Click here to Download MyLang App

ಸ್ವಾತಂತ್ರ್ಯೋತ್ತರ ಭಾರತ ,  ಪ್ರೊ|| ಮೃದುಲಾ ಮುಖರ್ಜಿ,  ಪ್ರೊ|| ಬಿಪಿನ್ ಚಂದ್ರ,  ಪ್ರೊ|| ಆದಿತ್ಯ ಮುಖರ್ಜಿ,  ಡಾ|| ಸಿ. ಬಿ. ಕಮತಿ,  Swaatantryottara Bhaarata ,   Mridula Mukherjee,  Dr. C B Kamati,  Bipin Chandra,  Aditya Mukherjee,

ಸ್ವಾತಂತ್ರ್ಯೋತ್ತರ ಭಾರತ ಭಾಗ 2 (ಇಬುಕ್)

e-book

ಪಬ್ಲಿಶರ್
ಪ್ರೊ|| ಬಿಪಿನ್ ಚಂದ್ರ , ಪ್ರೊ|| ಮೃದುಲಾ ಮುಖರ್ಜಿ, ಪ್ರೊ|| ಆದಿತ್ಯ ಮುಖರ್ಜಿ,ಕನ್ನಡಕ್ಕೆ: ಡಾ|| ಸಿ. ಬಿ. ಕಮತಿ
ಮಾಮೂಲು ಬೆಲೆ
Rs. 100.00
ಸೇಲ್ ಬೆಲೆ
Rs. 100.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಲೇಖಕರು:


ಪ್ರೊ|| ಬಿಪಿನ್ ಚಂದ್ರ , ಪ್ರೊ|| ಮೃದುಲಾ ಮುಖರ್ಜಿ, ಪ್ರೊ|| ಆದಿತ್ಯ ಮುಖರ್ಜಿ

ಕನ್ನಡಕ್ಕೆ: ಡಾ|| ಸಿ. ಬಿ. ಕಮತಿ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಸಮಕಾಲೀನ ಭಾರತ ಕುರಿತು ಒಂದು ಪರಿಪೂರ್ಣ ಮತ್ತು ವಸ್ತುನಿಷ್ಠ ಪರಿಚಯ

ವಿಶ್ವದ ಅತ್ಯಂತ ಬೃಹತ್ ಪ್ರಜಾಪ್ರಭುತ್ವವೆನಿಸಿದ ಭಾರತದ ಪ್ರಗತಿಯ ಕತೆ ಸಮೃದ್ಧ ಮತ್ತು ಪ್ರೇರಣಾತ್ಮಕವಾಗಿದೆ. ಬಿಪಿನ್‍ಚಂದ್ರ ಮತ್ತು ಸಹಲೇಖಕರ ‘ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟ’ ಗ್ರಂಥದ ಮುಂದುವರಿದ ಭಾಗವಾಗಿರುವ ಈ ಸಂಪುಟ ಭಾರತ ಎದುರಿಸಿದ ಸವಾಲುಗಳನ್ನು ಹಾಗೂ ಅದು ಸಾಧಿಸಿದ ಯಶಸ್ಸುಗಳನ್ನು ವಸಾಹತುಶಾಹಿ ಪರಂಪರೆ ಮತ್ತು ಒಂದು ಶತಮಾನದವರೆಗೆ ನಡೆದ ಸ್ವಾತಂತ್ರ್ಯ ಹೋರಾಟದ ಬೆಳಕಿನಲ್ಲಿ ವಿಶ್ಲೇಷಿಸುತ್ತದೆ.


ಈ ಗ್ರಂಥ ಸಂವಿಧಾನ ಹೇಗೆ ರಚಿಸಲ್ಪಟ್ಟಿತು ಹಾಗೂ ನೆಹರುವಾದಿ ರಾಜಕೀಯ, ಆರ್ಥಿಕ ಕಾರ್ಯಕ್ರಮ ಮತ್ತು ವಿದೇಶಾಂಗ ನೀತಿ ಹೇಗೆ ವಿಕಸಿಸಲ್ಪಟ್ಟಿತು ಹಾಗೂ ಅಭಿವೃದ್ಧಿಪಡಿಸಲ್ಪಟ್ಟಿತು ಎಂಬುದನ್ನು ವಿವರಿಸುತ್ತದೆ. ಇದು ರಾಷ್ಟ್ರದ ಸದೃಢೀಕರಣ ಹಂತಗಳು, ಕೇಂದ್ರ ಮತ್ತು ರಾಜ್ಯಗಳಲ್ಲಿ ಪಕ್ಷ ರಾಜಕೀಯ, ಪಂಜಾಬ್ ಸಮಸ್ಯೆ, ಜಾತಿ ವಿರೋಧಿ ರಾಜಕಾರಣ ಮತ್ತು ಅಸ್ಪೃಶ್ಯತೆಯನ್ನು ಪರಾಮರ್ಶಿಸುತ್ತದೆ.
ಭಾರತದಲ್ಲಿ ಕೋಮುವಾದದ ಬೆಳವಣಿಗೆ ಹಾಗೂ ಅದನ್ನು ಪ್ರಚ್ಛನ್ನಗೊಳಿಸುವಲ್ಲಿ ರಾಜ್ಯಾಧಿಕಾರದ ಬಳಕೆಯನ್ನು ಈ ಗ್ರಂಥ ವಿಶ್ಲೇಷಿಸುತ್ತದೆ. ಇದು 2004ರ ಸಾರ್ವತ್ರಿಕ ಚುನಾವಣೆಗಳಲ್ಲಿ ರಾಷ್ಟ್ರೀಯ ಪ್ರಜಾಪ್ರಭುತ್ವ ಮೈತ್ರಿಕೂಟದ ಪತನದ ಪರಿಣಾಮವಾಗಿ ಸಂಯುಕ್ತ ಪ್ರಗತಿಪರ ಮೈತ್ರಿಕೂಟದ ಉದಯ ಹಾಗೂ ನಂತರದ ರಾಜಕೀಯ ವಿದ್ಯಮಾನಗಳ ಕುರಿತು ವಿವರಿಸುತ್ತದೆ.


ಈ ಗ್ರಂಥ 1991ರಿಂದೀಚೆಯ ಭಾರತೀಯ ಆರ್ಥಿಕ ಸುಧಾರಣೆಗಳು ಹಾಗೂ ವಿಸ್ತೃತ ಭೂಸುಧಾರಣೆಗಳು, ಮತ್ತು ಹಸಿರು ಕ್ರಾಂತಿಯಲ್ಲದೇ, ಹೊಸ ಸಹಸ್ರಮಾನದಲ್ಲಿ ಭಾರತೀಯ ಅರ್ಥವ್ಯವಸ್ಥೆಯ ಸಾಧನೆಗಳು ಮತ್ತು ವೈಫಲ್ಯಗಳ ಮೌಲ್ಯಮಾಪನ ಮಾಡುತ್ತದೆ. ಅದರೊಂದಿಗೆ ಜವಾಹರ್‍ಲಾಲ್ ನೆಹರು, ಲಾಲ್ ಬಹಾದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ಜಯಪ್ರಕಾಶ್ ನಾರಾಯಣ್, ರಾಜೀವ್ ಗಾಂಧಿ, ವಿಶ್ವನಾಥ ಪ್ರತಾಪ್ ಸಿಂಗ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಮನ್‍ಮೋಹನ್ ಸಿಂಗ್ ವ್ಯಕ್ತಿತ್ವಗಳನ್ನು ವಸ್ತುನಿಷ್ಠವಾಗಿ ಪರಿಚಯಿಸುತ್ತ ಪ್ರಗತಿಪಥದಲ್ಲಿರುವ ದೇಶವೊಂದರ ಸಂಚಲನೆ ಕುರಿತು ಗಣನೀಯ ಮೇಲ್ನೋಟವೊಂದನ್ನು ಒದಗಿಸುತ್ತದೆ.

ಸ್ವಾತಂತ್ರ್ಯೋತ್ತರ ಭಾರತ (1947-2008) ಬಿಪಿನ್ ಚಂದ್ರ, ಮೃದುಲಾ ಮುಖರ್ಜಿ ಮತ್ತು ಆದಿತ್ಯ ಮುಖರ್ಜಿ ಜತೆಗೂಡಿ ತಮ್ಮ ಅಧ್ಯಾಪನ, ಸಂಶೋಧನೆ, ವಿದ್ವಾಂಸರೊಂದಿಗಿನ ಪರಸ್ಪರಾನುವರ್ತನೆಯಲ್ಲದೆ, ಭಾರತ ಮತ್ತು ವಿಶ್ವದ ವಿವಿಧ ಅಧ್ಯಯನ ಕೇಂದ್ರಗಳ ಸೌಲಭ್ಯಗಳೆಲ್ಲವನ್ನೂ ಬಳಸಿ ರಚಿಸಿದ, ಇಂಗ್ಲಿಷ್ ಮೂಲ ಆಕರ ಗ್ರಂಥದ ಕನ್ನಡ ಅನುವಾದ ಕೃತಿ ಇದಾಗಿದೆ. ಇದು 1947ರಿಂದ 2008ರವರೆಗಿನ ಎಲ್ಲ ಪ್ರಮುಖ ವಿದ್ಯಮಾನಗಳನ್ನೂ ಇತಿಹಾಸ ರಚನಾ ವಿಜ್ಞಾನ ಮಾನದಂಡಗಳಿಗನುಗುಣವಾಗಿ ವಸ್ತುನಿಷ್ಠ ರೀತಿಯಲ್ಲಿ ಪ್ರಸ್ತುತಪಡಿಸುತ್ತದೆ. ಇದು ಸ್ನಾತಕ ಮತ್ತು ಸ್ನಾತಕೋತ್ತರ ಹಂತಗಳಲ್ಲಿ ಅನೇಕ ಉನ್ನತ ಶಿಕ್ಷಣ ಅಧ್ಯಯನ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಿಂದ ಶಿಫಾರಸು ಮಾಡಲ್ಪಟ್ಟ ಆಕರ ಗ್ರಂಥ ಮಾತ್ರವಲ್ಲದೇ, ಸಮಕಾಲೀನ ಭಾರತ ಕುರಿತು ಅಧ್ಯಯನ ನಡೆಸಬಯಸುವ ಸಂಶೋಧನಾರ್ಥಿಗಳಿಗೂ ಅತ್ಯಂತ ಉಪಯುಕ್ತ ಗ್ರಂಥವಾಗಬಲ್ಲದು.

 

ಪುಟಗಳು: 140

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)