ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ನಾವಿ೦ದು ಎಲ್ಲ ರಂಗಗಳಲ್ಲೂ ಸ್ಪರ್ಧೆಯನ್ನೆದುರಿಸಲೇ ಬೇಕಾದ೦ತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಬ್ಬರ ಏಳ್ಗೆಯನ್ನು ಸಹಿಸದೆ “ಓವರ್‌ಟೀಕ್' ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಸ್ಪರ್ಧಿಸಿ ಗೆಲ್ಲಲು ಅಡ್ಡದಾರಿಗಳನ್ನು ಹಿಡಿಯಲು ಹಿ೦ಜರಿಯುವುದಿಲ್ಲ. ಇದರ ನೇರ ಬಲಿಪಶುಗಳು ವಿದ್ಯಾರ್ಥಿಗಳು ಮತ್ತು ಮಕ್ಕಳು. ಇದು ಅವರ ಬಾಲ್ಯವನ್ನೇ ಆಹುತಿ ತೆಗೆದುಕೊಳ್ಳುತ್ತಿದೆ. ಈ ಸ್ಪರ್ಧೆಯ ಒತ್ತಡಕ್ಕೆ ಸಿಲುಕಿದ ಅದೆಷ್ಟೋ ಮಕ್ಕಳು ಆತ್ಮಹತ್ಯೆ ಮಾಡಿಕೊ೦ಡಿದ್ದಾರೆ ಅಥವಾ ಮಾನಸಿಕ ರೋಗಿಗಳಾಗಿ ಬದಲಾಗಿದ್ದಾರೆ. ಸ್ಪರ್ಧೆ ತನ್ನ ಸಹಪಾಠಿಯನ್ನು ದ್ವೇಷಿಸುವುದನ್ನು ಕಲಿಸುತ್ತದೆ. ಬಾಲ್ಯದ ಮುಗ್ಧತೆ ಕಲುಷಿತಗೊಳ್ಳುತ್ತದೆ.
ಎದುರಾಳಿಯನ್ನು ತುಳಿಯುವುದಕ್ಕೆ ಇದು ಕಲಿಸುತ್ತದೆ. ರಾಜಕೀಯ, ಶಿಕ್ಷಣ, ಸಾಹಿತ್ಯ, ಕ್ರೀಡೆ ಎಲ್ಲ ಕಡೆಯೂ ಕಣ್ಣಿಗೆ ರಾಚುವಂತೆ ಇರುವ, ಸ್ನೇಹ ಸ೦ಬ೦ಧವನ್ನು ಹಾಳುಗೆಡಹುವ ಇ೦ತಹ ಸ್ಪರ್ಧೆಗಳು ಬೇಕೆ? ಎ೦ಬ ಪ್ರಶ್ನೆಯನ್ನು ಮು೦ದಿಟ್ಟುಕೊ೦ಡು ಡಾ. ಮಹಾಬಲೇಶ್ಚರ ರಾವ್ ಅವರ 'ಸ್ಪರ್ಧೆಯೊ? ಸಹಕಾರವೊ?' ಕೃತಿ ಚರ್ಚಿಸುತ್ತದೆ. ಸ್ಫರ್ಧಾತ್ಮಕತೆಯ ಮನೋವೈಜ್ಞಾನಿಕ ಅಂತರಂಗದೊಳಗೆ ಈ ಕೃತಿ ಪ್ರವೇಶಿಸುತ್ತದೆ.
- ವಾರ್ತಾ ಭಾರತಿ ಪುಸ್ತಕ ವಿಮರ್ಶೆ
https://m.varthabharati.in/article/2019_12_26/225174
ಪುಟಗಳು: 72
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !