ಓದಿದವರು:
ಧ್ವನಿಧಾರೆ ಮಿಡಿಯಾ ತಂಡ
ಆಡಿಯೋ ಪುಸ್ತಕದ ಅವಧಿ : 6 ಘಂಟೆ 9 ನಿಮಿಷ
‘ನೇಹಲ’ ಗಣೇಶಯ್ಯನವರ ಮೂರನೇ ಕಥಾ ಸಂಕಲನ. ತೀರಾ ತಡವಾಗಿ ಬರವಣಿಗೆ ಆರಂಭಿಸಿದ ಗಣೇಶಯ್ಯನವರು ತಮ್ಮ ವಿಶಿಷ್ಟ ಶೈಲಿ ಮತ್ತು ಆಕರ್ಷಕ ಬರವಣಿಗೆಯಿಂದ ಈಗಾಗಲೇ ಓದುಗರ ಗಮನ ಸೆಳೆದಿದ್ದಾರೆ. ಅವರು ಆಯ್ದುಕೊಳ್ಳುವ ವಸ್ತು ಕೂಡಾ ವಿಶೇಷವಾದದ್ದು. ಕನ್ನಡಕ್ಕೆ ತಮ್ಮದೇ ವಿಶಿಷ್ಟ ಶೈಲಿಯನ್ನು ರೂಪಿಸಿ ಮುಂದಿನ ಲೇಖಕರಿಗೆ ‘ಗಣೇಶಮಾರ್ಗ’ವನ್ನು ತೋರಿಸಿ ಕೊಟ್ಟಿದ್ದಾರೆ. ಹೊಚ್ಚ ಹೊಸ ಕಥಾ ಶೈಲಿ, ನಿರೂಪಣೆಗಳಿಂದಾಗಿ ಅವರ ಕಥೆಗಳು ನಮ್ಮನ್ನು ಆಕರ್ಷಿಸುತ್ತವೆ.
ಇಲ್ಲಿರುವ ಎಂಟೂ ಕಥೆಗಳು ತಮ್ಮ ವಸ್ತುವಿನಿಂದಾಗಿ ಒಂದಕ್ಕಿಂತ ಒಂದು ಭಿನ್ನವಾಗಿವೆ. ಈ ಕಥೆಗಳನ್ನು ಒಮ್ಮೆ ಓದಲು ಆರಂಭಿಸಿದರೆ ಕೊನೆ ಮುಟ್ಟುವವರೆಗೂ ನಿಲ್ಲಿಸಲು ಸಾಧವೇ ಆಗುವುದಿಲ್ಲ. ಐತಿಹಾಸಿಕ, ವೈಜ್ಞಾನಿಕ, ಥ್ರಿಲ್ಲರ್‌ಗಳನ್ನು ಕನ್ನಡಕ್ಕೆ ಯಶಸ್ವಿಯಾಗಿ ಪರಿಚಯಿಸಿದ ಹಿರಿಮೆ ಗಣೇಶಯ್ಯನವರದು.
ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.!