಕ್ಕೆ ಪರಿವರ್ತಿಸ ಬೇಕೆಂದಿದ್ದೇನೆ. ಅದಕ್ಕಾಗಿ ನಿನ್ನ ಅನುಗ್ರಹ ಬಯಸಿ ತಪಸ್ಸುಮಾಡಿದೆ" ಎಂದಾಗ ದೇವರು, “ನನ್ನ ಪೂರ್ಣ ಅನುಗ್ರಹವಿದೆ. ನಿನ್ನ ಕೆಲಸ ಪ್ರಾರಂಭಿಸು" ಎಂದರು. “ಆದರೆ ಈ ವಿಶ್ವವು ತುಂಬಾ ದೊಡ್ಡದಾಗಿದ್ದು ನಾನು ಬಹಳ ಸಣ್ಣವನೂ ತೃಣಪ್ರಾಯನೂ ಆಗಿದ್ದೇನೆ ಎಲ್ಲಿಂದ ಪ್ರಾರಂಭಿಸುವುದು ಮತ್ತು ಏನು ಮಾಡುವುದೆಂದೇ ನನಗೆ ತೋಚುತ್ತಿಲ್ಲ" ಎಂದು ಹತಾಶಭಾವದಿಂದ ಸಾಧುಗಳು ಹೇಳಿದಾಗ ದೇವರು, “ಅದು ಬಹಳ ಸುಲಭ. ನೀನು ಪ್ರತಿದಿನವೂ ಎಲ್ಲ ಸ್ತರಗಳಲ್ಲೂ ಒಳ್ಳೆಯವನಾಗುತ್ತಾ ಹೋಗು. ಅಷ್ಟೇ ಸಾಕು” ಎಂದರು. ಅದಕ್ಕೆ ದಾರಿಯೇನೆಂದು ಸಾಧುಗಳು ಕೇಳಿದಾಗ ದೇವರು, "ನೀನು ಇತರರೊಡನೆ ಸ್ಪರ್ಧಿಸುವುದಲ್ಲ. ನೀನು ನಿನ್ನೊಡನೆಯೇ ಸ್ಪರ್ಧಿಸಬೇಕು. ನಿನ್ನ ವ್ಯಕ್ತಿತ್ವದ ಎಲ್ಲ ಆಯಾಮಗಳು ನಿನ್ನೆಗಿಂತ ಇಂದು, ಇಂದಿಗಿಂತ ನಾಳೆ, ಹೆಚ್ಚು ಹೆಚ್ಚಾಗಿ ವಿಕಾಸ ಹೊಂದುತ್ತಾ ಹೋದಂತೆಲ್ಲಾ, ನೀನು ಪ್ರತಿದಿನ ಹೆಚ್ಚೆಚ್ಚು ಪರಿಪೂರ್ಣನಾಗುತ್ತಾ ಹೋಗುವೆ. ಆಗ ನಿನ್ನನ್ನು ನೋಡಿ, ನಿನ್ನನ್ನು ಅನುಸರಿಸಿ ಇತರರು ಕೂಡ ಪರಿಪೂರ್ಣರಾಗುತ್ತಾ ಹೋಗುತ್ತಾರೆ. ಇದೇ ಸ್ವಪರಿವರ್ತನೆಯಿಂದ ವಿಶ್ವಪರಿವರ್ತನೆ ಮಾಡುವ ಗುಟ್ಟು" ಎಂದು ಹೇಳಿ ಅದೃಶ್ಯರಾದರು. ಇದೇ ವ್ಯಕ್ತಿತ್ವವಿಕಾಸದ ಸಾರಾಂಶ.

ಜಾಗತಿಕ ಮಟ್ಟದ ಚಿಂತನೆಯ ಮತ್ತು ಸ್ಥಳೀಯ ಕ್ರಿಯಾತ್ಮಕತೆಯ ನೆಲೆಯಲ್ಲಿ ಜೀವನದ ಸಮತೋಲನಕ್ಕಾಗಿ ಮಾನವನ ವ್ಯಕ್ತಿತ್ವದಲ್ಲಿ ಈ ೧೦ ಆಯಾಮಗಳನ್ನು ಗುರುತಿಸುವುದು ಸಾಧ್ಯವಾಗುತ್ತದೆ. ಇವುಗಳಲ್ಲಿ ಸಾಮರಸ್ಯ ಸಾಧಿಸುವುದು ವ್ಯಕ್ತಿತ್ವದ ಸರ್ವಾಂಗೀಣ ವಿಕಾಸಕ್ಕೆ ಅತ್ಯಾವಶ್ಯಕ. ಈ ಹತ್ತು ಆಯಾಮಗಳನ್ನು ಹೀಗೆ ಹೆಸರಿಸಬಹುದು:

೧. ದೇಹ: 
೨. ಮನಸ್ಸು: “
೩. ಸ್ಮೃತಿ : 
೪. ಅಹಂ : 
೫. ಬುದ್ಧಿ : 
೬. ಹೃದಯ ಮತ್ತು ಆತ್ಮ : 
೭. ಗೃಹ : 
೮. ಸಮಾಜ ಮತ್ತು ರಾಜ್ಯ: 
೯. ರಾಷ್ಟ್ರ : 
೧೦. ವಿಶ್ವ ಮತ್ತು ಬ್ರಹ್ಮಾಂಡ : 

ಸಾಮಾನ್ಯವಾಗಿ ನಾವು ಮಾತಾಡುವಾಗಲೂ, ವ್ಯಕ್ತಿತ್ವದ ಹಲವು ಆಯಾಮ ಗಳನ್ನು ಹೆಸರಿಸಿ, ವ್ಯಕ್ತಿಯನ್ನು ಗುರುತಿಸುತ್ತೇವೆ. ದೈಹಿಕ ಆಯಾಮದ ಹಿನ್ನೆಲೆಯಲ್ಲಿ ನಾವು “ಅವನು ಎತ್ತರವಾಗಿದ್ದಾನೆ”, ‘ಅವಳು ಸುಂದರಿಯಾಗಿದ್ದಾಳೆ” ಎನ್ನುತ್ತೇವೆ. ಮಾನಸಿಕ ಆಯಾಮದ ಹಿನ್ನೆಲೆಯಲ್ಲಿ "ಅವನು ಬಹಳ ಯೋಚಿಸಿ ಮಾತಾಡು ವವನು” ಎನ್ನುತ್ತೇವೆ. “ಭಗವದ್ಗೀತೆಯ ಎಲ್ಲಾ ಶ್ಲೋಕಗಳನ್ನು ಅವನು ಚಾಚೂ ತಪ್ಪದೆ ಹೇಳಬಲ್ಲ” ಎಂದು ಸ್ಮೃತಿಯ ಹಿನ್ನೆಲೆಯಲ್ಲಿ ಹೇಳುತ್ತೇವೆ. “ಅವನಿಗೆ ಹಮ್ಮು- ಬಿಮ್ಮುಗಳು ಜಾಸ್ತಿ” ಎಂದು ಅಹಮ್ಮಿನ ಆಯಾಮದ ಹಿನ್ನೆಲೆಯಲ್ಲಿ ನುಡಿಯುತ್ತೇವೆ. ಬೌದ್ಧಿಕ ಹಿನ್ನಲೆಯಲ್ಲಿ, “ಅವನು ಗಣಿತದ ಯಾವುದೇ ಸಮಸ್ಯೆಯನ್ನು ಬಿಡಿಸಬಲ್ಲ” ಎನ್ನುತ್ತೇವೆ. ಹೃದಯ ಮತ್ತು ಆತ್ಮದ ಹಿನ್ನೆಲೆಯಲ್ಲಿ, “ಆಕೆಯಲ್ಲಿ ಹೃದಯಶ್ರೀಮಂತಿಕೆ ಯಿದೆ”, “ಗಾಂಧೀಜಿ ಆತ್ಮಶಕ್ತಿಯಿಂದ ಬ್ರಿಟೀಷರನ್ನು ಮಣಿಸಿದರು” ಎನ್ನುತ್ತೇವೆ. ‘ಆಕೆ ಅತ್ಯುತ್ತಮ ಗೃಹಿಣಿ’ ಎಂದು ಗೃಹದ ಹಿನ್ನೆಲೆಯಲ್ಲಿ ಹೇಳುತ್ತೇವೆ. ಸಮಾಜ ಮತ್ತು ರಾಜ್ಯದ ಹಿನ್ನೆಲೆಯಲ್ಲಿ “ಅವನು ಸೇವಾ ಮನೋಭಾವದವನು”, “ಅವನು ಕರ್ನಾಟಕ ದವನು” ಎನ್ನುತ್ತೇವೆ. ಪರದೇಶದಲ್ಲಿದ್ದಾಗ ಇವರು ಭಾರತೀಯರು, ಇವರು ಜಪಾನಿನವರು” ಎಂದೆಲ್ಲಾ ಗುರುತಿಸುತ್ತೇವೆ. ವ್ಯಶ್ವಿಕ ಆಯಾಮದ ಹಿನ್ನೆಲೆಯಲ್ಲಿ “ನಾವೆಲ್ಲಾ ವಿಶ್ವರಾಜ್ಯದ ಪ್ರಜೆಗಳು” ಎಂದು ಒಗ್ಗಟ್ಟನ್ನು ಸಾರುತ್ತೇವೆ.

ಇಲ್ಲಿ ಗುರುತಿಸಿರುವ ಹತ್ತು ಆಯಾಮಗಳಲ್ಲಿ ಸುಪ್ರಸಿದ್ಧರಾಗಿರುವವರ ಉದಾಹರಣೆಗಳನ್ನು ಹೇಳುವುದರ ಜತೆಜತೆಗೆ ಆಯಾ ಕ್ಷೇತ್ರದ ವಿಕಸನಕ್ಕಾಗಿ ಆಯಾ ಕ್ಷೇತ್ರದ ತಜ್ಞರು ಸೂಚಿಸಿರುವ ಮಾರ್ಗಗಳನ್ನು ಕೂಡ ಈ ಹೊತ್ತಗೆಯಲ್ಲಿ ವಿವರ ವಾಗಿ ನೀಡಲಾಗಿದೆ. ಇದನ್ನು ಬಳಸಿ ನಮ್ಮ ಯುವಜನರು ತಂತಮ್ಮ ವ್ಯಕ್ತಿತ್ವಗಳನ್ನು ವಿಕಸಿಸಿಕೊಂಡರೆ ಲೇಖಕನ ಶ್ರಮ ಸಾರ್ಥಕವೂ ತೃಪ್ತಿದಾಯಕವೂ ಆಗಿ ಪರಿಣಮಿಸುತ್ತದೆ.

 

ಪುಟಗಳು: 295

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)