Click here to Download MyLang App

ಶ್ಮಶಾನ ಕುರುಕ್ಷೇತ್ರಂ,    ಕುವೆಂಪು,  smashanna kurukshethra,  Smashana Kurukshethrum,  kuvempu,

ಶ್ಮಶಾನ ಕುರುಕ್ಷೇತ್ರಂ (ಇಬುಕ್)

e-book

ಪಬ್ಲಿಶರ್
ಕುವೆಂಪು
ಮಾಮೂಲು ಬೆಲೆ
Rs. 42.00
ಸೇಲ್ ಬೆಲೆ
Rs. 42.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana

 

ಮೊನ್ನೆ ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಹೋಗುವಾಗ ಕುವೆಂಪು ವಿರಚಿತ "ಶ್ಮಶಾನ ಕುರುಕ್ಷೇತ್ರಂ" ನಾಟಕ ಓದುತ್ತಿದ್ದೆ. ಕುವೆಂಪುರವರ ಕೃತಿ ಗಳನ್ನೋದುವುದು ಸದಾ ಕಾಲಕ್ಕೂ ರಸಾನುಭವವೇ. ಕಲಿಪುರುಷ ದ್ವಾಪರನಿಗೆ ವಚನವಿತ್ತಂತೆ, ಕಲಿಮಾನವರು ಕುಬ್ಜರಾದರೂ, ಎಲ್ಲರನ್ನೂ ಮೀರಿಸಿದ ಗಟ್ಟಿಗರೇ ಸೈ. ಶ್ಮಶಾನ ರುದ್ರದೇವನು ದ್ವಾಪರನಿಗೆ ತೋರುವ ಕಾಲಜ್ಞಾನದ ತುಣುಕು, ರಸರೋಮಾಂಚನಗೊಳಿಸುವ ಸೆಳಕೇ ಸೈ. ಜಗದೀಶ ಕೃಷ್ಣ ನ ನಾಟಕದಲ್ಲಿ ಎಲ್ಲರೂ ಅಭಿನಯಿಸಿ ನೇಪಥ್ಯಕ್ಕೆ ಸರಿಯುವ ಪಾತ್ರಧಾರಿಗಳೇ. ದುರ್ಯೋಧನನು ಕೌರವ ಕೃಷ್ಣ . ಧರ್ಮಜ ಪಾಂಡವ ಕೃಷ್ಣ . ಸೊಗಸಾದ ಪರಿಕಲ್ಪನೆಯ ಈ ನಾಟಕ, ಕದನದ ಕೇಡನ್ನು ಮೊಗೆಮೊಗೆದು ತೋರುವ, ಅಂತೆಯೇ ಅಧ್ಯಾತ್ಮದ ಅಂತಃದರ್ಶನವನ್ನೂ ನೀಡುವ ಅತಿ ಸುಂದರ ನಾಟಕವನ್ನೋದುವ ಘಳಿಗೆಗಳಲ್ಲಿ ನನ್ನ ಅಂತಃಕರಣ ಕಲಕಿ ಕಣ್ಣೀರಾಗಿ ಹರಿದದ್ದು ಸತ್ಯ. ಇಂತಹ ದರ್ಶನಗಳು ಕಾಲದೇಶಗಳನ್ನು ಮೀರಿ ಚಿಂತನಾಶೀಲ ಮನುಜರೆಲ್ಲರಿಗೂ ಯಾವುದೋ ಒಂದು ಕಾಲಘಟ್ಟದಲ್ಲಿ, ಅರಿಕೆಗೆ ಬರುತ್ತಲೇ ಇರುತ್ತವೆ.

- ಸಂಪದ ವಿಮರ್ಶೆ https://sampada.net/node/31129

 

ಪುಟಗಳು: 46

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 3 reviews
100%
(3)
0%
(0)
0%
(0)
0%
(0)
0%
(0)
A
Akshatha Shankar
ಪುಸ್ತಕ ಪ್ರತಿ ಇನ್ನೂ ತಲುಪಿಲ್ಲ

ಇಂದಿಗೆ 14 ದಿನಗಳ ಹಿಂದೆ ಪುಸ್ತಕ ಖರೀದಿಸಿ ಹಣವನ್ನು ಫೋನ್ ಪೆ ಮೂಲಕ ಪಾವತಿ ಮಾಡಿದ್ದೇನೆ . ಆದರೆ ಪುಸ್ತಕ ಇನ್ನೂ ನನಗೆ ತಲುಪಿಲ್ಲ . ಕಾರಣ ತಿಳಿಯ ಬಯಸುತ್ತೇನೆ

N
Nayaz Riyazulla
ಕುರುಕ್ಷೇತ್ರ ಯುದ್ಧದ, ವರ್ತಮಾನದ ಮತ್ತು ಭವಿಷ್ಯ ರೂಪ

ಪಾಂಡವರು ಗೆದ್ದು ಗೆಲ್ಲಲಿಲ್ಲ, ಕೌರವರು ಸೋತು ಸೋಲಲಿಲ್ಲ. ಇದು ಕುರುಕ್ಷೇತ್ರ ಯುದ್ಧದ ಪರಿಣಾಮ? ಇರಬಹುದು, ಕೌರವರು ಪಾಂಡವರನ್ನು ಪಕ್ಕಕ್ಕಿಟ್ಟು ಸಾಮಾನ್ಯ ಜನರ ದೃಷ್ಟಿಯಲ್ಲಿ ಸ್ಥಿತಿಯನ್ನು ಪರಿಶೀಲಿಸಿದಾಗ, ಅವು ನಮಗೆ ನಮ್ಮದೇ ಪ್ರತಿಬಿಂಬದಂತೆ ಕಾಣುತ್ತವೆ.

ಯುದ್ಧ ಮತ್ತು ಹಿಂಸೆಯೇ ಎಲ್ಲ ಪ್ರಶ್ನೆಗಳಿಗೂ, ಸನ್ನಿವೇಶಗಳಿಗೂ ಉತ್ತರ ಎಂದು ಬಡಿದಾಡುವ ಮನುಜ ರೂಪದ ರಕ್ಕಸರಿಗೆ, ಕೌರವರಂತವರಿಗೆ ಸಿಗುವುದು ನೀರಿಗೆ ಬದಲು ರಕ್ತ, ಔತಣದ ಬದಲು ಕೊಳಕು ನರಮಾಂಸ. ದಾಯಾದಿಗಳ ಕದನದೊಳ್ ಸೋತು ಸತ್ತದ್ದು ಕೇವಲ ಭೀಷ್ಮ, ಕರ್ಣ, ದ್ರೋಣ, ಕೌರವನಲ್ಲ, ಅಥವಾ ಪಾಂಡವರಲ್ಲಿ ಅಭಿಮನ್ಯು, ಘಟೋತ್ಕಚರು ಅಲ್ಲ. ಇಬ್ಬರ ಕಡೆಯಲ್ಲೂ ವಿಧಿ ಹೆಣಗಳ ಗೋಪುರವೇ ಕಟ್ಟಿತ್ತು. ನೀರು ಸಿಗದೇ ಜಿಗುಟು ರಕ್ತ ಸಿಗುತಿತ್ತು. ತಾಯಿ ತನ್ನ ಸತ್ತ ಮಗನನ್ನು ಹುಡುಕಿಕೊಂಡು ಅಥವಾ ಮಗು ತನ್ನ ಸತ್ತ ತಂದೆಯನ್ನು ಶ್ಮಶಾನದಲ್ಲಿ ಹುಡುಕಿಕೊಂಡು ಬರುವ ಆ ದೃಶ್ಯ ಮೂಡಿಸಿ, ನಾವು ಮಾನವರೇ? ಎಂಬ ಪ್ರಶ್ನೆ ಹುಟ್ಟಿ ಹಾಕುತ್ತದೆ. ಇವೆಲ್ಲದರ ಚಿತ್ರಣ ಈ ಅಮೋಘ ನಾಟಕ.

ಕುವೆಂಪು ಪೌರಾಣಿಕ ನಾಟಕ ಬರೆದರೂ ಅದನ್ನು ವರ್ತಮಾನದಲ್ಲಿ ನಡೆಯುತ್ತಿರುವ ಅಥವಾ ಭವಿಷ್ಯದಲ್ಲಿ ಮನುಜರು ಎದರಿಸುವ ಘಟನಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಬರೆಯುವುದು ಅವರ ಹೆಚ್ಚುಗಾರಿಕೆ. ನಾಟಕ ಕಾವ್ಯಮಯವಾಗಿದ್ದರೂ, ನಾಟಕೀಯ ಸನ್ನಿವೇಶಗಳು ಈ ನಾಟಕವನ್ನು ಇನ್ನೂ ಗಟ್ಟಿ ಮಾಡುತ್ತದೆ. ಒಂದಷ್ಟು ಉದಾಹರಣೆ ಕೊಡುತ್ತೇನೆ.

1. ಭೀಮನು ಅಭಿಮನ್ಯು, ಘಟೋತ್ಕಚರ ಅಂತ್ಯ ಕಾರ್ಯ ಮಾಡುವ ಸಂದರ್ಭದಲ್ಲಿ ದೃತರಾಷ್ಟ್ರ ಮತ್ತು ಗಾಂಧಾರಿಯ ನೋವು ತಿಳಿಯುತ್ತದೆ, ಅಲ್ಲಿಯವರೆಗೂ ಇದ್ದ ಅವನ ಮೊಂಡು ವೀರತನ ನಾಶವಾಗುತ್ತದೆ.

2. ಕೌರವರ ಪಡೆಯ ಒಬ್ಬ ಸೈನಿಕ, ತನ್ನ ಅಂತಿಮ ಕ್ಷಣದಲ್ಲಿ ನೀರನ್ನು ಹರಸಿ ಸಾಯುವ ಪರಿಸ್ಥಿತಿಯಲ್ಲಿದ್ದಾಗ ಯುದಿಷ್ಟಿರ ನೀರು ಕುಡಿಸುತ್ತಾನೆ, ಆ ಸೈನಿಕ ನೀರು ಕುಡಿಸಿದವ ಪಾಂಡವ ಎಂದು ತಿಳಿದಾಗ, ಅಂತಿಮ ಕಾಲದಲ್ಲಿ ತನ್ನ ಸ್ವಾಮಿಗೆ ದ್ರೋಹ ಬಗೆದೆ ಎಂದೆನೆಸಿ ಪ್ರಾಣ ತ್ಯಜಿಸುತ್ತಾನೆ.

3. ಇನ್ನೂ ಭೂಮಿ ತೂಕಕ್ಕೆ ನಿಲ್ಲಬಲ್ಲ ದೃಶ್ಯವೆಂದರೆ ಹತ್ತನೇ ದೃಶ್ಯ. ಇಲ್ಲಿ ಕೃಷ್ಣ, ರುದ್ರನಿಗೆ ಕಲಿಯುಗದಲ್ಲಿ ನಡೆಯುವ ಪ್ರಮುಖ ಘಟನೆಗಳ ದಿವ್ಯದರ್ಶನವನ್ನು ತೋರಿಸುತ್ತಾರೆ. ಆ ದೃಶ್ಯದ ಸಂಭಾಷಣೆ ಮತ್ತು ವಸ್ತು ಭವ್ಯ ಮತ್ತು ಅನಂತ.

ಬಹುಷಃ ನನ್ನ ಮಟ್ಟಿಗೆ ಇದು ಕುವೆಂಪುರವರು ಬರೆದಿರುವ ಶ್ರೇಷ್ಠ ನಾಟಕ. ಕೆಲವು ಪುಸ್ತಕಗಳನ್ನು ಸಮಯವನ್ನು ಕಳೆಯುವದಕ್ಕೆ, ಮನ ಹಗುರಗೊಳ್ಳಿಸುವದಕ್ಕೆ ಓದಿ ಮರೆಯಬಹುದು, ಕೆಲ ಪುಸ್ತಕಗಳನ್ನು ನಾವು ಹೃದಯದಲ್ಲಿ ಆಳವಾದ ಗುಣಿ ತೆಗೆದು ಜೋಪಾನವಾಗಿ ಕಾಪಾಡಿಕೊಳ್ಳಬೇಕು. ಅವು ನಮಗೆ ಅಗ್ಗದ ಬೆಲೆಯಲ್ಲಿ ಸಿಗಬಹುದಾದ ಅನರ್ಘ್ಯ ರತ್ನಗಳು. ಮನಸ್ಸು ಮಾನವೀಯತೆ ಮರೆತು ನಶಿಸಿ ಹೋಗುವ ಸಂದರ್ಭದಲ್ಲಿ ಇಂತಹ ಪುಸ್ತಕಗಳು ನಮ್ಮನ್ನು ಕಾಪಾಡುತ್ತವೆ, ನಮ್ಮನ್ನು ರೂಪಿಸುತ್ತವೆ.

ಈ ನಾಟಕದ ರಂಗಪ್ರಯೋಗಕ್ಕೆ ಸಿಕ್ಕ ಯಶಸ್ಸು ಮತ್ತು ವಿಮರ್ಶೆ, ಮುದ್ರಿತ ರೂಪಕ್ಕೆ ಏಕೋ ಸಿಗಲಿಲ್ಲ. ಈ ಪುಸ್ತಕದ ಬಗ್ಗೆ ವಿಮರ್ಶಕರು, ಓದುಗರು ಚರ್ಚಿಸಿದ್ದು ಕಡಿಮೆಯೇ. ಚರ್ಚಿಸಿ ಬಹಳಷ್ಟು ಮನಗಳನ್ನು ತಲುಪಬಹುದಿತ್ತು. ನಮ್ಮ ಕಿರಿಯರಿಗೆ, ಬರುವ ಚೇತನಗಳಿಗೆ ಮಹಾಭಾರತ ಕಥೆ ಹೇಳುವಷ್ಟೇ ಮುಖ್ಯ, ಅದರ ಪರಿಣಾಮವನ್ನು ವಿವರಿಸುವುದು ಸಹ. ನಮಗೋಸ್ಕರ ಆ ಕಾರ್ಯವನ್ನು ನಮ್ಮ ಮಹಾಕವಿ ಮಾಡಿಕೊಟ್ಟಿದ್ದಾರೆ. ನಾವು ಆ ವಿಚಾರದ ದೀವಿಗೆಯನ್ನು ಸಾಧ್ಯವಾದಷ್ಟು ಮನಗಳಲ್ಲಿ ಹಚ್ಚೋಣ, ಅಂಚೋಣ.

ಸತ್ಯನಾರಾಯಣ ಬಿ.ಆರ್.‌
ಯುದ್ಧದ ನಿರರ್ಥಕೆತೆಯನ್ನು ಸಾರುವ ಸಾರ್ವಾಕಲಿಕ ಶ್ರೇಷ್ಠ ನಾಟಕ ಶ್ಮಶಾನ ಕುರುಕ್ಷೇತ್ರಂ

ಶ್ಮಶಾನ ಕುರುಕ್ಷೇತ್ರಂ ಯುದ್ಧದ ನಿರರ್ಥಕತೆಯನ್ನು ಎತ್ತಿಹಿಡಿಯುವ ನಾಟಕ. ಕುವೆಂಪು ಅವರು ನೀಡಿರುವ ವಿವರಣೆಯಂತೆ ಅದೊಂದು ಪ್ರತಿಮಾ ಸೃಷ್ಟಿ. ಮನುಕುಲದ ಮಹಾದೌರ್ಬಾಗ್ಯಗಳಲ್ಲಿ ಒಂದಾದ, ಅತ್ಯಂತ ವಿನಾಶಕಾರಿಯಾದ ಯುದ್ಧದ ದುರಂತತೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ ನಾಟಕವೂ ಹೌದು. ಕರ್ಣ ಕುಂತಿಯ ಮಗ ಎಂದು ಪಾಂಡುಪುತ್ರರಿಗೆ ತಿಳಿದು, ’ಕಡೆಗುಂ ಪೊಲಸಾದುದೀ ಭಾರತ ಸಂಗ್ರಾಮಂ’ ಎಂದ ಭೀಮನ ಮಾತು ಯುದ್ಧದ ನಿರರ್ಥಕತೆಯನ್ನು ಎತ್ತಿಹಿಡಿಯುತ್ತದೆ. ಆದರೆ, ಆ ಮಾತನಾಡುತ್ತಿರುವನು ಆ ಯುದ್ಧದದಲ್ಲಿ ಸ್ವತಃ ಬಾಗಿಯಾದ ಭೀಮ. ಅವನ ಉದ್ಘಾರ ಆತನಿಗಾದ ವೈಯಕ್ತಿಕ ಆಘಾತದಿಂದ ಹೊರಟಿದ್ದೇ ಹೊರತು ಯುದ್ಧದ ಭಯಂಕರತೆಯಿಂದಲ್ಲ. ಆದರೆ, ಅದಕ್ಕಿಂತಲೂ ಪರಿಣಾಮಕಾರಿಯಾಗಿ ಪಾಂಡವರ ಕಡೆಯ ಸೈನಿಕನೊಬ್ಬನ ಪತ್ನಿ ಮತ್ತು ಮಗು, ಕೌರವರ ಕಡೆಯ ಸೈನಿಕನೊಬ್ಬನ ತಾಯಿ ಮುದುಕಿ ಈ ಪಾತ್ರಗಳು ಮನದಟ್ಟು ಮಾಡಿಸುತ್ತವೆ. ’ಆರಿಗಾರ್ ಪಗೆ? ನಿನಗಾನ್ ಪಗೆಯೆ?’ ಎಂಬ ಮುದುಕಿಯ ಮಾತು, ಕೊನೆಯಲ್ಲಿ ’ಕೌರವರು ಹಾಳಾಗಲಿ; ಪಾಂಡವರು ಹಾಳಾಗಲಿ’ ಎನ್ನುವ ರೋಧನವೇ ಭೀಮನ ಮಾತಿಗಿಂತಲೂ ಹೆಚ್ಚಾಗಿ ತಾಗುತ್ತವೆ. ಪಾಂಡವರ ಕೈಯಿಂದ ಕೊನೆಯ ನೀರು ಕುಡಿದ ಸೈನಿಕ ಸಾಯುವ ಮೊದಲು, ಅದಕ್ಕಾಗಿ ಪಶ್ಚತ್ತಾಪಪಟ್ಟು ತನ್ನ ಕೌರವ ಸ್ವಾಮಿಯಲ್ಲಿ ಕ್ಷಮೆ ಕೇಳಿ ಸಾಯುತ್ತಾನೆ. ಅಂತಹ ಸನ್ನಿವೇಶಗಳು ಉಂಟುಮಾಡಿದ್ದ ವೀರರಸ ಸಂಪ್ರಾಪ್ತಿ, ಕೌರವ ಪಾಂಡವರು ಹಾಳಾಗಲಿ ಎನ್ನುವ ಅರ್ತಧ್ವನಿಯ ನಡುವೆ ಉಡುಗಿಹೋಗುತ್ತದೆ! ಹೀಗೆ ತೀರಾ ಸಾಮಾನ್ಯ ಪಾತ್ರವೂ ವಿಶ್ವಘಟನೆಯ ಭಾಗವಾಗಿರುವಂತೆ ಉದಾತ್ತವಾಗಿ ಕಾಣಿಸುವಂತೆ ಕವಿ ಕಡೆದಿಟ್ಟಿದ್ದಾರೆ. ಸಮಭಾವದ ಕವಿಗೆ ಯಾವ ಪಾತ್ರವೂ ಮುಖ್ಯವಲ್ಲ; ಯಾವ ಪಾತ್ರವೂ ಅಮುಖ್ಯವಲ್ಲ!
ಯುದ್ಧೋನ್ಮತ್ತತೆ ಇಂದು ನಮ್ಮದೇಶವನ್ನು ಜಗತ್ತನ್ನು ಬಹುವಾಗಿ ಕಾಡುತ್ತಿರುವ ವಿಚಾರ. ಬದಲಾದ ಕಾಲಘಟ್ಟದಲ್ಲಿ ಸಮೂಹನಾಶಕ ಯುದ್ಧವನ್ನೂ ಮೀರಿಸುತ್ತಿರುವಂತೆ, ಸಮೂಹ ಮಾದ್ಯಮಗಳು, ಸಾಮಾಜಿಕ ಜಾಲತಾಣಗಳು ಯುದ್ಧದ ಇನ್ನೊಂದು ರೂಪವೇ ಆಗಿವೆ. ಮಾನಸಿಕ ಹಾಗೂ ಸಾಮಾಜಿಕ ವಿಘಟನೆಗೆ ಕಾರಣಾವಾಗುತ್ತಿರುವ ಇವುಗಳ ವಿರುದ್ಧದ ಯುದ್ಧವೇ ಒಂದು ಜಾಗತಿಕ ಸವಾಲು, ಇಂದಿನ ಮಟ್ಟಿಗೆ. ಶ್ಮಶಾನ ಕುರುಕ್ಷೇತ್ರಂ ನಾಟಕದ ಕೊನೆಯ ದೃಶ್ಯ ಮುಗಿಯುವಂತೆ ಕಾಣುತ್ತಲೇ ಇಲ್ಲ. ಕಾರ್ಗಿಲ್ ಯುದ್ಧೋತ್ತರ ದಿನಗಳಲ್ಲಿ ಒಮ್ಮೆ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಶ್ಮಶಾನ ಕುರುಕ್ಷೇತ್ರ ನಾಟಕದಲ್ಲಿ ಕೊನೆಯ ದೃಶ್ಯದಲ್ಲಿ ಮಹಾಯುದ್ಧಗಳ ಸಾಲಿನಲ್ಲಿ ಕಾರ್ಗಿಲ್ ಯುದ್ಧದ ಪ್ರಸ್ತಾಪವೂ ಆಗಿತ್ತೆಂದು ವರದಿಯಾಗಿತ್ತು. ಮುಂದೆಯೂ ಹೊಸ ಹೊಸ ಯುದ್ಧಗಳ ಹೆಸರುಗಳು ಆ ಪಟ್ಟಿಯಲ್ಲಿ ಸೇರುತ್ತಾ ಹೋದರೆ ಆಶ್ಚರ್ಯವೇನಿಲ್ಲ. ವರ್ತಮಾನದ ಭಾರತ ಸನ್ನಿವೇಶಕ್ಕೆ ಸಂಬಂಧಿಸಿದಂತೆ ’ಯುದ್ಧೋನ್ಮತ್ತ ಮಾದ್ಯಮಗಳ್... ಸಾಮಾಜಿಕ ಜಾಲತಾಣಗಳ್...’ ಎಂಬ ಸಾಲೊಂದನ್ನು ನಿಸ್ಸಂಶಯವಾಗಿ ಸೇರಿಸಬಹುದೆನ್ನಿಸುತ್ತದೆ.