ಪ್ರಕಾಶಕರು: ಬಹುರೂಪಿ ಪ್ರಕಾಶನ
Publisher: Bahuroopi Prakashana
‘ಇರುವ ಪಾತ್ರಗಳನ್ನು ಕಥೆಗಾರ ಸೃಷ್ಟಿಸುತ್ತಾನೋ ಅಥವಾ ಕಥೆಗಾರ ಸೃಷ್ಟಿಸಿದ ಪಾತ್ರಗಳು ಲೋಕದಲ್ಲಿ ಹುಟ್ಟಿಕೊಳ್ಳುತ್ತವೆಯೋ’;
‘ಟೈಪಿಸ್ಟ್ ತಿರಸ್ಕರಿಸಿದ ಕಥೆ’ಯ ಈ ಕೊನೆಯ ಸಾಲುಗಳು ಇಡೀ ಪುಸ್ತಕದ ಧ್ವನಿ ಹಾಗೂ ಇಲ್ಲಿನ ಕಥೆಗಳಿಗೆ ಹಿಡಿದ ಕೈಗನ್ನಡಿ. ಓದಿದಂತೆಲ್ಲ ನಾವೂ ತಳೆಯಬಹುದಾದ ಭಾವನೆಗಳ ಗರಿಬಿಚ್ಚಿಸುತ್ತದೆ. ಹೊಸ ತಲೆಮಾರಿನ ಯುವ ಕಥೆಗಾರ ಶಿವಕುಮಾರ ಮಾವಲಿಯವರ ಇಲ್ಲಿನ 30 ಕಥೆಗಳು ಇಂತಹದ್ದೇ ನವಿರು ಚಿತ್ರಣದ ಸಾರ. ಓದುಗರೊಡನೆ ಮಾತನಾಡುವ, ಹೊಸದೊಂದು ಚಿಂತನೆಗೆ ಎಡತಾಕುವಂತೆ ಮಾಡುವ ಕಥೆಗಳಿವೆ ಇಲ್ಲಿ. ಎರಡೇ ವಾಕ್ಯದ ಕಥೆ ಕಾಡಬಲ್ಲದು ದೀರ್ಘಕಾಲ, ಮಾತಿನಂಗಡಿಯಲ್ಲೂ ನೀರವ ಮೌನ, ಉದ್ದೇಶ ಕಾರ್ಯಗಳ ನಡುವೆ ದಾಟಲಾರದ ಕಂದಕ, ವ್ಯಕ್ತಿ ಪೂಜೆಯ ಭ್ರಾಂತಿ, ಪ್ರೇಮ ನಿವೇದನೆಯ ನಾವೀನ್ಯತೆ,; ಜೀವನ ಜೀಕುವ ಇಂತಹದ್ದೇ ಕಥೆಗಳ ಸಂಕಲನ ಈ ಹೊತ್ತಗೆ.
ಪುಟಗಳು: 160
- ಪ್ರಜಾವಾಣಿ ವಿಮರ್ಶೆ (https://www.prajavani.net/artculture/book-review/modala-odu-666442.html)
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !