ಪ್ರಕಾಶಕರು: ಗಿರಿಮನೆ ಪ್ರಕಾಶನ
Publisher: Girimane Prakashana
ಓದಿದವರು:
ಅನಿಕೇತ್ ಶ್ರೀವತ್ಸ
ಬೆಂಗಳೂರು
ಆಡಿಯೋ ಪುಸ್ತಕದ ಅವಧಿ : 2 ಗಂಟೆ 49 ನಿಮಿಷ
ಮೂಢನಂಬಿಕೆ ಮತ್ತು ದೇವರು
ಅನಾವಶ್ಯ ಭಯ, ಅವಶ್ಯವಾಗಿ ಭಯಪಡಬೇಕಾದ್ದಕ್ಕೆ ತಡೆಯೊಡ್ಡುತ್ತದೆ. ನಿಗೂಢ ಎನಿಸಿದ್ದು ಭಯ ಹುಟ್ಟಿಸುತ್ತದೆ. ನಿಗೂಢ ಬಯಲಾದಾಗ ಮನಸ್ಸು ನಿರಾಳವಾಗುತ್ತದೆ. ಬದುಕನ್ನೇ ಕತ್ತಲಾಗಿಸುವ ಬೆತ್ತಲೆ ಸೇವೆ, ಬಲಿಪದ್ಧತಿ, ಸಿಡಿಪದ್ಧತಿ ಇತ್ಯಾದಿ ಮೂಢನಂಬಿಕೆಗಳು ಕಳೆಯುತ್ತಿರುವಾಗಲೇ ದೇವರ ವಿಷಯದಲ್ಲಿ ಹಳೆಯದರ ಜೊತೆಗೆ ಹೊಸ ಹೊಸ ಮೂಢನಂಬಿಕೆಗಳೂ ಬೆಳೆಯುತ್ತಿವೆ. ಮೂಢನಂಬಿಕೆ ಭಯ ಹುಟ್ಟಿಸುತ್ತದೆ. ಭಯ ಬೇಕಾದ್ದು ದೇವರ ವಿಷಯಕ್ಕಲ್ಲ; ಅಕ್ರಮ, ಅನ್ಯಾಯ, ಮೋಸ-ವಂಚನೆಗಳನ್ನು ಮಾಡುವುದಕ್ಕೆ ಮಾತ್ರ!
ಚಂದ್ರನ ಮೇಲಾಡಿ ಮಂಗಳನ ಅಂಗಳದತ್ತ ನೋಡುತ್ತಾ ವಿಜ್ಞಾನದಲ್ಲಿ ಅಷ್ಟೆಲ್ಲಾ ಪ್ರಗತಿ ಸಾಧಿಸಿದರೂ ಅಷ್ಟೇ ಪ್ರಮಾಣದ ಮೂಢನಂಬಿಕೆಗಳ ಆಚರಣೆಗಳನ್ನು ತಪ್ಪಿಸಲಾಗುತ್ತಿಲ್ಲ! ಅದರ ಪ್ರಚಾರಕರನ್ನು ತಡೆದು ಸತ್ಯ ತಿಳಿಯಲಾಗುತ್ತಿಲ್ಲ! ವಿದ್ಯಾವಂತರೆಂದುಕೊಳ್ಳುವವರನ್ನೂ ಮೂಢನಂಬಿಕೆಗಳು ಬಿಡುವುದಿಲ್ಲ. ನಂಬಬೇಕಾದ್ದನ್ನು ತಿಳಿಯದೆ ಮತ್ತೇನನ್ನೋ ನಂಬಿ ಬದುಕು ಕಳೆಯುವಾಗ ಅನುಭವಿಸುವ ಯಾತನೆ ಯಾಕೆಂದೇ ತಿಳಿಯುವುದಿಲ್ಲ. ಅದರಿಂದಾಗಿ ಯಾರೋ ನಮ್ಮನ್ನು ಮೂರ್ಖರನ್ನಾಗಿಸುತ್ತಾರೆ. ಕುರಿ ಮಂದೆಯೊಂದಿಗಿನ ಕುರಿ ನಾವಾಗಿ ಬಿಡುತ್ತೇವೆ! ಮೂಢನಂಬಿಕೆಗೊಳಗಾದವರ ಶೋಷಣೆ ಅತ್ಯಂತ ಸುಲಭ! ಇವುಗಳಿಂದೆಲ್ಲಾ ನಮಗೆ ರಕ್ಷಣೆ ಕೊಡುವುದು ವೇದವೊಂದೇ! ವೇದವಿಚಾರಗಳು ಅರಿವಾಗುತ್ತಿದ್ದಂತೆ ದೇವರ ಬಗೆಗಿನ ಗೊಂದಲ, ಮೂಢನಂಬಿಕೆಗಳೆಲ್ಲಾ ಬುಡ ಕತ್ತರಿಸಿದ ಬಾಳೆಯಂತೆ ಬಿದ್ದುಹೋಗುತ್ತವೆ. ಜ್ಞಾನ ಇರುವಲ್ಲಿ ಮೂಢನಂಬಿಕೆಗೆ, ಬೆಳಕಿರುವಲ್ಲಿ ಕತ್ತಲಿಗೆ ಎಲ್ಲಿದೆ ಸ್ಥಾನ! ವೇದಾಧಾರದ ಮುಂದೆ ಮತ್ಯಾವ ಆಧಾರವೂ ಬೇಡ. ವೇದವಿಚಾರದ ಜೊತೆಗೆ ವೇದದ ಹೆಸರಲ್ಲಿ ಬೆಳೆಸಿದ ಮೂಢನಂಬಿಕೆಗಳ ಬಗ್ಗೆಯೂ ತಿಳಿಯಬೇಕು. ನಮ್ಮೊಳಗೇ ಬೇರುಬಿಟ್ಟ ಅವನ್ನು ಕೀಳುವುದು ಸುಲಭವಲ್ಲದಿದ್ದರೂ ವಿಷಯ ತಿಳಿದರೆ ಅದಕ್ಕೆ ಸಹಕಾರ ಕೊಡಲು ಮನಸ್ಸು ಬರುವುದಿಲ್ಲ. ಅಷ್ಟಾದರೆ ಅದರ ಲಾಭ ಮುಂದಿನ ಪೀಳಿಗೆಗೆ!
ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.