ಪ್ರಕಾಶಕರು: ಉದಯರವಿ ಪ್ರಕಾಶನ
Publisher: Udayaravi Prakashana
“ವರ್ಣ ಜಾತಿ ವರ್ಗಗಳನ್ನು ಆ ದೇವರೇ ಸೃಷ್ಟಿ ಮಾಡಿದ್ದರೂ ಅವನ್ನೆಲ್ಲ ಇಂದು ಸರ್ವೋದಯಕ್ಕಾಗಿ ನಾವು ಧ್ವಂಸ ಮಾಡಬೇಕಾಗುತ್ತದೆ. ಕಾಲರಾ, ಪ್ಲೇಗು, ಮಲೇರಿಯಾಗಳನ್ನು ದೇವರೇ ಸೃಷ್ಟಿ ಮಾಡಿದ್ದು ಅಂತಾ ಹೇಳಿ ನಾವು ಸುಮ್ಮನಿರುವುದಕ್ಕೆ ಆದೀತೆ? ಅನಾರೋಗ್ಯಕರವೂ ಮೃತ್ಯುಕರವೂ ಆಗಿರುವ ಅವನ್ನೆಲ್ಲ ನಾಶಪಡಿಸಿ ನಮ್ಮ ಆರೋಗ್ಯವನ್ನು ನಾವು ರಕ್ಷಿಸಿಕೊಳ್ಳುವಂತೆ ವರ್ಣ ಜಾತಿ ವರ್ಗ ಮೊದಲಾದ ದುರ್ಭಾವನೆಗಳನ್ನೆಲ್ಲ ಧ್ವಂಸ ಮಾಡಿ ಸಮಾಜ ಕ್ಷೇಮವನ್ನು ಸಾಧಿಸಬೇಕು.”
“ವರ್ಣಾಶ್ರಮ, ಜಾತಿಪದ್ಧತಿ ಮೇಲು ಕೀಳು ಭಾವನೆ ಮುಂತಾದ ಮಧ್ಯಯುಗದ ಕ್ರೂರ ಕರಾಳ ತತ್ವಗಳೆಲ್ಲ ವೈಜ್ಞಾನಿಕ ದೃಷ್ಟಿಯ ಅಗ್ನಿಕುಂಡದಲ್ಲಿ ಭಸ್ಮೀಕೃತವಾಗಬೇಕು.”
– ಕುವೆಂಪು, ವಿಚಾರ ಕ್ರಾಂತಿಗೆ ಆಹ್ವಾನ
ವಿಚಾರ ಕ್ರಾಂತಿಗೆ ಆಹ್ವಾನ ಕುವೆಂಪುರವರ ಒಂದು ವೈಚಾರಿಕ ಕೃತಿ.
ಇದರ ಮುಖ್ಯ ಭಾಗ ಕುವೆಂಪು ಮಾಡಿದ ಭಾಷಣಗಳು.
೧) ಡಿಸೆಂಬರ್ ೮ ೧೯೭೪ರಂದು ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವದಂದು ಮಾಡಿದ ಭಾಷಣ.
೨) ಅ ನೇ ಉಪಾಧ್ಯೆಯವರ ಸನ್ಮಾನ ಭಾಷಣ
೩) ೧೯೭೫ರ ಕರ್ನಾಟಕ ವಿಚಾರವಂತ ಲೇಖಕರ ಸಂಘದಲ್ಲಿ ಮಾಡಿದ ಭಾಷಣ.
ಮೂಢನಂಬಿಕೆ, ಮಡಿವಂತಿಕೆ, ಪ್ರಶ್ನಿಸದೆಯೇ ಒಪ್ಪಿನಡೆಯುವುದು, ಇವುಗಳನ್ನು ಖಂಡಿಸುವ ವಿಚಾರಗಳು ಈ ಪುಸ್ತಕದಲ್ಲಿವೆ.
ಪುಟಗಳು: 102
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !