Click here to Download MyLang App

ತಾಳಿಕೋಟೆಯ ಕದನದಲ್ಲಿ (ಆಡಿಯೋ ಬುಕ್)

ತಾಳಿಕೋಟೆಯ ಕದನದಲ್ಲಿ (ಆಡಿಯೋ ಬುಕ್)

audio book

ಪಬ್ಲಿಶರ್
ವಿಠಲ್ ಶೆಣೈ
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಓದಿದವರು: ಪ್ರತಿಬಿಂಬ ತಂಡ 

ಆಡಿಯೋ ಪುಸ್ತಕದ ಅವಧಿ : 6 ಗಂಟೆ 

ಚರಿತ್ರೆಯ ಅಧ್ಯಾಪಕ ವೈಕುಂಠರಾಯರು ಮೊದಲ ಬಾರಿಗೆ ಹಂಪಿಗೆ ಹೋದಾಗ ಹಂಪಿಯ ಮಣ್ಣಲ್ಲೇ ಅವರಿಗೊಂದು ಅಚ್ಚರಿ ಕಾದಿತ್ತು. ಆ ಅಚ್ಚರಿ ಅವರಿಗೆ ವಿಜಯನಗರ ಸಾಮ್ರಾಜ್ಯದ ಮತ್ತು ತಾಳಿಕೋಟೆಯ ಕದನದ ಒಂದು ವಿಶಿಷ್ಟವಾದ ಪರಿಚಯವನ್ನು ನೀಡಿತು. ಆ ಪರಿಚಯ ಅವರಿಗೆ ಅರಿವಿಲ್ಲದ ಒಂದು ದೊಡ್ಡ ಸಮಸ್ಯೆಯನ್ನೇ ಅವರ ಜೀವನದಲ್ಲಿ ತಂದೊಡ್ಡಿತು. ತಾಳಿಕೋಟೆಯ ಕದನಕ್ಕೂ, ಅವರ ಜೀವನದ ಸಮಸ್ಯೆಗೂ ಏನು ಸಂಬಂಧ? ಅವರು ಕಂಡ ಅಚ್ಚರಿಗಳು ಏನು? ಅವರ ನಿಜವಾದ ಸಮಸ್ಯೆ ಏನು? ಇವೆಲ್ಲವನ್ನೂ ಬಿಡಿಸಿ ಹೇಳುತ್ತದೆ ‘ತಾಳಿಕೋಟೆಯ ಕದನದಲ್ಲಿ’. 

ಈ ಪುಸ್ತಕ ಈಗ ಆಡಿಯೋ ಬುಕ್ ಆಗಿದೆ. ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

Customer Reviews

Based on 5 reviews
80%
(4)
20%
(1)
0%
(0)
0%
(0)
0%
(0)
V
VINAYAK S
ಕಾದಂಬರಿ ಕುರಿತು

ಇದು ಒಂದು ಅದ್ಬುತ ಕಾದಂಬರಿ, ಓದುಗರನ್ನು ವಿಸ್ಮಯ ಲೋಕಕ್ಕೆ ಕೊಂಡುಯುತ್ತದೆ, ಪಾತ್ರಗಳ ವಿನ್ಯಾಸ ಮನ ಮುಟ್ಟುವಂತಿದೆ, ಓದುಗನ ತನು ಮನವನ್ನು ಸಂಪೂರ್ಣವಾಗಿ ಸೇರೆ ಹಿಡಿಯುತ್ತದೆ.

A
Ashwij

ವಿಠಲ್ ಶೆಣೈ ಯವರ ಅದ್ಭುತ ಪ್ರಯತ್ನ. ವೈಕು - ವಿಶ್ವ ಎಂಬ ಇಬ್ಬರ ಗೆಳೆತನ, ಇದರ ಮೇಲಿದ್ದ ದೆವಿಕಾಳ ಅಸುಯ್ಯೆ ಒಂದು ಸಾಮಾನ್ಯ ಕುಟುಂಬದ ಸನ್ನಿವೇಶಗಳು ಅನಿಸುತಿತ್ತು. ಕಾದಂಬರಿ ಮದ್ಯೇದಲೆಲ್ಲೋ ಬಿರುಸಾಗಿ, ತಾಳಿಕೋಟೆ ಕದನ ಕಥೆ ಮತ್ತು ಬೇರೆ ತಿರುವುಗಳು ಸೇರಿ, ಕೊನೆಗೆ ಒಂದೊಳ್ಳೆ ಅಂತ್ಯ, ನಿಜಕ್ಕೂ, ಓದಲು ಕುಷಿಯಾಯ್ತು. :))

ಕಥೆಯ ಶುರುವಿನಲ್ಲಿ ವೈಕುಂಠ ನ confidence, ಸನ್ನಿವೇಶಗಳ ಪ್ರಕಾರ ಸೇರಿದ self-doubts ನಿಂದ ಮಂಕಾಗಿದ್ದು ಹಾಗೂ ಎಲ್ಲ ತಿಳಿದ ಮೇಲೆ, ನಿಭಾಯಿಸುವ ಹೊಸ ರೀತಿಯ confidence ಒಂದೊಳ್ಳೆ ಪಾತ್ರೆ ನಿರೂಪಣೆ!

S
Sudhindra KN
Super good experience

This should become film

ರಮೇಶ್
ಚಾರಿತ್ರಿಕ ಸ್ಥಳದ ಹಿನ್ನಲೆಯಲ್ಲಿ ಬರೆದ ಅಪೂರ್ವ ಮನೋವೈಜ್ಞಾನಿಕ ಕಾದಂಬರಿ

ವಿಠಲ್ ಶೆಣೈಯವರು 2018ರಲ್ಲಿ ಬರೆದ
*ತಾಳಿಕೋಟೆ ಕದನದಲ್ಲಿ* ಕಾದಂಬರಿಯನ್ನು ನಾನು ಪುಸ್ತಕ ರೂಪದಲ್ಲಿ ಓದಿದ್ದೇನೆ. ಕೃತಿಯ ಹೆಸರಿನಿಂದ ಕಥೆಯು ಚರಿತ್ರೆಗೆ ಸಂಬಂಧಿಸಿದ್ದು ಎನ್ನುವ ನನ್ನ ನಿರೀಕ್ಷೆಯನ್ನು ಸಂಪೂರ್ಣವಾಗಿ ಹುಸಿಯಾಗಿಸಿದೆ. ಯಾಕೆಂದರೆ ಒಂದು ವಿಭಿನ್ನವಾದ ಮನೋ-ವೈಜ್ಞಾನಿಕ ವಿಷಯವು ಈ ಕಾದಂಬರಿಯ ಕಥಾಹಂದರವಾಗಿತ್ತು. ಕಾದಂಬರಿಯ ಕೊನೆಯಂತೂ completely unexpected! and Amazing.
ನಾನಿದನ್ನು ಮೊದಲು ಹಂಪೆಯ ಐತಿಹ್ಯದ ಬಗ್ಗೆ ಇರುವ ಕಾದಂಬರಿಯೆಂದುಕೊಂಡು ಊಹಿಸಿ ಓದಲಾರಂಭಿಸಿದೆ. ಆದರೆ ಕಥೆಯ ಮೊದಲಲ್ಲೇ ಕಥೆಗಾರನು ತನ್ನ ಆಪ್ತ ವಿಶ್ವನನ್ನು ಕೊಲೆ ಮಾಡಿ ಅತ್ಯಂತ ಕುತೂಹಲವನ್ನು ಸೃಷ್ಟಿಸಿದ್ದಾರೆ. ತದನಂತರ ಅನಾವರಣವಾಗುವ ಕಥೆಯಲ್ಲಿ ಬೇರೆಯೇ ಒಂದು ವಿಷಯವನ್ನು ಹುದುಗಿಸಿ ಬರೆದಿದ್ದಾರೆ, ಎಂದು ಕೆಲಪುಟಗಳು ದಾಟುತ್ತಿದ್ದಂತೆ ಅನ್ನಿಸಿತು. ಮುಂದೆ ಕಥೆಯು ಬೇರೆಯೇ ರೀತಿಯಲ್ಲಿ ತೆರೆದುಕೊಳ್ಳುತ್ತಾ ಪ್ರತಿ ಪುಟವು ಆಸಕ್ತಿಯನ್ನು ಕೆರಳಿಸುತ್ತಾ ಹೋಯಿತು. ಮಧ್ಯಕ್ಕೆ ತಲುಪಿದಾಗ ನನ್ನ ನಿರೀಕ್ಷೆಯಂತೆ ವಿಶ್ವ ಒಬ್ಬ ನಿಗೂಢ ವ್ಯಕ್ತಿ ಎಂದು ತಿಳಿದು ಮತ್ತೊಂದು ಮಟ್ಟದ ತಿರುವು ಕಂಡಿತು. ಕೊನೆಯಲ್ಲಿ ಮತ್ತೊಂದು ತಿರುವು. ಕಾದಂಬರಿಯ ಅಂತ್ಯಕ್ಕೆ ಬರುತ್ತಿದ್ದಂತೆ ಸಂಪೂರ್ಣವಾಗಿ ಅನಿರೀಕ್ಷಿತವಾದ ಅಚ್ಚರಿಯು ಮೂಗಿನ ಮೇಲೆ ಬೆರಳಿಡುವಂತೆ ಮಾಡಿತು. ಕಥೆಗೆ ಸೂಕ್ತವಾಗಿ ಲೇಖಕರು ಹಂಪಿ ಮತ್ತು ತಾಳಿಕೊಟೆಯ ಕದನದ ವಿಷಯಗಳನ್ನು ಅತ್ಯಂತ ಸಮಂಜಸವಾಗಿ ಹಾಗೂ ಜಾಣ್ಮೆಯಿಂದ ಜೋಡಿಸಿದ್ದಾರೆ. ಮಲ್ಲಣ್ಣ ಮತ್ತು ತ್ರಿವಿಕ್ರಮರೆಂಬ ತಾಳಿಕೋಟೆಯ ಯೋಧರ ಮೂಲಕ ಗಿಲಾನಿ ಸೋದರರು ವಿಜಯನಗರಕ್ಕೆ ಮಾಡಿದ ದ್ರೋಹವನ್ನು ಮನಸ್ಸಿಗೆ ತಟ್ಟುವಂತೆ ವಿವರಿಸಿದ್ದಾರೆ. ಹಾಗೂ ಅಂತಹ ದೇಶದ್ರೋಹಿಗಳು ನಮ್ಮ ಮಧ್ಯೆ ಈಗಲೂ ಇದ್ದಾರೆ ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದಾರೆ.

ಒಟ್ಟಿನಲ್ಲಿ ಒಂದು ಚಾರಿತ್ರಿಕವೆಂಬಂತೆ ಕಂಡುಬರುವ ಈ ಕಾದಂಬರಿಯು ಓದುಗನಿಗೆ ಸಂಪೂರ್ಣವಾಗಿ ಹೊಸವಿಷಯದ ರೋಚಕ ಕಥೆಯನ್ನು ಚರಿತ್ರೆಯ ಹಿನ್ನಲೆಯಲ್ಲಿ ಓದಿದ ಅನುಭವವಾಗುವುದು... ಕಥೆಯನ್ನು ಓದುತ್ತಾ ಹೋಗುತ್ತಿದ್ದಂತೆ ಆಸಕ್ತಿಯು ಪುಟಿದೆದ್ದು ಒಂದೇ ಗುಕ್ಕಿನಲ್ಲಿ ಓದುವಂತೆ ಮಾಡುತ್ತದೆ *ತಾಳಿಕೋಟೆಯ ಕದನದಲ್ಲಿ* ಕಾದಂಬರಿ‌. ಇಂತಹ ಅದ್ಭುತವಾದ ಕೃತಿಯನ್ನು ಬರೆದ ವಿಠಲ್ ಶೆಣೈಯವರಿಗೆ ಅಭಿನಂದನೆಗಳು.

P
Prashanth M
Really good book

Writer and narrator both are complementing each other.