ಲೇಖಕರು:
ಕಾರ್ಲ್ ಮಾರ್ಕ್ಸ್
ಕನ್ನಡಕ್ಕೆ: ಸಿ. ಆರ್. ಶಾನಭಾಗ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಪ್ರಸ್ತುತ ‘‘ರಾಜಕೀಯ ಅರ್ಥಶಾಸ್ತ್ರದ ವಿಮರ್ಶೆಗೊಂದು ಕೊಡುಗೆ’’ ಗ್ರಂಥವು ಉತ್ಪಾದನೆ, ವಿತರಣೆ, ವಿನಿಮಯ ಹಾಗೂ ಬಳಕೆ ಇವುಗಳನ್ನು ಅಧ್ಯಯನ ಮಾಡುವುದಾಗಿದೆ. ಇವುಗಳಿಗೆ ಮೂಲ ಬುನಾದಿಯಾಗಿರುವ ಸರಕನ್ನು ಕುರಿತು ಅಧ್ಯಯನ ಮಾಡಿರುವುದಾಗಿದೆ. ಬಂಡವಾಳಶಾಹಿ ವ್ಯವಸ್ಥೆಯಿಂದ, ಸಾಮ್ರಾಜ್ಯಶಾಹಿ, ಅನಂತರದ ಕಾರ್ಪೊರೇಟ್ ಯುಗದವರೆಗೆ ಸರಕಿನ ಸ್ವರೂಪ ನಮ್ಮ ಊಹೆಯನ್ನೂ ಮೀರಿ ಬೆಳೆಯುತ್ತಾ, ಬದಲಾಗುತ್ತಾ ಬಂದಿದೆ. ಆಕಾಶದ ತರಂಗಗಳನ್ನು ಸಂಪರ್ಕ ಸಾಧನಗಳು ಬಳಸಿಕೊಂಡಿವೆ. ಸೂರ್ಯನ ಶಾಖವನ್ನು ವಿದ್ಯುತ್ ಉತ್ಪಾದನೆಗೆ ಬಳಸಿಕೊಂಡಿವೆ. ಆಧುನಿಕ ಸೈಬರ್ ಲೋಕವಂತೂ ಆಕಾಶದ ತರಂಗಗಳನ್ನೇ ಅವಲಂಬಿಸಿದ್ದು, ಅವನ್ನು ಸರಕನ್ನಾಗಿಸಿದೆ. ಮಾರ್ಕ್ಸ್ ಅವರು ಸರಕಿನ ಸ್ವರೂಪವನ್ನು ಕುರಿತು ಅಧ್ಯಯನ ಮಾಡಿ ಇಂದಿಗೆ ೧೬೦ ವರುಷಗಳು ಗತಿಸಿ ಹೋಗಿವೆ. ಆದರೆ ಸರಕನ್ನು ಕುರಿತ ಅಧ್ಯಯನಕ್ಕೆ ಅವರು ರೂಪಿಸಿದ ನಿಯಮಗಳು ಬದಲಾಗಿಲ್ಲ. ಅವು ೨೧ನೇ ಶತಮಾನದಲ್ಲಿ, ಕಾರ್ಪೊರೇಟ್ ಯುಗದಲ್ಲಿ ಸರಕನ್ನು ಕುರಿತು ಹೊಸದಾಗಿ ಅಧ್ಯಯನ ಮಾಡುವಂತೆ ನಮ್ಮನ್ನು ಪ್ರೇರೇಪಿಸುತ್ತಿವೆ. ೧೬೦ ವರುಷಗಳ ಹಿಂದೆ ರಚಿಸಿದ್ದ ಮಹಾನ್ ಗ್ರಂಥವೊಂದು, ಇವತ್ತಿಗೂ ಕೂಡ ಪ್ರಸ್ತುತವಾಗಿದೆ ಎಂಬುದೇ ‘‘ರಾಜಕೀಯ ಅರ್ಥಶಾಸ್ತ್ರದ ವಿಮರ್ಶೆಗೊಂದು ಕೊಡುಗೆ’’ ಗ್ರಂಥವು, ಜಾಗತಿಕ ಮಟ್ಟದಲ್ಲಿ, ರಾಜಕೀಯ ಅರ್ಥಶಾಸ್ತ್ರದ ವಲಯದಲ್ಲಿ ಅತ್ಯಂತ ಮೇರು ಕೃತಿ ಎಂಬುದಕ್ಕೆ ಸಾಕ್ಷಿ.
ಈ ಮಹಾನ್ ಗ್ರಂಥವನ್ನು ಸಿ. ಆರ್. ಶಾನಭಾಗ ಅವರು ತುಂಬ ಸೊಗಸಾಗಿ ಅನುವಾದಿಸಿದ್ದಾರೆ.
- ಡಾ|| ಬಿ.ಎಂ. ಪುಟ್ಟಯ್ಯ
ಪುಟಗಳು: 256
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !