Click here to Download MyLang App

ತಂತ್ರಾಗ್ನಿ

ತಂತ್ರಾಗ್ನಿ

e-book
ಪಬ್ಲಿಶರ್
ಗಣೇಶ್ ಪ್ರಸಾದ್ ಮಂಜೇಶ್ವರ
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

GET FREE SAMPLE

ಪ್ರಕಾಶಕರು: ಸ್ವಪ್ರಕಾಶನ

Publisher: Swaprakashana

 

ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡ ಅವನಿಗೆ ಭರವಸೆಯ ಎಲ್ಲ ಬಾಗಿಲುಗಳು ಮುಚ್ಚಿವೆ ಎಂದು ತೋರಿದಾಗ ಅನಿರೀಕ್ಷಿತವಾಗಿ ನಿಗೂಢವಾದ  ಬಾಗಿಲೊಂದು  ತೆರೆದುಕೊಳ್ಳುತ್ತದೆ. ಅದನ್ನು ಜೀವನದ ಹೊಸ ಶಕೆಯ ಪ್ರಾರಂಭ ಎಂದುಕೊಳ್ಳುತ್ತಾನೆ ಅವನು. ಅದು ನಿಜಕ್ಕೂ ಒಂದು ಪ್ರಾರಂಭವೇ? ಬಯಸದೆ ಸಿಕ್ಕಿದ ಆ ಅರ್ಥೈಸಲಾಗದ ಯಂತ್ರ ಮಂತ್ರ ತಂತ್ರಗಳ ದುರ್ಗಮ ಹಾದಿಯಲ್ಲಿ ಹಲವು ವಿಸ್ಮಯಕಾರಿ  ಅನುಭವಗಳಿಗೆ ದೃಕ್‌ ಸಾಕ್ಷಿಯಾಗುತ್ತ ಸಾಗುವ ಅವನು ಗುರಿ  ಮುಟ್ಟಿದನೇ? ಮುಂದಿನ ಗುಟ್ಟನ್ನು ಸುತರಾಂ ಬಿಟ್ಟು ಕೊಡದೆ  ಚಿತ್ರ ವಿಚಿತ್ರ ಅನುಭವಗಳನ್ನು ಸವಾಲಿನಂತೆ ಒಡ್ಡುತ್ತಾ ಹುಟ್ಟಿ ಸಾಯುತ್ತಿದ್ದ ದಿನ ರಾತ್ರಿಗಳನ್ನು ನಿರಂತರ ಕ್ರಮಿಸಿ ಅವನು ಗಳಿಸಿದ್ದಾದರೂ ಏನು? ಇಂದ್ರಿಯಗಳಿಗೆ ಮೀರಿದ ಅನುಭವಗಳು ಅವನನ್ನು ತಲುಪಿಸಿದ್ದಾದರೂ ಎಲ್ಲಿಗೆ? ತಂತ್ರ, ಮಂತ್ರ. ಅಧ್ಯಾತ್ಮಗಳನ್ನು ಬಹಳ  ಹತ್ತಿರದಿಂದ ನಿರೂಪಿಸುವ ರೋಚಕ ಕಥಾನಕ. 

 

ಪುಟಗಳು: 199

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 2 reviews
50%
(1)
0%
(0)
50%
(1)
0%
(0)
0%
(0)
A
A.D.
ಇಂದಿನ ಕಾಲದಲ್ಲಿ ಒಂದು ಉತ್ತಮ ಪ್ರಯತ್ನ

ಕನ್ನಡದಲ್ಲಿ ಮಂತ್ರ ತಂತ್ರಗಳ ಬಗ್ಗೆ ತುಂಬಾ ಹಲವು ಪುಸ್ತಕಗಳಿವೆ. ಇದು ಒಂದು ಉತ್ತಮ ಪ್ರಯತ್ನವೇ. ಆದರೆ ಇನ್ನೂ ಒಂದು ಚೂರು ತಂತ್ರ-ಪ್ರತಿತಂತ್ರಗಳ ಯುದ್ಧ ಸನ್ನಿವೇಶಗಳು ಜಾಸ್ತಿ ಇದ್ದರೆ ರೋಚಕತೆ ಜಾಸ್ತಿ ಇರುತ್ತಿತ್ತು. ಲೇಖಕರನ್ನು ಹುರಿದುಂಬಿಸಲು ಒಂದೇ ಸಾಲು ಹೇಳುವೆ. ನಿಮ್ಮ ಮೊದಲ ಪ್ರಯತ್ನದಲ್ಲೇ ಸಾಕಷ್ಟು ಕುತೂಹಲಕಾರಿಯಾಗಿ ಬರೆದಿದ್ದೀರಿ. ದಯವಿಟ್ಟು ನಿಲ್ಲಿಸಬೇಡಿ. ನಿಮ್ಮ ಮುಂದಿನ ಕೃತಿಗಾಗಿ ಕಾಯುವೆ.

J
J.V.
ತಾಂತ್ರಿಕ ಲೋಕದಲ್ಲಿ ಅನೂಹ್ಯ ಸಂಚಾರದ ಅನುಭವ ನೀಡಿದ ವಿಶಿಷ್ಟ ರೋಚಕ ಕೃತಿ.

ನಾನು ಓದಿದ ಗಣೇಶ್ ಪ್ರಸಾದ್ ಮಂಜೇಶ್ವರವರ ಮೊದಲ ಪುಸ್ತಕ ತಂತ್ರಾಗ್ನಿ.ಹೆಸರನ್ನು ಕೇಳುತ್ತಲೇ ಇದೊಂದು ತಾಂತ್ರಿಕ ಲೋಕಕ್ಕೆ ಸಂಬಂಧಿಸಿದ ಕಾದಂಬರಿಯೆಂದು ಕುತೂಹಲ ಕೆರಳಿಸಿತ್ತು. ಆದರೆ ಇದರ ಪ್ರತಿಗಳು ನನಗೆ ಸಿಗಲಿಲ್ಲ. ಕಡೆಗೆ ಮೈಲಾಂಗ್ ಆಪ್ನಲ್ಲಿ ಖರೀದಿಸಿ ಕಾತುರದಿಂದ ಓದಿದೆ. ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ. ಇದು ಮಾಂತ್ರಿಕ ಲೋಕದ ಅನೂಹ್ಯ
ಪಯಣದ ನೌಕೆಯಲ್ಲಿ ತೇಲಿಸಿತು.

ಕಾಳಿಂಗರಾಯರ ಪುತ್ರ ಕಿರಣ್ ತನ್ನ ತಂದೆಯ ಪ್ರಿಂಟಿಂಗ್ ಪ್ರೆಸ್ ನೋಡಿಕೊಳ್ಳುತ್ತಿರುತ್ತಾನೆ. ಈ ಸಂದರ್ಭದಲ್ಲಿ ಮಧುಮಿತ ಎಂಬ ತರುಣಿಯ ಜೊತೆಗೆ ಪ್ರೀತಿಯಲ್ಲಿ ಬೀಳುತ್ತಾನೆ.ತನ್ನ ತಂದೆಯ ಆಕಸ್ಮಿಕ ಸಾವಿನ ಬಳಿಕ ಅವರು ಮಾಡಿದಮೂವತ್ತೈದು ಲಕ್ಷ ರೂಪಾಯಿಗಳನ್ನು ತೀರಿಸುವ ಜವಾಬ್ದಾರಿ ಅವನ ಮೇಲೆ ಬಿದ್ದು ಬಿಡುತ್ತದೆ . ಅಂಗಡಿಯ ಪುಸ್ತಕಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಸಿಗುವ ಮಹಾತಂತ್ರ ದರ್ಶನ ಎಂಬ ಪುಸ್ತಕ ಅವನನ್ನು ತಾಂತ್ರಿಕ ಲೋಕದ ಮಹಾ ಜಗತ್ತಿನೊಳಗೆ ಕಾಲಿಡುವಂತೆ ಮಾಡುತ್ತದೆ.

ಪುಸ್ತಕದ ಲೇಖಕರ ಅನ್ವೇಷಣೆಯಲ್ಲಿ ಹೊರಟವನಿಗೆ ಪುಷ್ಯ ಯೋಗ ಅಮಾವಾಸ್ಯೆ ಧನಪ್ರಾಪ್ತಿ ಆಗುವಂತೆ ಮಾಡುತ್ತದೆ ಎಂಬ ಅಮಿಷ ಸೆಳೆಯುವುದರಲ್ಲಿ ಯಾವುದೇ ಆಶ್ಚರ್ಯ ಉಂಟು ಮಾಡುವುದಿಲ್ಲ. ಅವನ ಆರ್ಥಿಕ ಪರಿಸ್ಥಿತಿಯ ಅಷ್ಟು ಹದಗೆಟ್ಟು ಹೋಗಿರುವುದರಿಂದ ಯಾವುದಾದರೂ ಬಾಗಿಲು ಅವನನ್ನು ಕಷ್ಟದಿಂದ ಪಾರು ಮಾಡೀತೇ ಎನ್ನುವ ಅವನ ತೊಳಲಾಟ ಮರುಕ ಹುಟ್ಟಿಸುತ್ತದೆ.ಇದೇ ಸಂದರ್ಭದಲ್ಲಿ ಬೇಟಿಯಾಗುವ ತ್ರಿವಿಕ್ರಮ ಶರ್ಮರು ಅವನನ್ನು ಅರಿಯದ ಮಾಂತ್ರಿಕ ಲೋಕಕ್ಕೆ ಹೆಸರಾದ ಊರಿಗೆ ಕರೆದೊಯ್ಯುತ್ತಾರೆ.

ಇದೇ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೃಷ್ಣಮಾಚಾರ್ಯರ ಭೇಟಿಯಾಗುತ್ತದೆ .ಕೃಷ್ಣಮಾಚಾರ್ಯರು ಕಾರಣ ಸಂಭೂತನಾದ ಕಿರಣ್ ನ ಮಹಿಮೆಯನ್ನು ಅರಿತು ಅವನಿಗೆ ಶಕ್ತಿ ಪಾತವನ್ನು ಮಾಡುತ್ತಾರೆ .ಅವರಿಂದಾಗಿಯೇ ಕರ್ಣ ಪಿಶಾಚಿ ಅವನಿಗೆ ಸಿದ್ಧಿಸುತ್ತದೆ.

ಕರ್ಣ ಪಿಶಾಚಿಯ ಬಗ್ಗೆ ಸವಿಸ್ತಾರವಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ. ಇದರ ಬಗ್ಗೆ ನಾನು ಮೊದಲು ತಿಳಿದಿದ್ದು ರವಿಬೆಳಗೆರೆಯವರ ಮಾಟಗಾತಿ ಪುಸ್ತಕದಲ್ಲಿ. ಎದುರಿಗಿರುವವರ ಭೂತ ,ಭವಿಷ್ಯತ್, ವರ್ತಮಾನಗಳನ್ನು ಹೇಳುವ ತಾಕತ್ತು ಈ ಕ್ಷುದ್ರ ದೇವತೆಗಿದೆಯಂತೆ. ಆದರೆ ಅವಳನ್ನು ನಿಭಾಯಿಸುವುದು ಕೂಡ ಭಾರಿ ಕಷ್ಟವಂತೆ .ರಚ್ಚೆ ಹಿಡಿದು ಹಟಮಾಡಿ ಸಾಧಕನನ್ನು ತನ್ನಿಷ್ಟಕ್ಕೆ ಬಗ್ಗಿಸುವುದು.. ಕಾಡಿಸುವುದು... ಕಡೆಕಡೆಗೆ ಅವನನ್ನು ತೀರ ಆತ್ಮಹತ್ಯೆಗೆ ಕಡೆಗೆ ಎಳೆಸುವುದು.. ಇವಳಿಗಿರುವ ಕುಖ್ಯಾತಿ. ತಾಯಿಯಂತೆ ಭಾವಿಸಿ ಅವಳನ್ನು ಆಹ್ವಾನಿಸಿದ ಕಿರಣ್ ನಿಗೆ ಅವಳು ಪ್ರೇಯಸಿಯಂತೆ ಸಿದ್ಧಿಸಿ ಬಿಡುತ್ತಾಳೆ.ಇಲ್ಲಿಂದಲೇ ಅವನು ಸಂಕಷ್ಟಗಳು ಮೊದಲಾಗಿ ಬಿಡುತ್ತದೆ.

ಹಿಂದೊಮ್ಮೆ ಅಭಿಸಾರಿಕೆ ಎಂಬ ವೇಶ್ಯೆ ಎಂಬ ತಾಂತ್ರಿಕ ಲೋಕದ
ಸಿದ್ಧಿಗಾಗಿ ರಘುಚಂದ್ರ ತ್ರಿವೇದಿ ಎಂಬ ಸಾಧಕರನ್ನು ಬಳಸಿಕೊಂಡಿರುತ್ತಾಳೆ. ಅವಳು ಅವರ ಶಿಷ್ಯರಾದ ಕೃಷ್ಣಮಾಚಾರ್ಯರನ್ನು ಸಹ ತನ್ನ ಸ್ವಾರ್ಥಕ್ಕಾಗಿ ಪ್ರಯೋಗಿಸಿ ಕೊಳ್ಳಲು ಪ್ರಯತ್ನಿಸಿ ಅಂತರ್ ಪಿಶಾಚಿಯಾಗುವ ಪರಿಸ್ಥಿತಿ ಬರುತ್ತದೆ.

ದುಷ್ಕೃತ್ಯಗಳಿಗೆ ಮಂತ್ರ ತಂತ್ರಗಳನ್ನು ಬಳಸದೆ ಸಚ್ಚಿದಾನಂದ ವನ್ನು ಜನರಿಗೆ ನೀಡಬೇಕಾದವರು ತಮ್ಮ ಸಿದ್ದಿಗಳನ್ನು ಭೋಗಲಾಲಸೆಗಾಗಿ ಬಳಸಿಕೊಂಡು ಜನ್ಮ ಜನ್ಮಗಳಿಗೂ ಪಾಪದ ಹೊರೆಯನ್ನು ಹೊತ್ತುಕೊಂಡು ಅನುಭವಿಸುತ್ತಾರೆ.ಜಗನ್ಮಾತೆಯ ಅನುಗ್ರಹವನ್ನು ಮಾನವಕುಲದ ಉದ್ಧಾರಕ್ಕಾಗಿ ಬಳೆಸಬೇಕಾದವರು ತಮ್ಮ ಸ್ವಾರ್ಥಗಳಿಗೆ ವಿನಾಕಾರಣ ದ್ವೇಷ ಸಾಧಿಸಿ ಇತರ ವಿನಾಶಕ್ಕೆ ತಮ್ಮಅಪೂರ್ವ ವಿದ್ಯೆಯನ್ನು ಬಳಸಿ ನಿಷ್ಪ್ರಯೋಜಕ ಮಾಡಿಕೊಳ್ಳುತ್ತಾರೆ.

ಆದರೆ ಕ್ಷುದ್ರ ಶಕ್ತಿಗಿಂತ ದೈವಶಕ್ತಿ ದೊಡ್ಡದು ಎಂಬುದು ಸಾರ್ವಕಾಲಿಕ ಸತ್ಯ.ಧನಾತ್ಮಕತೆ ಇದ್ದರೆ ಋಣಾತ್ಮಕತೆ ಇರುವುದು ಸತ್ಯವಾದರೂಅದನ್ನು ಮಿಂಚಿ ಸಕಾರಾತ್ಮಕ ಶಕ್ತಿಯನ್ನು ಇತರರ ಒಳಿತಿಗಾಗಿ ಬಳಸುವುದು ಮಾಂತ್ರಿಕ ತಾಂತ್ರಿಕರ ನಿಜವಾದ ಗುರಿಯಾಗಿರಬೇಕು ಎಂಬುದನ್ನು ಲೇಖಕರು ಈ ಕೃತಿಯಲ್ಲಿ ಮತ್ತೆ ಸಾಬೀತು ಮಾಡುತ್ತಾರೆ ತಾನರಿಯದಂತೆಯೇ ಪೂರ್ವಜನ್ಮದ ಋಣಾಸಂಬಂಧ ಸಂಸ್ಕಾರ ಕಿರಣನನ್ನು ಮಾಂತ್ರಿಕ ಲೋಕಕ್ಕೆ ಸೆಳೆದು ಬಿಡುತ್ತದೆ.

ಕಿರಣ್ ನಿಗೂ ಅಭಿಸಾರಿಕೆಗೂ ಇರುವ ಸಂಬಂಧವೇನು??!!ಅಭಿಸಾರಿಕೆ ಕಿರಣ ಮೇಲೆ ಕಕ್ಷೆ ಕಟ್ಟಲು ಕಾರಣವೇನು??!!ಅವಳು ತನ್ನ ಸ್ವಾರ್ಥಸಾಧನೆಗಾಗಿ ಕಿರಣ್ ನಿಗೆ ಹೇಗೆ ತೊಂದರೆ ಕೊಡುತ್ತಾಳೆ??!!ಕಿರಣ್ ಅವಳ ಸಿದ್ದಿಯನ್ನು ಹೇಗೆ ನಿಷ್ಕ್ರಿಯಗೊಳಿಸುತ್ತಾನೆ??!! ಕಾಳಿಂಗರಾಯರು ಅಷ್ಟು ದೊಡ್ಡ ಮೊತ್ತದ ಹಣವನ್ನು ಯಾರಿಗೆ ನೀಡಿರುತ್ತಾರೆ ಮಾಂತ್ರಿಕ ಲೋಕದ ಅಧಿಪತಿ ಯಾಗುವ ಕಿರಣ್ ಮತ್ತೆ ಲೌಕಿಕ ಲೋಕಕ್ಕೆ ಮರಳುತ್ತಾನೆಯೇ????!!ಮಧುಮಿತಳೊಂದಿಗೆ ಅವನ ವಿವಾಹವಾಗುತ್ತದೆಯೇ??!!ಎಂಬ ಎಲ್ಲ ಪ್ರಶ್ನೆಗಳಿಗೂ ಈ ರೋಚಕ ಕಾದಂಬರಿಯನ್ನು ಓದಿ.

ನೈಜತೆ ...ಭ್ರಾಂತಿ ...ವಾಸ್ತವ ಜಗತ್ತಿನ ಜೊತೆಜೊತೆಗೆ ಮಾಂತ್ರಿಕ ಲೋಕದ ಕಂಡುಕೇಳರಿಯದ ಸುದೀರ್ಘ ಮಾಹಿತಿಗಳನ್ನು ನಾವಿಲ್ಲಿ ಕಾಣಬಹುದು.ಈ ಪ್ರಕಾರದ ಸಾಹಿತ್ಯದಲ್ಲಿ ಆಸಕ್ತಿ ಇರುವವರು ಓದಲೇಬೇಕಾದ ಪುಸ್ತಕವಿದು.ಲೇಖಕರು ತಮ್ಮ ಮೊದಲನೆಯ ಪ್ರಯತ್ನದಲ್ಲಿಯೇ ಬಹಳ ಸುದೀರ್ಘ ಅಧ್ಯಯನ ಮಾಡಿ ಈ ಕೃತಿಯನ್ನು ಬರೆದ ಹಾಗಿದೆ .ಇವರಿಂದ ಮತ್ತಷ್ಟು ಒಳ್ಳೆಯ ಪುಸ್ತಕಗಳ ನಿರೀಕ್ಷೆಯಲ್ಲಿ ಪುಸ್ತಕವನ್ನು ಓದಿ.