ಲೇಖಕರು:
ಸಂಪಾದಕ: ಡಾ।। ನಾ. ಸೋಮೇಶ್ವರ
ಲೇಖಕ: ಪರಂಜ್ಯೋತಿ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ತಮಿಳು ಕಾವ್ಯದ ಶ್ರೇಷ್ಠ ಕೃತಿಗಳಲ್ಲಿ "ತಿರುಕ್ಕುರಳ್" ಮುಖ್ಯವಾದದ್ದು. ಕವಿ ತಿರುವಳ್ಳುವರ್ ಬರೆದ ಈ ಕಾವ್ಯದಲ್ಲಿ ಮೂರು ಭಾಗಗಳಿವೆ. ಅರಂ (ಧರ್ಮ), ಪೊರುಳ್ (ಅರ್ಥ) ಮತ್ತು ಇನ್ಬಮ್ (ಕಾಮ). ತಿರುಕ್ಕುರಳ್ ತನ್ನ ಮೋಕ್ಷದ ಅನುಪಸ್ಥಿತಿಯಿಂದ ಸಾಂಪ್ರದಾಯಿಕ ವೈದಿಕ ಸಾಹಿತ್ಯಕ್ಕಿಂತ ಭಿನ್ನವಾಗಿದೆ. ಇದು ಗಮನೀಯ ಹಾಗೂ ಗಣನೀಯ. "ಕೈಯ ರೊಕ್ಕವ ಕೊಂಡು ಮಿಕ್ಕ ಲೆಕ್ಕವನಳಿಸು. ದೂರದಲಿ ಮೊಳಗುತಿಹುದು ಕೇಳ್ ಮೃತ್ಯು ಪಟಃ" ಎಂದು ಉಮರ ಖಯ್ಯಾಂ (ಅನುವಾದ: ಡಿವಿಜಿ) ಹೇಳಿದಂತೆ, ಸತ್ತ ಮೇಲೆ ಏನಿದೆಯೋ ಯಾರಿಗೆ ಗೊತ್ತು ಹಾಗಾಗಿ ಗೊತ್ತಿಲ್ಲದುದರ ಕುರಿತು ಯಾಕೆ ತಲೆಯನ್ನು ಕೆಡಿಸಿಕೊಳ್ಳುವುದು
ನಾವು ಬದುಕಿರುವವರೆಗೆ ಒಬ್ಬರಿಗೆ ತೊಂದರೆಯನ್ನು ಕೊಡದಂತೆ ಬದುಕೋಣ. ಪ್ರಾಮಾಣಿಕವಾಗಿ ದುಡಿದು ಹಣವನ್ನು ಗಳಿಸೋಣ. ಆ ಹಣದಿಂದ ಎಲ್ಲ
ರೀತಿಯ ಸುಖ ಸಂತೋಷಗಳನ್ನು ಪಡೆಯೋಣ ಎನ್ನುವ ಕುರಳ್ ನಿಲುವು ಶ್ಲಾಘನೀಯ ಹಾಗೂ ಅನುಕರಣೀಯ. ಈ ಹಿನ್ನೆಲೆಯಲ್ಲಿ ಕುರಳ್ ಸಂಪೂರ್ಣ
"ನೆಲದ ಕಾವ್ಯ" ವಾಗಿದೆ.
ಪುಟಗಳು: 48
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !