Click here to Download MyLang App

ವಿಜ್ಞಾನದ ತಾತ್ವಿಕ ನೆಲೆ,    ತಾಳಿತ್ತಾಯ ವಿ. ಕೆ.,  Vijnanada Taatvika Nele,  Talithaya V. K.,

ವಿಜ್ಞಾನದ ತಾತ್ವಿಕ ನೆಲೆ (ಇಬುಕ್)

e-book

ಪಬ್ಲಿಶರ್
ವಿ. ಕೆ. ತಾಳಿತ್ತಾಯ
ಮಾಮೂಲು ಬೆಲೆ
Rs. 95.00
ಸೇಲ್ ಬೆಲೆ
Rs. 95.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ವಿಜ್ಞಾನ ಮತ್ತು ತತ್ವಜ್ಞಾನ ಒಂದಕ್ಕೊಂದು ನಿಕಟ ಸಂಬಂಧವಿರುವ ವಿಷಯಗಳು. ತತ್ವಜ್ಞಾನ ವಿಜ್ಞಾನದ ಕಾರ್ಯಕಲಾಪಗಳನ್ನು ವಿಮರ್ಶೆಗೀಡು ಮಾಡುತ್ತಿದ್ದರೆ, ವಿಜ್ಞಾನಿಗಳೂ ತಮ್ಮ ಕೆಲಸದ ಕುರಿತು ತಾತ್ವಿಕ ಚಿಂತನೆಯಲ್ಲಿ ನಿರತರಾಗಿರುವುದು ಸರ್ವೇಸಾಮಾನ್ಯ. ಈ ಕಿರು ಪುಸ್ತಕ ವಿಜ್ಞಾನ ಮತ್ತು ತತ್ವಜ್ಞಾನಗಳೊಳಗಿನ ಈ ವಿಶಿಷ್ಟ ಸಂಬಂಧದ ಕುರಿತು. ಜನಸಾಮಾನ್ಯರಿಗೆ ಅದರ ಕುರಿತು ಒಂದು ಸಂಕ್ಷಿಪ್ತ ಪರಿಚಯ. ಇಲ್ಲಿ ನಾವು ವಿಜ್ಞಾನ-ತತ್ವಜ್ಞಾನದ ವಿವಿಧ ಆಯಾಮಗಳ ಪರಿಚಯ ಮಾಡುತ್ತಿದ್ದರೂ, ಓದುಗರು ಅವರವರ ಅಭಿರುಚಿಯಂತೆ ಯಾವ ಅಧ್ಯಾಯವನ್ನೂ ಪ್ರತ್ಯೇಕವಾಗಿ ಓದಬಹುದು.

ವಿಜ್ಞಾನಿಗಳು ಮತ್ತು ತತ್ವಜ್ಞಾನಿಗಳು - ಈ ಎರಡು ವಿಧದ ವ್ಯಕ್ತಿಗಳಲ್ಲೂ ಎದ್ದು ಕಾಣುವ ಒಂದು ಲಕ್ಷಣವೆಂದರೆ ಅವರಿಬ್ಬರೂ ಏನನ್ನೋ ಹುಡುಕುತ್ತಿರುವುದು. ಅವರು ಸದಾ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಸಾಮಾನ್ಯವಾಗಿ ಸಿಗುವ ಉತ್ತರಗಳಲ್ಲಿ ತೃಪ್ತಿಪಡುವ ವ್ಯಕ್ತಿಗಳು ಇವರಲ್ಲ. ಅವರು ತಾವು ಕಂಡದ್ದಕ್ಕೆ, ತಮ್ಮ ಯೋಚನೆಗೆ ಒಳಗಾದುದಕ್ಕೆ ವಿವರಣೆ ಕೇಳುವವರು. ಒಂದು ರೀತಿಯಲ್ಲಿ ನೋಡಿದರೆ, ನಿನ್ನೆಯ ತತ್ವಜ್ಞಾನ ಇಂದಿನ ವಿಜ್ಞಾನದ ಬುನಾದಿಯಾಗುತ್ತದೆ. ಹಾಗೆಯೇ, ಇಂದಿನ ವಿಜ್ಞಾನಕ್ಕೆ ಯಾವುದನ್ನು ಪ್ರಯೋಗ, ವೀಕ್ಷಣೆ, ಪರಿವೀಕ್ಷಣೆ ಮತ್ತು ತರ್ಕ ವಿವರಿಸಲಸಾಧ್ಯವಾಯಿತೋ ಅದು ತತ್ವಶಾಸ್ತ್ರದ ಯೋಚನೆಯ ವಸ್ತುವಾಗುತ್ತದೆ.

ವಿಜ್ಞಾನ ಮತ್ತು ತತ್ವಜ್ಞಾನ, ಇವೆರಡೂ ಒಂದೇ ಗುರಿಯನ್ನಿಟ್ಟುಕೊಂಡಿರುತ್ತವೆ - ಅದೆಂದರೆ ಸತ್ಯವನ್ನು ಅರಿಯುವುದು; ಮೂಲಭೂತ, ಸರ್ವೋತ್ಕೃಷ್ಟ ಸತ್ಯವನ್ನು ತಿಳಿದುಕೊಳ್ಳುವುದು. ಎಲ್ಲಾ ವಿದ್ಯಮಾನಗಳ ಮೂಲದ ಅರ್ಥವನ್ನು ಅರಿಯುವುದು. ಈ ಗುರಿಯನ್ನು ಅವರು ತಲಪುತ್ತಾರೋ ಇಲ್ಲವೋ ಎಂಬುದು ಮುಖ್ಯವಲ್ಲ. ಮಾನವ ಜಾತಿಯ ಮುಖ್ಯ ಲಕ್ಷಣವಾದ ಕುತೂಹಲವೇ ಅವರನ್ನು ಈ ಗುರಿಯತ್ತ ಪಯಣಿಸುವಂತೆ ಪ್ರೇರೇಪಿಸುತ್ತದೆ. ಇದನ್ನು ಒಂದಿಷ್ಟು ಅರಿಯುವ ಕುತೂಹಲವೇ ಈ ಪುಸ್ತಕಕ್ಕೆ ಪ್ರೇರಣೆ.

ಓದುಗರಲ್ಲೂ ಈ ವಿಷಯಗಳ ಕುರಿತು ಸ್ವಲ್ಪವಾದರೂ ಕುತೂಹಲವನ್ನು ಕೆದಕಿದರೆ, ನನ್ನ ಈ ಪ್ರಯತ್ನ ಸಫಲವಾಯಿತೆಂದು ನಂಬಿದ್ದೇನೆ.


- ವಿ. ಕೆ. ತಾಳಿತ್ತಾಯ

 

ಪುಟಗಳು: 112

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)