ಪ್ರಕಾಶಕರು: ಅಕ್ಷರ ಪ್ರಕಾಶನ
Publisher: Akshara Prakashana
ಪೂರ್ಣಚಂದ್ರ ತೇಜಸ್ವಿ ಅವರ ಕಥೆ, ಕಾದಂಬರಿ, ಪ್ರಬಂಧ, ಪ್ರವಾಸಕಥನ ಮೊದಲಾದ ಬರಹಗಳನ್ನು ಒಟ್ಟಾಗಿ ಇಟ್ಟುಕೊಂಡು ತೇಜಸ್ವಿಯವರ ಕೃತಿಗಳ ಹಿಂದಿರುವ ದರ್ಶನವನ್ನು ಶೋಧಿಸುವ ಮಹತ್ತ್ವಾಕಾಂಕ್ಷೆಯಿಂದ ಪ್ರಸ್ತುತ ಕೃತಿ ಉದ್ಯುಕ್ತವಾಗಿದೆ. ತೇಜಸ್ವಿಯವರ ಬರಹಗಳಲ್ಲೇ ಕಾಣಸಿಗುವ ಬೌದ್ಧಿಕಲಹರಿಯನ್ನು ಅನುಸರಿಸುತ್ತ ಸಿದ್ಧಾಂತದ ಶಸ್ತ್ರಗಳನ್ನು ಝಳಪಿಸದೆ ಕೃತಿಯ ಮಾತುಗಳನ್ನೇ ಎತ್ತಿಕೊಂಡು ಅವುಗಳ ಮೂಲಕವೇ ವಿಮರ್ಶಾವಿವೇಕವನ್ನು ಹೆಣೆಯುವ ಕ್ರಮವನ್ನು ಈ ಕೃತಿಯು ಆವಿಷ್ಕರಿಸಿಕೊಂಡಿದೆ. ಟಿ.ಪಿ. ಅಶೋಕ ಅವರು ಕನ್ನಡದ ಹಲವಾರು ಲೇಖಕರ ಬಗ್ಗೆ ಇಂಥ ಅಧ್ಯಯನಗಳನ್ನು ಈಗಾಗಲೇ ನಡೆಸಿರುವುದರಿಂದ ಸಹಜವಾಗಿಯೇ ಈ ಕಥನದಲ್ಲಿ ಕನ್ನಡದ ಇತರ ಮಹತ್ತ್ವದ ಲೇಖಕರೂ ಕೂಡಿಕೊಳ್ಳುತ್ತಾರೆ. ಅವರೆಲ್ಲರ ನಡುವಿನ ಸಂಬಂಧದ ತಾತ್ತ್ವಿಕ ಭಿತ್ತಿಯ ಮೇಲೆ ಈ ಕಥನವು ತೇಜಸ್ವಿ ಕೃತಿಸಮೂಹದ ಆಪ್ತಾವಲೋಕನವೊಂದನ್ನು ನಮ್ಮ ಮುಂದಿಡುತ್ತದೆ.
ಪುಟಗಳು: 148
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !