Click here to Download MyLang App

ಸೆಲ್‌ ವೆಲ್,  ವಿ.ಆರ್. ಸತ್ಯನಾರಾಯಣ,    Sell Well,  Satyanarayana V.R,

ಸೆಲ್ ವೆಲ್ - ಯಶಸ್ವಿ ಮಾರಾಟಗಾರರಾಗಿ (ಇಬುಕ್)

e-book

ಪಬ್ಲಿಶರ್
ವಿ.ಆರ್. ಸತ್ಯನಾರಾಯಣ
ಮಾಮೂಲು ಬೆಲೆ
Rs. 120.00
ಸೇಲ್ ಬೆಲೆ
Rs. 120.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಸಾವಣ್ಣ

Publisher: Sawanna


ಸೇಲ್ಸ್‌ ಕ್ಷೇತ್ರದ ಪ್ರವೇಶ ಎಂದರೆ ಎಲ್ಲೂ ಸಲ್ಲದವನು ಇಲ್ಲಿ ಸಲ್ಲುತ್ತಾನೆ ಎಂಬ ಭಾವನೆ ಸಾಮಾನ್ಯವಾಗಿದೆ. ಆದರೆ ಸೇಲ್ಸ್‌ ಜಗತ್ತಿನಲ್ಲಿ ಸಕಾರಾತ್ಮಕವಾಗಿ ಯೋಚನೆ ಮಾಡುವವರು, ಸೇಲ್ಸ್‌ ಪ್ರಮಾಣ ಹೆಚ್ಚಿಸುವಲ್ಲಿ ಆಕ್ರಮಣಕಾರಿ ಮನೋಭಾವದವರು ಮತ್ತು ಸೇಲ್ಸ್‌ ಬಗ್ಗೆ ಎಲ್ಲ ವಿಷಯಗಳನ್ನೂ ರಕ್ತಗತ ಮಾಡಿಕೊಳ್ಳುವವರು ಆ ಕ್ಷೇತ್ರದಲ್ಲಿ ಜಯಶೀಲರಾಗುತ್ತಾರೆ. ತಾವು ಮಾಡುವ ಕೆಲಸದಲ್ಲಿ ವಿಶ್ವಾಸ ಇರುವವರು ಮತ್ತು ಸೇಲ್ಸ್‌ ವಿಚಾರದಲ್ಲಿ ಜನರ ನಾಡಿ ತಿಳಿದಿರುವರು ಬಹು ಬೇಗ ಎತ್ತರದ ಸ್ಥಾನ ತಲುಪುತ್ತಾರೆ. ಅಂತಹವರು ಹೆಚ್ಚು ಹಣ ಗಳಿಸುತ್ತಾರೆ. ಕೀರ್ತಿ ಮತ್ತು ಪ್ರತಿಷ್ಠೆಯೂ ಅವರದ್ದಾಗುತ್ತದೆ. ಇಂತಹವರು ಜನ್ಮತಃ ಯಶಸ್ವಿ ಮಾರಾಟಗಾರರಾಗಿದ್ದರೇ? ಖಂಡಿತಾ ಇಲ್ಲ. ಹಾಗಾದರೆ ಅವರಿಗೆ ಸೇಲ್ಸ್‌ ಬಗೆಗಿನ ಕೌಶಲ್ಯ ಒದಗಿಬಂದಿದ್ದಾದರೂ ಹೇಗೆ?

ಸೇಲ್ಸ್‌ಗೆ ಸಂಬಂಧಿಸಿದ ‘ಬೇಕಾಗಿದ್ದಾರೆ’ ಜಾಹಿರಾತುಗಳೇ ಮೀಡಿಯಾದಲ್ಲಿ ಹೆಚ್ಚಿರುವುದು ನೀವು ಗಮನಿಸಿರುತ್ತೀರಿ. ನಿರುದ್ಯೋಗಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತದಲ್ಲಿ ಆದಾಯ ಹೆಚ್ಚು ತಂದುಕೊಡುವ ಸೇಲ್ಸ್‌ ಕ್ಷೇತ್ರಕ್ಕೆ ಪ್ರವೇಶ ಪಡೆದಲ್ಲಿ ಅವರ ಜೀವನ ಸುಧಾರಿಸುತ್ತದೆ. ಆದರೆ ಸೇಲ್ಸ್‌ ಎಂದರೆ ಏನೋ ಅಳುಕು, ಅನಿವಾರ್ಯವಾಗಿ ಸೇಲ್ಸ್‌ ಕ್ಷೇತ್ರಕ್ಕೆ ಕಾಲಿಟ್ಟವರು, ಆ ಕ್ಷೇತ್ರದಲ್ಲಿ ಜಯಶಾಲಿಗಳಾಗಲು ಅಗತ್ಯವಿರುವ ಉಪಾಯಗಳನ್ನು ತಿಳಿದುಕೊಳ್ಳಲು ಹವಣಿಸುತ್ತಾರೆ. ಆದರೆ ಅವು ದೊರೆಯುವುದು ಅಷ್ಟು ಸುಲಭವಲ್ಲ. ಸೇಲ್ಸ್‌ ಕೌಶಲ್ಯ ಹೆಚ್ಚಿಸಿಕೊಳ್ಳಲು ನೆರವಾಗುವ ಮತ್ತು ಪ್ರೇರಣೆ ನೀಡುವ ಹಲವಾರು ಪುಸ್ತಕಗಳು ಆಂಗ್ಲಭಾಷೆಯಲ್ಲಿವೆ. ಕನ್ನಡದಲ್ಲಿ ಅಂತಹ ಪುಸ್ತಕಗಳು ನನ್ನ ಕಣ್ಣಿಗೆ ಬಿದ್ದಿಲ್ಲ.

ಸೇಲ್ಸ್‌ ಕ್ಷೇತ್ರಕ್ಕೆ ಪ್ರವೇಶಿಸಿ ತಮ್ಮ ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳಲು ಬಯಸುವವರಿಗಾಗಿ ಕಳೆದ 18 ವರ್ಷದ Consumer World Group Direct Sales ಅನುಭವ ಮತ್ತು Consumax Life Empowering Company Pvt. Ltd ನಡೆಸುವ ವರ್ಕ್‌ಷಾಪ್‌ಗಳಲ್ಲಿ ಸಾವಿರಾರು ಜನರಿಗೆ ಸೇಲ್ಸ್‌ ಬಗ್ಗೆ ತರಬೇತಿ ನೀಡಿದ ಅನುಭವದ ಹಿನ್ನೆಲೆಯಲ್ಲಿ ಸೇಲ್ಸ್‌ನ ಕುರಿತಾದ ಎಲ್ಲಾ ಮಾಹಿತಿಯನ್ನು ಒಳಗೊಂಡ ಕೃತಿಯೊಂದನ್ನು ರಚಿಸಲು ಮುಂದಾದೆ. ಆ ಕೃತಿಯೇ SELL WELL. ಈ ಕೃತಿ ರೂಪುಗೊಳ್ಳಲು ಪ್ರೇರಣೆ ನೀಡಿದವರು ಪ್ರಕಾಶಕರಾದ ಎಸ್‌.ಹೆಚ್‌.ಜಮೀಲ್‌ ಅವರು. ಈ ಕೆಲಸದಲ್ಲಿ ಸಹಕರಿಸಿದ ನನ್ನ ಪತ್ನಿ ಅನುರಾಧ ಮತ್ತು ಸಹೋದರ ಗೋಪಿಕೃಷ್ಣ ಅವರಿಗೆ ನಾನು ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

ಉತ್ಪನ್ನಗಳು ಮತ್ತು ಸೇವೆಗಳನ್ನು ಮಾರಾಟ ಮಾಡುವ ಸೇಲ್ಸ್‌ ಮೆನ್‌ ಅಥವಾ ಸೇಲ್ಸ್‌ ವುಮೆನ್‌ಗಾಗಿ ಈ ಕೃತಿ ರೂಪುಗೊಂಡಿದ್ದರೂ ಯಾವುದೇ ರೀತಿಯಲ್ಲಿ ಸೇಲ್ಸ್‌ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಎಲ್ಲರಿಗೂ ಈ ಪುಸ್ತಕ ಪ್ರಯೋಜನಕಾರಿ ಎಂದು ನಾನು ಭಾವಿಸುತ್ತೇನೆ. ನೀವು ಸೇಲ್ಸ್‌ ವಿಷಯದಲ್ಲಿ ಎಂಬಿಎ ಮಾಡಿದವರಾಗಲಿ, ಯಾವುದೇ ವಿಷಯದಲ್ಲಿ ಕೇವಲ ಪದವೀಧರರಾಗಲಿ ನಿಮ್ಮ ಮೇಲಿನ ಅಧಿಕಾರಿಗಳು ಸೇಲ್ಸ್‌ನಲ್ಲಿ ನೀವು ಎಷ್ಟರ ಮಟ್ಟಿಗೆ ಸಾಧನೆ ಮಾಡಿದ್ದೀರಿ ಎನ್ನುವುದನ್ನು ಮಾತ್ರ ಪರಿಗಣಿಸುತ್ತಾರೆ. ಸೇಲ್ಸ್‌ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆಯಲು ಮತ್ತು ಸೇಲ್ಸ್‌ನ ಎಲ್ಲಾ ಕೌಶಲ್ಯಗಳನ್ನು ಕಲಿಯಲು ನೆರವಾಗುವ ಶಿಕ್ಷಕನ ಅಥವಾ ತರಬೇತುದಾರನ ರೀತಿ ಈ ಕೃತಿ ಎಲ್ಲರಿಗೂ ಪ್ರಯೋಜನಕಾರಿ ಎಂದು ನನ್ನ ವಿಶ್ವಾಸ.

ಒಂದು ಮಾತು: ಈ ಪುಸ್ತಕದಲ್ಲಿ ಅನೇಕ ಕಡೆ ಪುಲ್ಲಿಂಗದ ಪ್ರಯೋಗವನ್ನು ಬರವಣಿಗೆಯ ಅನುಕೂಲಕ್ಕಾಗಿ ಮಾಡಲಾಗಿದೆ. ಗ್ರಾಹಕ ಎಂದಿರುವ ಕಡೆ ಗ್ರಾಹಕಳು ಎಂದು ಕೂಡಾ ದಯವಿಟ್ಟು ಓದಿಕೊಳ್ಳಬೇಕು. ಹಾಗೆಯೇ ಮಾರಾಟಗಾರ ಎಂದಿದ್ದರೆ ಅಲ್ಲಿ ಮಾರಾಟಗಾರಳು ಎಂದು ಕೂಡಾ ಅರ್ಥೈಸಿಕೊಳ್ಳಬೇಕು.

ಈ ಕೃತಿ ಓದಿ ನಿಮ್ಮ ಅಭಿಪ್ರಾಯಗಳನ್ನು ನನ್ನೊಂದಿಗೆ ಹಂಚಿಕೊಳ್ಳಬೇಕು ಎಂಬುದು ನನ್ನ ಸದಾಶಯ.

 

- ವಿ.ಆರ್. ಸತ್ಯನಾರಾಯಣ

 

 

ಪುಟಗಳು : 160

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)