ಇದು ಡಾ. ನಾ. ಮೊಗಸಾಲೆಯವರ ಪ್ರಸಿದ್ಧ ಕಾದಂಬರಿ . ಇದು ೧೯೭೮ ರಲ್ಲಿ ಪ್ರಕಟವಾಯಿತು.
ಡಾ. ನಾ. ಮೊಗಸಾಲೆಯವರ ಕೃತಿ ‘ಪಲ್ಲಟ’ ಈ ಕಾದಂಬರಿಯಲ್ಲಿನ ಘಟನಾವಳಿಗಳು ಕಾರ್ಕಳ, ಮೂಡಬಿದ್ರೆ ನಡುವಿನ ಒಳಭಾಗದ ಗ್ರಾಮದಲ್ಲಿ ನಡೆಯುತ್ತವೆ. ‘ಪಲ್ಲಟ’ದಲ್ಲಿ ಭೂ ಸುಧಾರಣೆ ಕಾನೂನು ಜಾರಿಯಾಗುವಾಗ ಕುಟುಂಬಗಳ ಒಳಗಿನ ಬಿರುಕಿಗೆ ಹೇಗೆ ಕಾರಣವಾಯಿತೆಂಬುದನ್ನು ಚಿತ್ರಿಸುವುದು ಉದ್ದೇಶ.
‘ಪಲ್ಲಟ’ ಕಾದಂಬರಿಯಲ್ಲಿ ಒಂದು ಕುಟುಂಬದ ಆಗು ಹೋಗುಗಳಲ್ಲಿ ಊರ ಪುಢಾರಿ ಮಾರಪ್ಪ ಶೆಟ್ಟಿ ಮಿಣ್ಣಗೆ ಕೈಹಾಕುವ ರೀತಿ, ಅವನು ಗಾಬ್ರುವಿನಂಥ ಬಡ, ಸಭ್ಯ ವ್ಯಕ್ತಿಗೆ ಹೊಡೆದರೂ ಗಾಬ್ರುವಿನ ಮಕ್ಕಳೇ ಮಾರಪ್ಪ ಶೆಟ್ಟಿಯ ಮಾತಿಗೆ ಮರಳಾಗುವುದು, ಗಾಬ್ರುವಿನ ಮಗಳು ಮೇರಿ ಮಾರಪ್ಪ ಶೆಟ್ಟಿಗೆ ತನ್ನ ಶೀಲವನ್ನೇ ಒಪ್ಪಿಸುವುದು - ಇದೆಲ್ಲ ಥಣ್ಣಗಿರುವಂತೆ ಕಾಣುವ ಗ್ರಾಮ ಜೀವನದೊಳಗಿನ ಕಲ್ಲೋಲಗಳನ್ನು, ಒಳಸುಳಿಗಳನ್ನು ಚಿತ್ರಿಸುತ್ತವೆ.
ಪುಟಗಳು: 185
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !