ಲೇಖಕರು:
ಕಾರ್ಲ್ ಮಾರ್ಕ್ಸ್
ಕನ್ನಡಕ್ಕೆ: ಕೆ. ಪಿ. ವಾಸುದೇವನ್
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
“ದಾರಿದ್ರ್ಯದ ತತ್ತ್ವಶಾಸ್ತ್ರ” ಫ್ರೆಂಚ್ ಸಮಾಜವಾದಿ ಬರಹಗಾರ, ಪ್ರೂಧೋನ್‌ನ ಪುಸ್ತಕ. ಇದಕ್ಕೆ ಪ್ರತಿಕ್ರಿಯೆಯಾಗಿ ಮಾರ್ಕ್ಸ್ ಸುಮಾರು ೧೭೦ ವರ್ಷಗಳ ಹಿಂದೆ “ತತ್ತ್ವಶಾಸ್ತ್ರದ ದಾರಿದ್ರ್ಯ” ಪುಸ್ತಕವನ್ನು ಬರೆದರು. ಪ್ರೂಧೋನ್ “ವೈಜ್ಞಾನಿಕ ಸಮಾಜವಾದ” ಎಂಬ ಪದಗುಚ್ಛವನ್ನು ಮೊದಲು ಜಾರಿಗೊಳಿಸಿದ ಎಂಬ ಪ್ರತೀತಿ ಇದೆ. ಆದರೆ, ಪ್ರೂಧೋನ್‌ರ ಮಿತಿ ಎಂದರೆ, ವರ್ಗ ಸಂಘರ್ಷದ ಆಯಾಮವನ್ನು ಗುರ್ತಿಸದೆ ಇರುವುದು. ಪ್ರೂಧೋನ್‌ರ ಪುಸ್ತಕ ಒಂದು ಬೃಹತ್ ಗ್ರಂಥ. ಇದರ ಆರಂಭದ ತುಂಬ ದೇವರ ಬಗ್ಗೆ ವಿವರಣೆಗಳಿವೆ. ಈ ಒಂದು ಗ್ರಂಥ ಫ್ರೆಂಚ್ ಕ್ರಾಂತಿಕಾರಿ ಕಾರ್ಮಿಕರ ನಡುವೆ ಕೆಲವು ದಿನ ಜನಪ್ರಿಯವಾಗಿತ್ತು ಎಂಬುದೇ ಆಶ್ಚರ್ಯಕರ.
ಇಂಡಿಯಾದ ಇಂದಿನ ಹೊರಳುದಾರಿಯ ಪರಿಸ್ಥಿತಿಯಲ್ಲಿ, ನಾವು “ಕ್ಲಾಸಿಕ್”ಗಳಿಗೆ ಮರಳಿದಾಗ ಮಾತ್ರ ನಮ್ಮ ವಿಚಾರಗಳಿಗೆ ಒಂದು ಸ್ಪಷ್ಟತೆ ಬರಲು ಸಾಧ್ಯ ಎಂದು ನಂಬಿದ್ದೇನೆ. ಈ ನನ್ನ ಪುಟ್ಟ ಕಾಣಿಕೆ ಕನ್ನಡದ ವಿಚಾರವಂತರ ಅವಗಾಹನೆಗಾಗಿ ಎಂದರೆ ಅತಿಶಯೋಕ್ತಿ ಆಗದು ಅಂದುಕೊಂಡಿದ್ದೇನೆ.
- ಕೆ. ಪಿ. ವಾಸುದೇವನ್
ಪುಟಗಳು: 208
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !