ಪ್ರಕಾಶಕರು: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
Publisher: Panchami Media Publications
ಇಲ್ಲಿ ಯಾವ ಸಾಧನೆಗೂ ಇಂತಹುದೇ ಎಂಬ ಸಿದ್ಧಸೂತ್ರಗಳಿಲ್ಲ, ಪ್ರತಿಯೊಬ್ಬರೂ ತಮ್ಮ ವಿಶೇಷತೆಗೆ ತಕ್ಕಂತೆ ತಮ್ಮದೇ ಸೂತ್ರವನ್ನು ದಾರಿಯನ್ನು ಸೃಷ್ಟಿಸಿಕೊಳ್ಳಬೇಕಿದೆ. ನಾವು ನಮ್ಮ ಬದುಕಿನ ಕುರಿತಂತೆ ಎಚ್ಚಿತ್ತುಕೊಂಡ ಕ್ಷಣವೇ ನಮ್ಮ ಬದುಕಿನ ಹಾದಿಯೂ ಹೊಳೆದುಬಿಡುತ್ತದೆ.
ನಾವು ಯಾವಾಗಲೂ ಯಾವುದಕ್ಕಾಗಿ ಓಡುತ್ತಿದ್ದೇವೆಂದು ಯಾವುದಕ್ಕಾಗಿ ಸ್ಫರ್ಧಿಸುತ್ತಿದ್ದೇವೆಂದು, ಇದರಿಂದ ನಮಗೇನು ಲಭಿಸಲಿದೆಯೆಂದು ತಿಳಿದರೆ ನಮ್ಮ ಬದುಕು ಸುಂದರ.
ಅರ್ಹತೆ ಮತ್ತು ಸಾಮರ್ಥ್ಯಗಳನ್ನು ಸಮಾಜವು ಎಲ್ಲಕಾಲದಲ್ಲೂ ಎಲ್ಲಾ ಸಂದರ್ಭಗಳಲ್ಲೂ ಪರಿಗಣಿಸುತ್ತದೆ.ಕೆಲವೊಮ್ಮೆ ನಮಗಿದು ಅರ್ಥವಾಗದಿರಬಹುದು. ಒಂದು ದೀರ್ಘಕಾಲದಲ್ಲಿ ಸಮಾಜವು ಯಾರನ್ನು ಎತ್ತಿ ಹಿಡಿದಿದೆ ಎಂಬುದು ನಮಗೆ ತಿಳಿದಿದೆ. ಕೆಲವೊಮ್ಮೆ ಹುದ್ದೆಯಿಂದ ಶ್ರೀಮಂತಿಕೆಯಿಂದ ಅಧಿಕಾರದಿಂದ ಗುರ್ತಿಸಲ್ಪಟ್ಟರೂ ಅಂತಿಮವಾಗಿ ಆಯಾ ಕಾಲದ ಸಾಮಾಜಿಕ ಸಾಮುದಾಯಿಕ ಪ್ರಜ್ಞೆಯನ್ನು ಹೊಂದಿರುವವರು ಮೌಲ್ಯಗಳ ಚೌಕಟ್ಟಿನಲ್ಲಿದ್ದವರು, ಮೌಲ್ಯಗಳನ್ನು ರೂಪಿಸಿದವರು, ಕ್ರಿಯಾಶೀಲರು, ಸತ್ವಶಾಲಿಗಳು ಮಾತ್ರ ಉಳಿದಿದ್ದಾರೆ.
ಗೆಲ್ಲುತ್ತೇನೆಂದು ಮುಂದಡಿ ಇಟ್ಟವರಿಗಷ್ಟೇ ಈ ಜಗತ್ತು ತನ್ನನ್ನೇ ತಾನು ತೆರೆದುಕೊಳ್ಳುತ್ತದೆ. ತನ್ನ ಅದ್ಭುತ ಶಕ್ತಿಯನ್ನು ಅವರೊಳಗೆ ಹರಿಸುತ್ತದೆ. ಜೀವನವನ್ನು ಜಗತ್ತನ್ನು ಗೆಲ್ಲುವಂತೆ ಮಾಡುತ್ತದೆ. ಇದು ಗೆದ್ದವರಿಗಷ್ಟೇ ಗೊತ್ತು!
ನಾವು ಸಮರ್ಥರಾದರೆ ಅವಕಾಶಗಳು ನಮ್ಮ ಹಿಂದೆ ಬರುತ್ತವೆ. ನಾವು ಏನನ್ನಾದರೂ ಮಾಡಲು ಪ್ರಯತ್ನಿಸಿದರೆ ಹಲವಾರು ದಾರಿಗಳು ಸಮಗೆ ಹೊಳೆಯುತ್ತವೆ. ಆದ್ದರಿಂದ ನಮಗೆ ಅವಕಾಶ ಸಿಗಲಿಲ್ಲ ಎಂಬುದೇ ಸುಳ್ಳು. ನಮ್ಮ ಅವಕಾಶಗಳನ್ನು ನಾವೇ ನಿರಂತರವಾಗಿ ಸೃಷ್ಟಿಸಿ ಕೊಳ್ಳುತ್ತೇವೆ ಎಂಬುದೇ ಸತ್ಯ. ಜಗತ್ತಿನ ಎಲ್ಲ ಸಾಧಕರು ಕ್ರಿಯೇಟರ್ಗಳು ಹೀಗೆಯೇ ಆದವರು. ಕೆಲವೊಮ್ಮೆ ಸಮಗೆ ಇದು ಮೇಲ್ನೋಟಕ್ಕೆ.ಗುರ್ತಿಸಲಾಗದಿದ್ದರೂ, ಯಾರೋ ಒಬ್ಬರಿಗೆ ಯಾರೋ ಅವಕಾಶ ನೀಡಿದ್ದರಿಂದಲೇ ಅವರು ಯಶಸ್ವಿಯಾದರೆಂದು.ನಮಗೆ ಅನ್ನಿಸಿದರೂ ಪರಿಶೀಲಿಸಿ ನೋಡಿದರೆ ಹೀಗಾಗುವಲ್ಲಿ ಅವರ ಶ್ರಮ ಅಪಾರವಾಗಿದೆ.
- ಕೆ. ಶ್ರೀನಿವಾಸ ರೆಡ್ಡಿ
ಪುಟಗಳು: 180
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !