Click here to Download MyLang App

ಸಾಧಕರ 8 ವಿಶೇಷ ಗುಣಗಳು (ಇಬುಕ್)

ಸಾಧಕರ 8 ವಿಶೇಷ ಗುಣಗಳು (ಇಬುಕ್)

e-book

ವಿಚಾರ / various subjects / non-fiction

ಪಬ್ಲಿಶರ್
ಸುಂದರ್ ಬಾಬು
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

GET FREE SAMPLE

ಪ್ರಕಾಶಕರು: ಸಾವಣ್ಣ

Publisher: Sawanna


ಒಲವು * ಕಾರ್ಯ ನಿಷ್ಠೆ * ಏಕಾಗ್ರತೆ * ಪ್ರೇರಣೆ * ಕಲ್ಪನೆಗಳು

ಸುಧಾರಣೆ * ಮೌಲ್ಯಯುತ ಸೇವೆ * ಪಟ್ಟು ಹಿಡಿದು ಮುನ್ನಡೆ

ಎಲ್ಲಾ ಕ್ಷೇತ್ರಗಳ ಸಾಧಕರಲ್ಲಿ ಸಾಮಾನ್ಯವಾಗಿ ಕಂಡು ಬರುವ ವಿಶೇಷ ಗುಣಗಳು ಇವು. ಆದರೆ ಈ ವಿಶೇಷ ಗುಣಗಳ ಜೊತೆಗೆ ಇನ್ನೂ ಬೇಕಾದಷ್ಟು ಗುಣಗಳು ಗೆಲುವಿಗೆ ದಾರಿ ಮಾಡಿಕೊಡುತ್ತವೆ. ಧನಾತ್ಮಕ ಧೋರಣೆ, ಗುರಿ ನಿರ್ಧಾರ, ಆಪ್ತ ಸಲಹೆಗಾರರ ಒಡನಾಟ, ಅಪಾಯಗಳನ್ನು ಎದುರಿಸುವ ಉಪಾಯ ಮುಂತಾದ ಗುಣಗಳು ಸಹಾ ಯಶಸ್ಸಿಗೆ ದಾರಿ ಎಂಬುದನ್ನು ಮರೆಯುವಂತಿಲ್ಲ. ಮೊದಲು ಹೇಳಿದ ವಿಶೇಷ ಗುಣಗಳ ಜೊತೆಗೆ ಈ ಗುಣಗಳಿಂದ ಸಹಾ ಅಪಾರ ಸಂಖ್ಯೆಯಲ್ಲಿ ಸಾಧಕರು ಹೊರಹೊಮ್ಮಿದ್ದಾರೆ.

ಇದರ ಜೊತೆಗೆ ವೃತ್ತಿಪರ ಕೌಶಲ್ಯ, ತಾಂತ್ರಿಕ ಕೌಶಲ್ಯ, ಜನರೊಂದಿಗೆ ಬೆರೆಯುವ ಕೌಶಲ್ಯ, ಸಂವಹನದ ಕೌಶಲ್ಯ, ನಾಯಕತ್ವದ ಕೌಶಲ್ಯ ಮುಂತಾದವು ವಿವಿಧ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಅಗತ್ಯವಾದ ಪ್ರಮುಖ ಗುಣಗಳು. ಈ ಗುಣಗಳು ಹೊಂದಿಲ್ಲದೇ ಇದ್ದರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರೂ ಇದ್ದಾರೆ. ಯಾವ ಕ್ಷೇತ್ರದಲ್ಲಾದರೂ ಮೇಲೆ ಹೇಳಲಾದ 8 ವಿಶೇಷ ಗುಣಗಳು ಯಶಸ್ಸು ಸಾಧಿಸಲು ಬುನಾದಿ ಎಂಬುದನ್ನು ಪರಿಗಣಿಸಬೇಕು.

ಹಲವಾರು ಕ್ಷೇತ್ರಗಳಲ್ಲಿ ಉನ್ನತ ಶಿಖರಗಳನ್ನು ಏರಿದ ಮಹನೀಯರು ಸಾಗಿಬಂದ ಹಾದಿಯನ್ನು ಪರಿಶೀಲಿಸಿ ಅವರು ಅಳವಡಿಸಿಕೊಂಡ ವಿಧಾನಗಳನ್ನು ನಾವು ಆರಿಸಿಕೊಂಡ ಕೆಲಸ ಅಥವಾ ಕ್ಷೇತ್ರದಲ್ಲಿ ಮೆಟ್ಟಿಲೇರಲು ಬಳಸಿಕೊಳ್ಳಬೇಕು.

ಸಾಮಾನ್ಯವಾಗಿ ಸಾಧಕರು ಹೊಂದಿರುವ ಮೇಲೆ ಹೇಳಲಾದ 8 ವಿಶೇಷ ಗುಣಗಳು ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ. ಆದರೆ ಅವರು ಆರಿಸಿಕೊಂಡ 8 ವಿಶೇಷ ಗುಣಗಳು ಅವರಿಗೆ ವಂಶ ಪಾರಂಪರಿಕವಾಗಿ ಸಂದಾಯವಾದವುಗಳೇನಲ್ಲ. ಹುಟ್ಟಿನಿಂದ ಬಂದ ಗುಣಗಳ ಜೊತೆಗೆ ಈ ಎಂಟು ಗುಣಗಳನ್ನು ವೃದ್ಧಿಸಿಕೊಂಡು ಗೆಲುವಿನ ಸೋಪಾನಗಳನ್ನು ಏರಿ ಉನ್ನತ ಸ್ಥಾನಕ್ಕೆ ತಲುಪಿದ್ದಾರೆ. 


- ಸುಂದರ್‌ ಬಾಬು

 

ಪುಟಗಳು : 144

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)