ಲೇಖಕರು:
ಸಂಪಾದಕ: ಡಾ।। ನಾ. ಸೋಮೇಶ್ವರ
ಲೇಖಕಿ: ಡಾ|| ಗೀತಾ ಶಣೈ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಸಾವಿತ್ರಿಬಾಯಿ ಫುಲೆ, ಬ್ರಿಟಿಷ್ ಭಾರತದಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ ಪ್ರಥಮ ಮಹಿಳೆ. ದಲಿತ ಹೆಣ್ಣುಮಕ್ಕಳಿಗೆ ಶಾಲೆಯನ್ನು ತೆರೆಯುತ್ತಾರೆ. ಮೊದಲ ಅಧ್ಯಾಪಕಿಯಾಗುತ್ತಾರೆ. ಅವಮಾನ ಹಾಗೂ ಹಲ್ಲೆಗಳು ಅವರನ್ನು ಧೃತಿಗೆಡಿಸವು. ಬಾಲವಿಧವೆಯರಿಗೆ ಇದ್ದದ್ದೇ ಎರಡು ಮಾರ್ಗ. ಸತಿಯಾಗಬೇಕು ಇಲ್ಲವೇ ತಲೆ ಬೋಳಿಸಿಕೊಳ್ಳಬೇಕು. ಇಂತಹ ಹೆಣ್ಣುಮಕ್ಕಳ ದೌರ್ಜನ್ಯಕ್ಕೆ ತುತ್ತಾಗಿ ಗರ್ಭವತಿಯರಾದ ಬಾಲಕಿಯರಿಗೆ ಅಂದು ಆತ್ಮಹತ್ಯೆಯೊಂದೇ ದಾರಿ! ಅಂತಹ ಮಕ್ಕಳನ್ನು ಗುರುತಿಸಿ ಸುಸೂತ್ರ ಹೆರಿಗೆ ಮಾಡಿಸಿ ಆಶ್ರಯ ನೀಡುತ್ತಾರೆ. ರೋಗಿಗಳಿಗಾಗಿ ಆಸ್ಪತ್ರೆಯನ್ನು ಕಟ್ಟಿ, ಅವರ ಸೋಂಕನ್ನು ಗುಣಪಡಿಸುವಾಗ ತಾನೇ ಸೋಂಕಿಗೆ ತುತ್ತಾಗಿ ಮರಣವನ್ನಪ್ಪುತ್ತಾರೆ! ಭಾರತೀಯ ಇತಿಹಾಸ ಕಂಡ ಅಸದೃಶ ಮಹಿಳೆ ಸಾವಿತ್ರಿ ಬಾಯಿ ಫುಲೆ.
ಪುಟಗಳು: 48
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !