Click here to Download MyLang App

ನುಡಿಯೊಡಲು: ಭಾಷೆ-ತತ್ತ್ವ-ಕವಿತೆ ಕುರಿತ ಪ್ರಬಂಧಗಳು (ಇಬುಕ್)

ನುಡಿಯೊಡಲು: ಭಾಷೆ-ತತ್ತ್ವ-ಕವಿತೆ ಕುರಿತ ಪ್ರಬಂಧಗಳು (ಇಬುಕ್)

e-book

ವಿಚಾರ / various subjects / non-fiction

ಪಬ್ಲಿಶರ್
ಮಾಧವ ಚಿಪ್ಪಳಿ
ಮಾಮೂಲು ಬೆಲೆ
Rs. 80.00
ಸೇಲ್ ಬೆಲೆ
Rs. 80.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

GET FREE SAMPLE

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

ಕಾವ್ಯ, ಭಾಷಾಜಿಜ್ಞಾಸೆ ಮತ್ತು ತತ್ತ್ವಶಾಸ್ತ್ರ - ಈ ಮೂರೂ ವಲಯಗಳು ಕೂಡುವ ಜಾಗದಲ್ಲಿ ನಿಂತು ಬರೆದ ಬರಹಗಳ ಸಂಕಲನ ಇದು. ಕಾವ್ಯದಿಂದ ತನ್ನ ಓದನ್ನು ಆರಂಭಿಸಿದಾಗಲೂ ಈ ಬರಹಗಳು ಸಾಹಿತ್ಯವಿಮರ್ಶೆಯ ಕಡೆಗೆ ಸಾಗುವುದಿಲ್ಲ; ಭಾಷಾದರ್ಶನ-ಕಾವ್ಯಮೀಮಾಂಸೆಯ ಕಡೆಗೆ ತಿರುಗಿದಾಗಲೂ ಇದು ಶಾಸ್ತ್ರೀಯವಾದ ವಿಶ್ಲೇಷಣೆಗೆ ಕೈಹಾಕುವುದಿಲ್ಲ; ತತ್ತ್ವಜ್ಞಾನದ ಕಡೆಗೆ ಸಾಗಿದಾಗಲೂ ಈ ಬರಹಗಳು ಅದನ್ನು ಮುಟ್ಟಿ ಮುನ್ನಡೆಯುತ್ತವೆಯೇ ಹೊರತು ಅಲ್ಲೇ ನಿಲ್ಲುವುದಿಲ್ಲ. ಹೀಗೆ, ಹಲವು ಮಾರ್ಗಗಳನ್ನು ಒಟ್ಟಿಗೇ ಇಟ್ಟುಕೊಂಡು ಹೊರಟರೂ ಅಂತಿಮವಾಗಿ ಮುಕ್ತವಿಹಾರದ ಮನಸ್ಸಲ್ಲಿ ಚಿಂತನೆಯಿಂದ ಚಿಂತನೆಗೆ ಜಿಗಿಯುತ್ತ ಸಾಗುವ ಈ ಬರಹಗಳು ಓದುಗರಿಗೂ ಅಂಥದೇ ಲಂಘನದ ಸ್ವಾತಂತ್ರ್ಯವನ್ನು ಕೊಡಬಲ್ಲ ಸಾಮರ್ಥ್ಯವನ್ನು ಪಡೆದಿವೆ.

 

ABOUT THE AUTHOR

ಸಾಗರದ ಲಾಲ್ ಬಹಾದೂರ್ ಕಾಲೇಜಿನಲ್ಲಿ ಬಿ.ಎ. ಪದವಿಯನ್ನೂ ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಎಂ.ಎ. ವಿದ್ಯಾಭ್ಯಾಸವನ್ನೂ ಮುಗಿಸಿದ ಮಾಧವ ಚಿಪ್ಪಳಿ ಅವರು ಮಣಿಪಾಲ ವಿಶ್ವವಿದ್ಯಾಲಯದಿಂದ ಭಾಷಾತತ್ತ್ವಶಾಸ್ತ್ರ ಮತ್ತು ಭಾಷಾಂತರ ಅಧ್ಯಯನದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಅವರು ಅನುವಾದಿಸಿರುವ 'ಆರು ಟಾಲ್‍ಸ್ಟಾಯ್ ಕತೆಗಳು' ಮತ್ತು ಜಿಯಾವುದ್ದೀನ್ ಸರ್ದಾರರ 'ಸ್ವರ್ಗ ಸಾಧನೆಯ ಉತ್ಕಟ ಬಯಕೆ: ಸಂದೇಹಿ ಮುಸ್ಲಿಮನ ಯಾತ್ರೆಗಳು' ಈಗಾಗಲೇ ಪ್ರಕಟಗೊಂಡಿವೆ. ಅವರ 'ಆರು ಟಾಲ್‍ಸ್ಟಾಯ್ ಕತೆಗಳು' ಪುಸ್ತಕಕ್ಕೆ ಕುವೆಂಪು ಭಾಷಾಭಾರತಿ ಪ್ರಾಧಿಕಾರದ 2009ನೇ ಸಾಲಿನ ಅನುವಾದ ಪುರಸ್ಕಾರ ಸಿಕ್ಕಿದೆ. ಸದ್ಯ ಸಾಗರದ ಸಮೀಪ ಚಿಪ್ಪಳಿಯಲ್ಲಿ ನೆಲೆಸಿರುವ ಮಾಧವ, ಅಡಿಕೆ ವ್ಯವಸಾಯ ಮತ್ತು ವ್ಯವಹಾರದಲ್ಲಿ ತೊಡಗಿದ್ದಾರೆ.

 

  

ಪುಟಗಳು: 104

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)