'ದೇವರು ಅರೆಸ್ಟ್ ಆದ'. ಅರೆಸ್ಟ್ ಮಾಡುವ ಸಾಹಸಕ್ಕೆ ಕೈ ಹಾಕಿದವರು ಯಾರು?ಹೇಗೆ ಮಾಡಿದ್ರು, ಯಾವಾಗ, ಎಲ್ಲಿ, ನಿಜವೇ ? ದೇವರನ್ನು ಅರೆಸ್ಟ್ ಮಾಡುವುದನ್ನು ನಂಬಲು ಸಾಧ್ಯವಾ? ಎಂಬ ಪ್ರಶ್ನೆಗಳು ನಮ್ಮನ್ನು ಕಾಡುವುದು ಸಹಜ . ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ .
‘ದೇವರು ಅರೆಸ್ಟ್ ಆದ’ ಕತೆಯು ಬರಹಕ್ಕೂ ಬದುಕಿಗೂ ಸಂಬಂಧವಿಲ್ಲದೆ ನಾಡಿಗೆ ಬುದ್ಧಿ ಹೇಳುವ ಆಷಾಡಭೂತಿಗಳ ಬಣ್ಣ ಬಯಲು ಮಾಡುತ್ತದೆ. ಮೇಲ್ನೋಟಕ್ಕೆ ಸರಳವಾದ ಕತೆ ಎನಿಸಿಕೊಂಡರೂ ಆಳದಲ್ಲಿ ವಿಶೇಷ ಅನುಭವಗಳನ್ನು ಕಟ್ಟಿಕೊಡುತ್ತದೆ. ದೇವರ ಇರುವಿಕೆಯ ಚರ್ಚೆ ಮಾಡುವ ಸಂದರ್ಭದಲ್ಲಿ ನಾಸ್ತಿಕನೊಬ್ಬ ವಾದ ಮಾಡಿದರೆ ಹೇಗಿರಬಹುದು ಎಂಬುದನ್ನು ಕತೆ ಪ್ರತ್ಯಕ್ಷಗೊಳಿಸುತ್ತದೆ. ಶಿವಕುಮಾರ ಮೂಲತಃ ರಂಗಭೂಮಿಯವರಾದ್ದರಿಂದ ಅವರು ಬಳಸಿರುವ ವ್ಯಂಗ್ಯ ಮಿಶ್ರಿತ ಮಾತುಗಳು, ಕೊಟ್ಟು ತೆಗೆದುಕೊಳ್ಳುವ ಸಂಭಾಷಣೆಯ ಮಾದರಿ ಕತೆಗೆ ಮತ್ತಷ್ಟು ಗಟ್ಟಿತನ ತಂದುಕೊಟ್ಟಿದೆ.
ಕತೆಯ ಆರಂಭವೇ ಕುತೂಹಲ ಹುಟ್ಟಿಸುವುದಲ್ಲದೇ ಕೊನೆಯ ಪದದವರೆಗೆ ಓದಲು ಪ್ರೇರೇಪಿಸುತ್ತದೆ. ಕತೆಗಾರ ಶಿವಕುಮಾರ್ ಗೆದ್ದಿರುವುದೇ ಇಲ್ಲಿ. ಕತೆಯೊಂದು ಕೊನೆಯವರೆಗೂ ಸುಮ್ಮನೆ ಓದಿಸಿಕೊಂಡು ಹೋದಾಗಲೇ ಯಶಸ್ವಿ ಕತೆ ಎನಿಸುವುದು. ಈ ಓದಿಸಿಕೊಳ್ಳುವ ಗುಣದ ಹಿಂದೆ ಕತೆಗಾರನ ಕತೆ ಕಟ್ಟುವ ತಂತ್ರ ಕೆಲಸ ಮಾಡಿದೆ. ಪುರಾಣದ ಕಾಲದಿಂದ ಈ ಕಾಲದವರೆಗೂ ಕುತೂಹಲ ಹುಟ್ಟಿಸಿಕೊಂಡೇ ಬಂದಿರುವ ಗಂಡು-ಹೆಣ್ಣುಗಳ ಕಾತರ, ಅನಾಯಸವಾಗಿ ದೊರಕಿಬಿಡಬಹುದಾದ ಗಂಡು/ ಹೆಣ್ಣಿನ ಸಾಂಗತ್ಯ, ಕಾಯುವಿಕೆಯಲ್ಲಿನ ವಿರಹ/ ಖುಷಿ ಇತ್ಯಾದಿ ವಿಚಾರಗಳು ದಂಡಿಯಾಗಿ ಕತೆಯಲ್ಲಿವೆ. ಮಧ್ಯಭಾಗದಲ್ಲಿ ಎಲ್ಲೋ ರಾಜಶೇಖರ್ ಎಂತಹ ಅವಕಾಶ ಗಿಟ್ಟಿಸಿಕೊಂಡುಬಿಟ್ಟ ಎಂಬ ಹೊಟ್ಟೆಕಿಚ್ಚು ಓದುಗನದ್ದು. ಆದರೆ ಅದು ಕತೆಯ ಯಶಸ್ಸೇ ಅನ್ನಿಸಿಬಿಡುತ್ತದೆ.
ಪುಟಗಳು: 104
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !