ಕನ್ನಡ ಇಬುಕ್ಸ್ ಹಾಗೂ ಆಡಿಯೋ ಬುಕ್ಸ್ ಓದಿ, ಕೇಳಿ ನಿಮ್ಮ ಮೊಬೈಲಿನಲ್ಲೇ!

ಟೊಮ್ಯಾಟೊ ಕೆಚಪ್(ಆಡಿಯೋ ಬುಕ್)

ಟೊಮ್ಯಾಟೊ ಕೆಚಪ್(ಆಡಿಯೋ ಬುಕ್)

audio book
ಪಬ್ಲಿಶರ್
ಡಾ. ಅಜಿತ್ ಹೆಗಡೆ ಹರೀಶಿ
ಮಾಮೂಲು ಬೆಲೆ
Rs. 90.00
ಸೇಲ್ ಬೆಲೆ
Rs. 90.00
ಬಿಡಿ ಬೆಲೆ
ಇಶ್ಟಕ್ಕೆ 

GET FREE SAMPLE

ಓದಿದವರು: ಅಮೃತಾ ಶೆಟ್ಟಿ, ಶಿಕ್ಷಕಿ,ನಿರೂಪಕಿ, ಮುಂಬೈ

ಆಡಿಯೋ ಪುಸ್ತಕದ ಅವಧಿ : 3 ಗಂಟೆ 50 ನಿಮಿಷ

 

ಈ ಕಥಾಸಂಕಲನದಲ್ಲಿ 12 ವಿಭಿನ್ನ ಕಥೆಗಳಿವೆ.

ಈ ಕಥಾಲೋಕದಲ್ಲಿ ನಾರಣಕಾಕಾ, ಗೋಪಣ್ಣರಂಥ ಕಾಮಿಗಳಿದ್ದಾರೆ, ಸಾಬೀತು ಕಥೆಯ ಉಮಾಳಂಥ ದಿಟ್ಟೆಯರಿದ್ದಾರೆ, ಸೆಲೆಯ ಶೀನಣ್ಣನಂಥ ಭಗೀರಥರಿದ್ದಾರೆ. ಮಾನಸಿಕ ನೆಮ್ಮದಿ ಕಳಕೊಂಡ ಕಾದಂಬಿನಿಯಂಥ ಆಧುನಿಕಳಿದ್ದಾಳೆ. ಹೀಗೆ ಒಂದು ವಿಸ್ತೃತ ಮಾನವ ಲೋಕವೊಂದು ನಮ್ಮೆದುರು ಇಲ್ಲಿನ ಕಥೆಗಳಲ್ಲಿ ತೆರೆದುಕೊಳ್ಳುವ ರೀತಿ ಅನನ್ಯವಾಗಿದೆ. ಸಾವಧಾನವಾಗಿ ಕಥೆ ಹೇಳುತ್ತಲೇ ಅದರಾಚಿನ ಇನ್ನೇನನ್ನೋ ಹೊಳೆಯಿಸುವ ಪ್ರಯತ್ನವಿದೆ.

ಪ್ರೇಮ, ಕಾಮ, ಹಿಂಸೆ, ಕ್ರೌರ್ಯ, ಒಳಸಂಚು, ಪ್ರತಿಭಟನೆ.. ಇತ್ಯಾದಿಗಳ ನಡುವೆಯೇ ಅರಳಿಕೊಳ್ಳುವ,ಜೀವಚೈತನ್ಯ, ಸವಾಲನ್ನೆದುರಿಸುವ ಸಾಮರ್ಥ್ಯ ಮೊದಲಾದ ಮಾನವ ಲೋಕದ ಸಮಸ್ತ ಗುಣಗಳನ್ನು ಕಲಾತ್ಮಕವಾಗಿ ಕಟ್ಟಿಕೊಡುವ ಯತ್ನದಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವ ಈ ಕಥಾಸಂಕಲನವು-ಅಜಿತರು ಕನ್ನಡ ಕಥಾ ಕ್ಷೇತ್ರದಲ್ಲಿಗಟ್ಟಿಯಾಗಿ ನೆಲೆಯೂರಲಿದ್ದಾರೆ ಎಂಬುದನ್ನು ಸಾಬೀತು ಪಡಿಸುತ್ತದೆ.

 -ಸುಬ್ರಾಯ ಚೊಕ್ಕಾಡಿ.

 

ಈ ಪುಸ್ತಕ ಈಗ ಆಡಿಯೋ ಬುಕ್ ಆಗಿದೆ. ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.