ಪ್ರಕಾಶಕರು: ಗಿರಿಮನೆ ಪ್ರಕಾಶನ
Publisher: Girimane Prakashana
ಓದಿದವರು:
ಅನಿಕೇತ್ ಶ್ರೀವತ್ಸ
ಬೆಂಗಳೂರು
ಆಡಿಯೋ ಪುಸ್ತಕದ ಅವಧಿ : 4 ಗಂಟೆ 25 ನಿಮಿಷ
ಜಗತ್ತಿನ ಅದ್ಭುತ ನಿಯಮಗಳು!
ನಾವು ಮಾಡಿಕೊಂಡ ಸರಕಾರೀ ಕಾನೂನುಗಳನ್ನು ಪಾಲಿಸುವುದೇ ಕಷ್ಟವಾಗಿರುವಾಗ ಅದಕ್ಕಿಂತ ಮಿಗಿಲಾದ ಜಗತ್ತಿನ ನಿಯಮಗಳಿವೆ ಎನ್ನುವುದೇ ಗಮನಕ್ಕೆ ಬರುವುದಿಲ್ಲ. ಈ ಜಗತ್ತನ್ನು ಸೂಕ್ಷ್ಮದೃಷ್ಟಿಯಿಂದ ನೋಡಿದರೆ ಮಾತ್ರ ಕಾಣುವ ಅದ್ಭುತವಾದ ನಿಯಮಗಳು ಜಿಲೇಬಿಯ ಸುತ್ತುಗಳಂತೆ ಬೆಸೆಯುತ್ತಾ ಒಂದಕ್ಕೊಂದು ಸಂಬಂಧ ಹೊಂದಿರುವುದು ಕಂಡುಬರುತ್ತವೆ. ಈ ಜಗತ್ತಿನಲ್ಲಿರುವುದನ್ನು ಅಂತೆಯೇ ತಿಳಿಯುವುದೇ ಜ್ಞಾನ. ‘ಏನು ಮಾಡಿದ್ದರ ಪರಿಣಾಮ ಏನಾಗುತ್ತದೆ’ ಎಂದು ತಿಳಿಯದೆ ಇದ್ದಾಗ ನಮಗೆ ಬದುಕಿನಲ್ಲಿ ಸೋಲು ಬರುತ್ತದೆ. ತಿಳಿದುಕೊಳ್ಳದಿದ್ದರೆ ಅದು ನಿಯಮಗಳನ್ನು ರೂಪಿಸಿದವನ ತಪ್ಪಲ್ಲ; ನಮ್ಮದೇ. ನಾವೆಷ್ಟು ಮುಂದುವರಿದಿದ್ದೇವೆಂದುಕೊಂಡರೂ ಜಗತ್ತಿನ ನಿಯಮಗಳನ್ನು ಸೂಜಿ ಮೊನೆಯಷ್ಟೂ ಬದಲಿಸಲಾರೆವು. ನಮಗಿರುವ ಸೀಮಿತ ಶಕ್ತಿ-ಸಾಮಥ್ರ್ಯದಿಂದ ಏನನ್ನಾದರೂ ಮಾಡಿದರೂ ಅದು ತಾತ್ಕಾಲಿಕ; ಮತ್ತೆ ಮೊದಲಿನಂತೆ ಮುಂದುವರೆಯುತ್ತದೆ. ‘ಅವರಿವರಿಗೆ ಇಷ್ಟವಾಗುವುದಿಲ್ಲ; ಸಮಾಜ ನಮ್ಮನ್ನು ಕೀಳಾಗಿ ಕಾಣುತ್ತದೆ; ಸರಕಾರದ ಕಾನೂನು ಮುರಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ’ ಎಂಬಂತಹಾ ಕಾರಣಗಳಿಗೆ ನಾವು ಸರಿಯಾಗಿ ನಡೆದುಕೊಳ್ಳಲು ಯತ್ನಿಸುತ್ತೇವೆ. ಆ ಭಾವನೆಯೇ ತಪ್ಪು. ‘ನಮ್ಮ ಸುಖ-ಸಂತೋಷಕ್ಕಾಗಿಯೇ ನಾವು ಸರಿದಾರಿಯಲ್ಲಿ ನಡೆಯಲು ಕಲಿಯಬೇಕು’ ಎನ್ನುವುದನ್ನು ಜಗತ್ತಿನ ನಿಯಮಗಳೇ ಸಾಬೀತುಪಡಿಸುತ್ತವೆ. ‘ಭಗವಂತನ ನಿಯಮಗಳನ್ನು ಮೀರಿದರೆ ದು:ಖ’ ಎಂದು ಎಚ್ಚರಿಸುತ್ತದೆ ವೇದ. ಯಾವುದೆಲ್ಲಾ ಆ ನಿಯಮಗಳು ಎನ್ನುವುದನ್ನು ಬೀಜರೂಪದಲ್ಲಿ ಮಾತ್ರ ತಿಳಿಸುತ್ತದೆ. ವೇದವಿಚಾರಗಳನ್ನು ಮನನ ಮಾಡುತ್ತಾ ಬದುಕು, ವಿಜ್ಞಾನ, ಜೀವಜಗತ್ತುಗಳ ಬಗ್ಗೆ ಚಿಂತನೆ, ಪರಿಶೀಲನೆ ಮಾಡುತ್ತಿದ್ದಂತೆ ಅವು ನಮಗೇ ಹೊಳೆಯುತ್ತವೆ. ‘ಜಗತ್ತಿನಲ್ಲಿ ನಿಯಮಗಳಿವೆ; ನಿಯಮಗಳಿರುವಲ್ಲಿ ನಿಯಾಮಕನೂ ಇರುತ್ತಾನೆ’ ಎನ್ನುವ ಒಂದು ಪ್ರಜ್ಞೆ, ಬುದ್ಧಿ ಇರುವ ಮನುಷ್ಯನಿಗೆ ಬದುಕಿನ ದಾರಿದೀಪವಾಗುತ್ತದೆ.
ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.