ಪ್ರಕಾಶಕರು: ಸಾವಣ್ಣ
Publisher: Sawanna
ಹುಬ್ಬಳ್ಳಿಯ ಜವಾರಿ ಭಾಷೆ, ಪಕ್ಕಾ ಲೋಕಲ್ ಎನಿಸುವ ಪದಲಾಲಿತ್ಯ, ಕಚಗುಳಿ ಇಡುವ ಸಾಲುಗಳು, ಪ್ರತಿದಿನದ ಬದುಕಿಗೆ ಸಂಬಂಧಿಸಿದ ವಿಷಯವಸ್ತು, ಇದು ನಮ್ಮಮನೆಯಲ್ಲೇ ನಡೆದದ್ದೇನೋ ಎನಿಸುವ ಆಪ್ತತೆ, ಅನಿರೀಕ್ಷಿತವಾಗಿ ಆಗಮಿಸಿ ಅಚ್ಚರಿ ಹುಟ್ಟಿಸುವ ಟ್ವಿಸ್ಟ್ಗಳು… ಇವು ಪ್ರಶಾಂತ ಆಡೂರರ ಪ್ರಬಂಧ ಅರ್ಥಾತ್ ಪ್ರಹಸನಗಳ ಪ್ಲಸ್ ಪಾಯಿಂಟ್ಗಳು.
ಮುಖಪುಟದಲ್ಲಿರುವ ಮುಗ್ಧ ಮಗುವಿನ ಮುಖಭಾವದಿಂದಲೇ ಸೆಳೆದುಬಿಡುತ್ತದೆ 'ಅಳ್ಳಿಟ್ಟು'. ಈ ಮಗು ಆಡುತ್ತಿದೆಯೋ, ಅಣಕಿಸುತ್ತಿದೆಯೋ ಅಥವಾ 'ಅವ್ಕ್' ಅನ್ನುತ್ತ ಅವಸರದ ಜಗತ್ತನ್ನು ಎಚ್ಚರಗೊಳಿಸುತ್ತಿದೆಯೋ ಗೊತ್ತೇ ಆಗುವುದಿಲ್ಲ. ಈ ಅಳ್ಳಿಟ್ಟು 'ತಿಂದು ಮುಗಿಸಿದ' ನಂತರ ಓದುಗರಿಗೂ ಆಗುವುದು ಇದೇ ಅನುಭೂತಿ.
- ಪ್ರಭುದೇವ ಶಾಸ್ತ್ರಿಮಠ
ಪುಟಗಳು: 156
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !