Click here to Download MyLang App

ಬಿ. ಎಸ್. ಮಯೂರ,    ನೆರೆಯ ಬಿಂಬಗಳು,    Nereya Bimbagalu,  B. S. Mayura,

ನೆರೆಯ ಬಿಂಬಗಳು (ಇಬುಕ್)

e-book

ಪಬ್ಲಿಶರ್
ಬಿ. ಎಸ್. ಮಯೂರ
ಮಾಮೂಲು ಬೆಲೆ
Rs. 70.00
ಸೇಲ್ ಬೆಲೆ
Rs. 70.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications


ಭೌತ ವಿಜ್ನಾನದ ನಿವೃತ್ತ ಅಧ್ಯಾಪಕಿಯಾಗಿರುವ ಬಿ. ಎಸ್‌. ಮಯೂರ ಅವರ ‘ನೆರೆಯಬಿ೦ಬಗಳು’ ಕನ್ನಡ ಕಥಾ ಲೋಕದಲ್ಲಿ ಒಂದು ನವೀನ ಪ್ರಯೋಗವಾಗಿದೆ. ಒ೦ದು ರೀತಿಯಲ್ಲಿ ಪ್ರಬಂಧದ ರೀತಿಯ ಕತೆಗಳು ಇವು. ಕ೦ಡದ್ದು. ಅನುಭವಿಸಿದ್ದು. ಕೇಳಿದ್ದು. ಇವೆಲ್ಲವೂ ಒಂದು ಲವಲವಿಕೆಯ ನಿರೂಪಣೆಯ ಮೂಲಕ ಮಯೂರ ಅವರು ಕಟ್ಟಿಕೊಟ್ಟಿದ್ದಾರೆ. ಕೌಟುಂಬಿಕ ಇಲ್ಲಿ ವಿಭಿನ್ನವಾಗಿ ಜೀವತಾಳಿವೆ. ಹಾಗೆ ನೋಡಿದರೆ ಕತೆಯೂ ಸಮೃದ್ಧವಾಗಿಲ್ಲ. ನೇರನೇರವಾಗಿ ಕಥೆಯ ತಿರುಳಿನ ಕಡೆಗೆ ಗಮನ ಇಟ್ಟಿವೆ. ಕೆಲವೇ ಕೆಲವು ಬಾಹ್ಯ ರೇಖೆಗಳಲ್ಲಿ ಪಾತ್ರಗಳನ್ನು, ಘಟನೆಗಳನ್ನು ಪೋಣಿಸಿ ಒ೦ದು ಗಟ್ಟಿಯಾದ ವಿಚಾರ ಪ್ರಧಾನವಾದ ಕಥೆಯನ್ನು ಅವರು ಹೆಣೆಯುತ್ತಾರೆ. ಅವರಿಗೆ ಪಾತ್ರ ಪೋಷಣೆಗಿ೦ತ, ಗುರಿ ಮುಖ್ಯ ಆದುದರಿಂದಲೇ ಇಲ್ಲಿ ಅಲ೦ಕಾರ ರೂಪಗಳು ವಿಶೇಷ ಮಹತ್ವವನ್ನು ಪಡೆದುಕೊಳ್ಳುವುದಿಲ್ಲ. ಮುಗ್ದವಾದ ನಿರೂಪಣೆಯ ಬಗೆಯೊಂದನ್ನು ನಾವು ಪ್ರತಿ ಕತೆಗಳಲ್ಲಿ ಕಾಣುತ್ತೇವೆ. ವೃತ್ತಿಯಲ್ಲಿಯೂ ಪ್ರವೃತ್ತಿಯಲ್ಲಿಯೂ ವಿಜ್ಞಾನವು ಅವರ ಮನಸ್ಸನ್ನು ವ್ಯಾಪಿಸಿದೆ. ಸಮಾಜವನ್ನು ವೈಜ್ಞಾನಿಕ ದೃಷ್ಟಿಯಿ೦ದ ನೋಡುವಂತ ಮಾಡುವ ಕಲವು ಕತೆಗಳೂ ಇಲ್ಲಿವೆ. ಕಥಾವಸ್ತುವಿನಲ್ಲಿ ವಿವಿಧ ಆಸಕ್ತಿ ತೋರುತ್ತದೆ. ಸಮಾಜಶಾಸ್ತ್ರದಿ೦ದ ವಿಜ್ಞಾನದವರೆಗೆ, ಸ್ವದೇಶದಿ೦ದ ಪರದೇಶದ ಜೀವನ ರೀತಿಯವರೆಗೆ, ಸಾ೦ಸಾರಿಕ ಖುಷಿ, ವೇದನೆಗಳು ವೈವಿಧ್ಯಗಳೂಡನೆ ಆಧುನಿಕ ಜೀವನದ ದುರ್ಬಲ ಗಳಿಗೆಗಳು, ಸೂಕ್ಷ್ಮ ಮನಸ್ಸಿನ ನಿರಾಶೆಗಳು ಕಾಣುವವು. ಇಲ್ಲಿ ಒಟ್ಟು 21 ಕತೆಗಳಿವೆ. ವೇ೦ಕಟ ಲಕ್ಷ್ಮಿಯ ಹೋರಾಟದ ಬದುಕನ್ನು ತಿಳಿಸುವ ವೇ೦ಕಟ ಲಕ್ಷ್ಮಿ ಕತೆ, ಮುಗ್ದ ಮಕ್ಕಳ ಬದುಕಿನ ಮೇಲೆ ಎರಗುವ ಪಾಲಕರ ಶೌರ್ಯವನ್ನು ಹೇಳುವ ಸನ್ಯಾಸಿ ಹೇಳದ ಕತೆ ಮತ್ತು ರಾಧಿಕಾ ಮತ್ತು ಅವಳ ಗೊಂಬೆಗಳು, ಕೌಟುಂಬಿಕ ಹೊಣೆಗಾರಿಕೆಯನ್ನು ತಿಳಿಸುವ ಏಳು ಮಲ್ಲಿಗೆ ತೂಕದವಳು, ಪೌರ್ವಾತ್ಯ, ಪಾಶ್ಮಿಮಾತ್ಯರ ದೃಷ್ಟಿಕೋನವನ್ನು ಪರಾಮರ್ಶಿಸುವ ಜವಾಬ್ದಾರಿ, ಆಧುನಿಕ ವಿಜ್ಞಾನದ ಆವಿಷ್ಕಾರವನ್ನು ಪುರಾಣದ ಕಥೆ ಕಲ್ಪನೆಗಳನ್ನು ಸಾಕಾರವಾಗಿಸುವ ವಿಜ್ಮಾನಿಗಳ ಕಾರ್ಯಕ್ಷಮತೆಯನ್ನು ಹೇಳುವ ಅ೦ಗೈಯಲ್ಲಿ ಬ್ರಹ್ಮಾಂಡ ಹೀಗೆ ವೈವಿಧ್ಯಮಯ ಜಗತ್ತೊ೦ದನ್ನು ಇಲ್ಲಿನ ಕತೆಗಳು ತಟ್ಟಿಕೂಡುತ್ತವೆ.

 

-ಕೃಪೆ ವಾರ್ತಾ ಭಾರತಿ ವಿಮರ್ಶೆ 

 

ಪುಟಗಳು: 96

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)