Click here to Download MyLang App

ಸೆಲೆಕ್ಟ್ ಆಲ್ ಡಿಲೀಟ್ (ಇಬುಕ್)

ಸೆಲೆಕ್ಟ್ ಆಲ್ ಡಿಲೀಟ್ (ಇಬುಕ್)

e-book

ಪಬ್ಲಿಶರ್
ಡಾ. ಅಜಿತ್ ಹರೀಶಿ
ಮಾಮೂಲು ಬೆಲೆ
Rs. 59.00
ಸೇಲ್ ಬೆಲೆ
Rs. 59.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಈ ಕಥಾಸಂಕಲನದಲ್ಲಿ ಡಾ. ಅಜಿತ್ ಹೆಗಡೆ ಹರೀಶಿಯವರು ಬರೆದ 12  ಕತೆಗಳಿವೆ.

ನೂರು ವರ್ಷ ಆಯುಷ್ಯದ ಮನುಷ್ಯ ನಿರಂತರ ಚಲನೆಯಲ್ಲಿ ಮತ್ತು ಬದುಕಿನ ಅರಸುವಿಕೆಯಲ್ಲಿ. ಅದೇ ನೂರು ದಿನದ ಸಹಸ್ರಪದಿ ಇದ್ದಲ್ಲೇ ಬದುಕುತ್ತೆ‌. ಬದುಕನ್ನ ಆಸ್ವಾದಿಸತ್ತೆ. ಇವನದ್ದು ನಿರಂತರ ಸಾವಿನ ಮೆರವಣಿಗೆಯಾದರೆ, ಅದಕ್ಕೆ ಬದುಕಿನ ಸಂಭ್ರಮ. ಇವನಿಗೆ ಎಲ್ಲವೂ ಸಾಧನೆಯೇ. ಕಸ ಮಾಡುವುದರಿಂದ ಶುರುವಾಗಿ, ಬಳಿಯುವವರೆಗೂ. ಅದಕ್ಕೆ ಎಲ್ಲವೂ ಸ್ವಾಭಾವಿಕ. ' ಈ ಪರಿಸರದ ಕತೆಗಳು ' ಸ್ವಾಭಾವಿಕವಾಗಿವೆ.

-ಸೇತುರಾಮ್

 

ಪುಟಗಳು: 100

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

 

'ಸೆಲೆಕ್ಟ್ ಆಲ್ ಡಿಲೀಟ್' ಕಥೆ ;ವಾಚನ- ನಿರೂಪಕಿ:ಅಮೃತಾ ಶೆಟ್ಟಿ .

 

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ಕಾವ್ಯಾ ಹೆಗಡೆ
ವಾಸ್ತವದ ತಳಹದಿಯ ಮೇಲೆ ಉನ್ನತ ಜೀವನಮೌಲ್ಯ ಮತ್ತು ಆಶಯಗಳನ್ನು ಹೊತ್ತ ಕಥೆಗಳು.

*ಸೆಲೆಕ್ಟ್ ಆಲ್, ಸೇವ್*

ಮನುಷ್ಯನ ಹಲವು ಹಂಬಲ - ತಲ್ಲಣಗಳ ನೆರಳಿನಲ್ಲಿ ಒಡಮೂಡಿದ ಈ ಕಥೆಗಳನ್ನು ಸೆಲೆಕ್ಟ್ ಮಾಡಬಹುದು, ಸೇವ್ ಮಾಡಬಹುದು, ಆದರೆ ಮನಸ್ಸಿನಿಂದ ಡಿಲೀಟ್ ಮಾಡಲಾಗದು. ಇಲ್ಲಿ ಮುಖ್ಯವಾಗಿ ಆಕರ್ಷಿಸುವ ಅಂಶಗಳೆಂದರೆ, ಲೇಖಕರು ಬರಹ ಮತ್ತು ಶೈಲಿಯ ಮೇಲೆ ಸಾಧಿಸಿರುವ ಹಿಡಿತ ಮತ್ತು ಕಥೆಗಳ ವಸ್ತು. ಶೀರ್ಷಿಕೆ ಕಥೆ 'ಸೆಲೆಕ್ಟ್ ಆಲ್ ಡಿಲೀಟ್' ವಿಶಿಷ್ಟವಾದ, ನಗ್ನವೂ ಅಲ್ಲದ, ಭಗ್ನವೂ ಅಲ್ಲದ ಪ್ರೇಮಕಥೆ. ಸುಪ್ತವಾಗಿ ಪರಸ್ಪರ ತುಡಿಯುವ ಮನಸ್ಸುಗಳ ಅವ್ಯಕ್ತ ವ್ಯಥೆ. ಈ ಕಥೆ ಬಹಳ ಹೊತ್ತು ನಮ್ಮೊಳಗೆ ಅದರ ಘಮವನ್ನು ಉಳಿಸುತ್ತದೆ. 'ಸ್ಟಿಲ್' ಕಥೆಯ ಸ್ಟೆಫಿ ಪಾತ್ರ ನಿಜಕ್ಕೂ ಸ್ತಬ್ಧಚಿತ್ರದಂತೆ ಮನಸ್ಸಿನಲ್ಲಿ ನಿಲ್ಲಬಲ್ಲುದು. ಮನೋವಿಜ್ಞಾನದ ಹಿನ್ನೆಲೆಯ 'ಆತ್ಮರತಿ', ಓದುಗರನ್ನು ಭಾವುಕವಾಗಿಸುವ 'ಅಬ್ಬೆ', ನಡುವೆ ಮುಖದಲ್ಲಿ ನಗು ಮೂಡಿಸಿ ನಮ್ಮನ್ನು ರಿಲ್ಯಾಕ್ಸ್ ಮಾಡುವ, ಹಾಸ್ಯವನ್ನೊಳಗೊಂಡ 'ಕಕ್ಷೆ' ಕಥೆ ಹೀಗೇ ಒಂದೊಂದು ಕಥೆಯೂ ಅದರದೇ ಆದ ರೀತಿಯಲ್ಲಿ ಓದುಗರನ್ನು ಕಟ್ಟಿಹಾಕುತ್ತವೆ. 'ಕೆಟ್ಟದ್ದನ್ನು ಕೂಡ ಅರಿಯಬೇಕು, ಅವುಗಳನ್ನು ಮಾಡದಿರಲು...' (ವ್ಯವಚ್ಚೇದ ಕಥೆ) ಇಂಥ ಕೆಲವು ಸಾಲುಗಳು ಓದುಗ ಅರಿವಿಲ್ಲದೇ ತಲೆದೂಗುವಂತೆ ಮಾಡುತ್ತವೆ. ವಾಸ್ತವದ ತಳಹದಿಯ ಮೇಲೆ, ಉನ್ನತ ಜೀವನ ಮೌಲ್ಯ ಮತ್ತು ಆಶಯಗಳನ್ನು ಹೊತ್ತು ಹುಟ್ಟಿದ ಈ ಕಥೆಗಳು ಹೊಸತೊಂದು ಓದಿನ ಖುಷಿಯನ್ನು ಖಂಡಿತ ಕೊಡಬಲ್ಲವು.