ಬರಹಗಾರರು: ಎಸ್ ದಿವಾಕರ್
ಕತೆಗಾರ ಹಾಗೂ ವಿಮರ್ಶಕ ಎಸ್.ದಿವಾಕರ್ ಅವರ ಇನ್ನೊಂದು ಪ್ರಬಂಧ ಸಂಕಲನ ಈ ಪುಸ್ತಕ. ಇಲ್ಲಿ ಅರೇಬಿಯನ್ ನೈಟ್ ಕತೆಗಳ ಪ್ರಾರಂಭ ಮತ್ತು ಹಿನ್ನೆಲೆ ಕುರಿತ ಮಾಹಿತಿಯಿದೆ, ಅತಿ ಸಣ್ಣ ಕತೆಗಳ ಕುರಿತು ಲೇಖನವಿದೆ, ರಿಯಾಲಿಟಿ ಶೋಗಳು, ಅವುಗಳಲ್ಲಿನ ಹುಸಿತನ, ಗಾಂಧೀಜಿಯವರಿಗಿದ್ದ ಅಗಾಧ ಬರವಣಿಗೆಯ ಶಕ್ತಿ, ಗೋಪಾಲಕೃಷ್ಣ ಅಡಿಗರಿಂದ ಮಾರ್ಕೆಸ್ ವರೆಗೆ ವಿಷಯ ವ್ಯಾಪ್ತಿಯಿದೆ.
ದಿವಾಕರ್ ಅವರ ಅಗಾಧ ಓದು ಮತ್ತು ಸಾಹಿತ್ಯ ಲೋಕದೊಂದಿಗಿನ ಒಡನಾಟ ಇಲ್ಲಿನ ಬರಹಗಳಿಗೆ ತನ್ನದೇ ಆದ ಓದಿಸಿಕೊಂಡು ಹೋಗುವ ಹಾಗೂ ಚಿಂತನೆಗೆ ಹಚ್ಚುವ ಶಕ್ತಿಯನ್ನು ಕೊಡುತ್ತದೆ.