Click here to Download MyLang App

ಶ್ರುತಿ ಮರುಳಪ್ಪ,    ಪ್ರೇರಣಾ ಸಿಂಗ್,  ಉಪರಾಷ್ಟ್ರೀಯತೆ ಮತ್ತು ಸಾಮಾಜಿಕ ಏಳಿಗೆ,  Uparaashtreeyate Mattu Saamaajika Elige,  Shruthi Marulappa,  Prerna Singh,subnationalism and social development in india

ಉಪರಾಷ್ಟ್ರೀಯತೆ ಮತ್ತು ಸಾಮಾಜಿಕ ಏಳಿಗೆ (ಇಬುಕ್)

e-book

ಪಬ್ಲಿಶರ್
ಶ್ರುತಿ ಮರುಳಪ್ಪ
ಮಾಮೂಲು ಬೆಲೆ
Rs. 199.00
ಸೇಲ್ ಬೆಲೆ
Rs. 199.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಭಾರತದ ಕೆಲವು ರಾಜ್ಯಗಳಲ್ಲಿನ ಸಾಮಾಜಿಕ ಅಭಿವೃದ್ಧಿ ಉಳಿದ ರಾಜ್ಯಗಳಿಗಿಂತ ಏಕೆ ಅಷ್ಟೊಂದು ಹೆಚ್ಚಿದೆ? ಈ ಅಂತರಕ್ಕೆ ಒಂದು ರಾಜ್ಯದ ಅಸ್ಮಿತೆ ಅಥವಾ ಅಲ್ಲಿನ ಪ್ರಜೆಗಳು ಒಟ್ಟಾರೆಯಾಗಿ ಹಂಚಿಕೊಂಡಿರುವ 'ನಮ್ಮತನ'ದ ಭಾವನೆಯ ಪ್ರಮಾಣದಲ್ಲಿ ವ್ಯತ್ಯಾಸವೇ ಕಾರಣ ಅನ್ನುತ್ತಾರೆ ಪ್ರೇರಣಾ ಸಿಂಗ್.

ಉಪರಾಷ್ಟ್ರೀಯತೆಯ ರಾಜಕೀಯ ಹಾಗೂ ಸಾಮುದಾಯಿಕ ಭಾವನೆಯು ತುಂಬಾ ಬಲವಾಗಿರುವ ರಾಜ್ಯಗಳಲ್ಲಿ ಪ್ರಜೆಗಳು ವೈಯಕ್ತಿಕ ಕ್ಷೇಮಕ್ಕಿಂತ ಸಾಮೂಹಿಕ ಒಳಿತಿಗೆ ಆದ್ಯತೆ ನೀಡುತ್ತಾರೆ ಮತ್ತು ಪ್ರಗತಿಪರ ಸಾಮಾಜಿಕ ನೀತಿಗಳನ್ನು ಬೆಂಬಲಿಸುತ್ತಾರೆ. ಹಾಗಾಗಿ, ಅಂತಹ ರಾಜ್ಯಗಳಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಗಣನೀಯವಾಗಿ ಸುಧಾರಣೆಗೊಂಡಿವೆ. ಉದಾಹರಣೆಗೆ ಕೇರಳ ಮತ್ತು ತಮಿಳುನಾಡನ್ನು ಗಮನಿಸಬಹುದು. ಆದರೆ ಉಪರಾಷ್ಟ್ರೀಯತೆಯ ಐಕ್ಯತೆಯ ಭಾವನೆ ಬಲವಾಗಿಲ್ಲದ ರಾಜ್ಯಗಳಲ್ಲಿ ಸುಧಾರಣೆಯನ್ನು ಉದ್ದೀಪಿಸುವ ಸಮಾನ ಅಂಶವಿರುವುದಿಲ್ಲ. ಈ ಕಾರಣದಿಂದ, ಅಂತಹ ರಾಜ್ಯಗಳಲ್ಲಿ ಸಾರ್ವಜನಿಕ ನೀತಿಗಳು ನಿರೀಕ್ಷಿತ ಫಲ ನೀಡಿಲ್ಲ. ಈ ಪರಿಸ್ಥಿತಿ ಉತ್ತರಪ್ರದೇಶ ಮತ್ತು ರಾಜಸ್ತಾನದಲ್ಲಿ 1990ರವರೆಗೂ, ಬಿಹಾರದಲ್ಲಿ 2000 ಇಸವಿಯ ಮಧ್ಯಭಾಗದವರೆಗೂ ಇದ್ದಿತ್ತೆಂಬುದನ್ನು ನಾವು ಗಮನಿಸಬಹುದು. ಇದೊಂದು, ಹೊಸ ಮತ್ತು ಬಹಳ ಮುಖ್ಯವಾದ ವಾದ. ಇದನ್ನು ಸಮರ್ಥಿಸುವಂತಹ ಅನೇಕಾನೇಕ ಪರಿಮಾಣಾತ್ಮಕ ಹಾಗೂ ಗುಣಾತ್ಮಕ ಪುರಾವೆಗಳು ಲಭ್ಯವಿವೆ. ಈ ಕೃತಿಯು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಮಾಜ ಕಲ್ಯಾಣದ ಮೂಲವನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಲಿದ್ದು, ಉಪರಾಷ್ಟ್ರೀಯತೆಯಂತಹ ಸಾಮುದಾಯಿಕ ಪ್ರಜ್ಞೆಯು ರಾಜ್ಯದ ಬೆಳವಣಿಗೆಗೆ ಮಾರಕ ಎಂದು ಕಾಣುವ ಪ್ರವೃತ್ತಿಗೆ ಒಂದು ಸ್ವಾಗತಾರ್ಹ ಪ್ರತ್ಯುತ್ತರವಾಗಿದೆ.

 

ಪುಟಗಳು: 325

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

 

Customer Reviews

No reviews yet
0%
(0)
0%
(0)
0%
(0)
0%
(0)
0%
(0)