ಪ್ರಕಾಶಕರು: ಮೈತ್ರಿ ಪ್ರಕಾಶನ
Publisher: Mythri Prakashana
ಸಲಿಂಗಕಾಮವು ಸಲಿಂಗಕಾಮಿಯಲ್ಲಿ ಸಹಜಭಾವವಾಗಿ ಇರುತ್ತದೆ, ಅಂದರೆ ಓರ್ವ ಗಂಡಸಿನಲ್ಲಿ ಹೆಣ್-ಭಾವವಾಗಿ ಹಾಗು ಓರ್ವ ಹೆಣ್ಣಿನಲ್ಲಿ ಪುರುಷಭಾವವಾಗಿ ಹುಟ್ಟಿನಲ್ಲಿಯೇ ಇರುತ್ತದೆ ಎನ್ನುವ ಅಭಿಪ್ರಾಯವನ್ನು ಈವರೆಗಿನ ಕೃತಿಗಳು ಹೇಳುತ್ತಿವೆ. ಆದರೆ ದೇಸಾಯಿಯವರ ‘ಭಿನ್ನ’ವು ಈ ಅಭಿಪ್ರಾಯಕ್ಕಿಂತ ಭಿನ್ನವಾದ ಮತ್ತೊಂದು ಆಯಾಮವನ್ನು ತೋರಿಸುತ್ತಿದೆ. ಓರ್ವ ವ್ಯಕ್ತಿಯ ಕೌಟಂಬಿಕ ಅಥವಾ ಸಾಮಾಜಿಕ ಪರಿಸರವು ಆ ವ್ಯಕ್ತಿಯನ್ನು ಸಲಿಂಗಕಾಮಿಯನ್ನಾಗಿ ಪರಿವರ್ತಿಸಬಲ್ಲದು ಎನ್ನುವ ವಾಸ್ತವತೆಯನ್ನು ಈ ಕೃತಿಯಲ್ಲಿ ಪ್ರತಿಪಾದಿಸಲಾಗಿದೆ. ಈ ಪರಿಸ್ಥಿತಿಯು ಮೂರು ತರಹದ ಸಂದರ್ಭಗಳನ್ನು ಆಧರಿಸಿರಬಹುದು:
(೧) ಕೌಟಂಬಿಕ
(೨) ಸಾಮಾಜಿಕ
(೩) ಮನೋವೈಜ್ಞಾನಿಕ
ದೇಸಾಯಿಯವರ ‘ಭಿನ್ನ’ದಲ್ಲಿ ಈ ಮೂರೂ ಸ್ಥಿತಿಗಳ ವಿಶ್ಲೇಷಣೆಯಿದೆ. ದೇಸಾಯಿಯವರು ಸಲಿಂಗಕಾಮದ ಬಗೆಗೆ ಒಂದು ಪ್ರಬುದ್ಧ ಪ್ರಬಂಧವನ್ನೇ ಬರೆಯಬಹುದಾಗಿತ್ತು. ಆದರೆ ಅವರು ಕಾದಂಬರಿಯ ಮಾಧ್ಯಮವನ್ನು ಅವಲಂಬಿಸಿದ್ದರಿಂದ ಕನ್ನಡ ಓದುಗರಿಗೆ ಒಂದು ಅತ್ಯುತ್ತಮ ಸಾಹಿತ್ಯಕೃತಿ ದೊರೆತಿದೆ!
- ಸುನಾಥ್ (http://sallaap.blogspot.com/2018/04/blog-post.html)
ಪುಟಗಳು: 84
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !