ಬರಹಗಾರ: ಪೂರ್ಣಚಂದ್ರ ತೇಜಸ್ವಿ
ಹೊಸ ಮಿಲೇನಿಯಮ್‍ನ ಆರಂಭದಲ್ಲಿ ತೇಜಸ್ವಿಯವರು ೨೦ನೇ ಶತಮಾನದಲ್ಲ್ಲಿ ಜಗತ್ತಿನಲ್ಲಿ ಮೂಡಿಬಂದ ಅತ್ಯುತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಬೃಹತ್ ಯೋಜನೆಯನ್ನು ಹಮ್ಮಿಕೊಂಡರು. ಇದರ ಫಲವೇ ಮಿಲೆನಿಯಂ ಕೃತಿ ಶ್ರೇಣಿ. ಮಿಲೆನಿಯಂ ಸರಣಿಯ ಇವರ ಅನುವಾದಿತ ಕೃತಿಗಳೂ ಕನ್ನಡದ ನೆಲೆಯಲ್ಲಿ ಪರಿಸರ ಜ್ಞಾನದ ಎಲ್ಲೆಯನ್ನು ವಿಸ್ತರಿಸಿಕೊಳ್ಳಲು ಕಾರಣವಾಗಿವೆ.
ಸರಣಿಯ ಮೂರನೆಯ ಪುಸ್ತಕ ’ಪೆಸಿಫಿಕ್ ದ್ವೀಪಗಳು’. ಕಣ್ಣು ಹಾಯಸಿದಷ್ಟೂ ಕಾಣುವ - ಸಹಸ್ರಾರು ಮೈಲಿಗಳ ಪೆಸಿಫಿಕ್ ಮಹಸಾಗರದಿಂದ ಸುತ್ತುವರಿಯಲ್ಪಟ್ಟಿರುವ,
ಸುಂದರ ಪೆಸಿಫಿಕ್ ದ್ವೀಪಗಳ ಬಗ್ಗೆ ಮಾಹಿತಿ ಈ ಪುಸ್ತಕದಲ್ಲಿ ಲಭ್ಯವಿದೆ.
ಈ ದ್ವೀಪಗಳು ರೂಪುಗೊಂಡು, ಬೆಳೆದು, ನಶಿಸಿದ ಬಗ್ಗೆ, ಅಲ್ಲಿನ ಮೂಲವಾಸಿಗಳು, ಅವರ ಆಚಾರ ವಿಚಾರಗಳ ಬಗ್ಗೆ, ಅಲ್ಲಿನ ಜೀವ ಸಂಕುಲದ ಬಗ್ಗೆ ತೇಜಸ್ವಿಯವರು, ತಮ್ಮ ನೆನಪಿನ ಲಹರಿಯ ಅನುಸಾರವಾಗಿ ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ..
-ಕೃಪೆ Goodreads
ಪುಟಗಳು: 100
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !