
Cave Expedition ಮಾಡುವ ಸಾಹಸಿ ಫೆನ್ನರ್, ಚಿತ್ರದುರ್ಗ ಬಳಿಯ ಗುಹೆಯ ರಹಸ್ಯವನ್ನು ಅನಾವರಣ ಮಾಡಲು ಹೋಗಿ ನೆಲದಾಳದ ಒಂದು ಹೊಸದಾದ ಪ್ರಪಂಚವನ್ನೇ ಕಂಡುಹಿಡಿದ ಕಥೆ ಅಗರ್ತ.
ಅಗರ್ತ (Agarta, Shambala, Shangrila) ಇದು ಭೂಮಿಯಾಳದಲ್ಲಿ ಇದೆಯೆನ್ನಲಾಗುವ ಶ್ವೇತ ಲೋಕ. ಈ ರೀತಿಯ ಜಾಗವೊಂದಿದೆ ಎನ್ನುವುದನ್ನು ಪುಷ್ಟೀಕರಿಸಲು ಬಹಳ ಜನರ ಅನುಭವ ಕಥನಗಳು
ಲಭ್ಯವಿದೆ. ಸೂಪರ್ ಸ್ಟಾರ್ ರಜನೀಕಾಂತ್, ಬೌದ್ಧ ಗುರು ದಲೈಲಾಮಾ ತಮ್ಮ ಯೋಗವಿದ್ಯೆಯಿಂದ ಈ ಜಾಗವನ್ನು ನೋಡಿದ್ದಾರೆ.