Click here to Download MyLang App

ಎಲ್ಲಾ OK! TENSION ಯಾಕೆ (ಇಬುಕ್) - MyLang

ಎಲ್ಲಾ OK! TENSION ಯಾಕೆ (ಇಬುಕ್)

e-book

ಪಬ್ಲಿಶರ್
ಸುಂದರ್ ಬಾಬು
ಮಾಮೂಲು ಬೆಲೆ
Rs. 120.00
ಸೇಲ್ ಬೆಲೆ
Rs. 120.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಸಾವಣ್ಣ

Publisher: Sawanna

 

ಜಗತ್ತಿನಲ್ಲಿ ಟೆನ್ಷನ್‌ಗೆ ಗುರಿಯಾಗದ ಮನುಷ್ಯ ಇರುವುದಿಲ್ಲ ಎಂದರೆ ಅದು ಅತಿಶಯೋಕ್ತಿ ಆಗಲಾರದು. ಪ್ರತಿಯೊಬ್ಬರೂ ಒಂದಲ್ಲ ಒಂದು ಬಾರಿ ಮಾನಸಿಕ ಉದ್ವೇಗಕ್ಕೆ ಒಳಗಾಗುತ್ತಾನೆ/ಳೆ ಎಂಬುದನ್ನು ಎಲ್ಲರೂ ಒಪ್ಪಲೇಬೇಕು. ಈ ಟೆನ್ಷನ್ನಿಂದ ಶರೀರ ಹಾಗೂ ಮನಸ್ಸಿನ ಮೇಲೆ ಆಗುವ ಪರಿಣಾಮ ಅಷ್ಟಿಷ್ಟಲ್ಲ. ಟೆನ್ಷನ್ಗೆ ಗುರಿಯಾಗಿ ಅದೇ ಚಿಂತೆಯಲ್ಲಿ ಅದೆಷ್ಟೋ ಜನರು ಜೀವ ಕಳೆದುಕೊಳ್ಳುತ್ತಾರೆ.

ಎಲ್ಲವೂ ಸರಿಯಾಗಿದ್ದರೂ ಟೆನ್ಷನ್‌ಗೆ ಗುರಿಯಾಗಿ ಕಷ್ಟಗಳನ್ನು ಬರಮಾಡಿಕೊಳ್ಳುವವರಿಗೂ ಬರವಿಲ್ಲ. ಸಮಸ್ಯೆಗಳಿಗೆ ಹೆದರಿ ಸುಖಾ ಸುಮ್ಮನೆ ಮಾನಸಿಕ ಉದ್ವೇಗಕ್ಕೆ ಒಳಗಾಗಿ ಮನಸು ಹಾಗೂ ಶರೀರವನ್ನು ಹಿಂಸೆಗೆ ಗುರಿಪಡಿಸುವುದು ಎಷ್ಟರ ಮಟ್ಟಿಗೆ ಸರಿ? ಎಲ್ಲಾ ಸಮಸ್ಯೆಗಳಿಗೂ ಒಂದು ಪರಿಹಾರ ಇದ್ದೇ ಇರುತ್ತದೆ. ಸ್ವಲ್ಪ ತಾಳ್ಮೆಯಿಂದ ಯೋಚಿಸಿ ತಮ್ಮನ್ನು ಕಾಡುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ ಟೆನ್ಷನ್ನಮ್ಮ ಬಳಿ ಸುಳಿಯುವುದಿಲ್ಲ.

ಕೆಲವರು ಕಾರಣವಿಲ್ಲದೇ ಸುಮ್ಮನೆ ಟೆನ್ಷನ್‌ಗೆ ಒಳಗಾದರೆ ಇನ್ನು ಕೆಲವರು ಸಣ್ಣ ಪುಟ್ಟ ಕಾರಣಗಳಿಗೆ ಟೆನ್ಸ್ ಆಗುತ್ತಾರೆ. ಇನ್ನು ಕೆಲವರು ತಾವೇ ಮಾಡಿಕೊಂಡ ತಪ್ಪುಗಳ ಕಾರಣದಿಂದಾಗಿ ಸಮಸ್ಯೆಗಳನ್ನು ಸೃಷ್ಟಿಸಿಕೊಂಡು ಟೆನ್ಷನ್ಗೆ ಗುರಿಯಾಗುತ್ತಾರೆ. ಅನಿವಾರ್ಯವಾಗಿ ಕಷ್ಟಗಳನ್ನು ಎದುರಿಸಬೇಕಾದ ಘಟನೆಗಳು ಸಂಭವಿಸಿ, ಜೀವನವೆಲ್ಲಾ ಮಾನಸಿಕ ಉದ್ವೇಗಕ್ಕೆ ಗುರಿಯಾಗುವ ಜನರೂ ಇದ್ದಾರೆ. ಗಂಭೀರ ಸಮಸ್ಯೆಗಳಿಗೆ ತಲೆ ಕೆಡಿಸಿಕೊಳ್ಳದೇ ಲೈಲ್ಲಿ ಇವೆಲ್ಲಾ ಸಾಮಾನ್ಯ ಎನ್ನುವ ಮನೋಭಾವ ಮತ್ತೆ ಕೆಲವರದ್ದು.

ನೆಮ್ಮದಿಯಾಗಿ ಬಾಳಲು ಸಾಕಷ್ಟು ಅವಕಾಶಗಳಿವೆ. ತಮಗೆ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡದೇ ಟೆನ್ಸ್ ಆಗುವರು ಕೆಲವರಾದರೆ, ಯಾವುದೇ ಸಣ್ಣಪುಟ್ಟ ಸಮಸ್ಯೆಗಳಿಗೆ ಅಲ್ಲಲ್ಲೇ ಪರಿಹಾರ ಕಂಡುಕೊಂಡು ನಿರಾಳವಾಗುವವರು ಕೆಲವರು.

ಟೆನ್ಷನ್ನಿಂದ ಮುಕ್ತಿ ಪಡೆಯುವುದು ಹೇಗೆ? - ಇಗೋ ಇಲ್ಲಿದೆ ಹಲವಾರು ಸಲಹೆ ಹಾಗೂ ಉತ್ತರ.

 

ಪುಟಗಳು : 176

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !