Click here to Download MyLang App

Nila Akasha,  nila Aakasha,  ನೀಲ ಆಕಾಶ,  ಡಾ. ನಾ ಮೊಗಸಾಲೆ,  Neela Aakasha,  Dr. Na. Mogasale,

ನೀಲ ಆಕಾಶ (ಇಬುಕ್)

e-book

ಪಬ್ಲಿಶರ್
ಡಾ. ನಾ ಮೊಗಸಾಲೆ
ಮಾಮೂಲು ಬೆಲೆ
Rs. 110.00
ಸೇಲ್ ಬೆಲೆ
Rs. 110.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಮೊಗಸಾಲೆಯವರು - ತಮ್ಮ ವೃತ್ತಿ ಧರ್ಮಕ್ಕೆ ಅನುಗುಣವಾಗಿ ಅದೆಷ್ಟೋ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಪ್ರವೃತ್ತಿಯಿಂದ ಕವಿಯಾಗಿರುವ ಅವರು ಬರೆದಿರುವ ಕವಿತೆಗಳಲ್ಲೂ ಅಪಾರವಾದ ಚಿಕಿತ್ಸಕ ಗುಣವಿದೆ. ವೈದ್ಯವೃತ್ತಿ ಹಾಗೂ ಕಾವ್ಯ ಪ್ರವೃತ್ತಿ ಎರಡೂ ಕೂಡಾ ಸಾಮಾಜಿಕ ಸ್ವಾಸ್ಥ್ಯಕ್ಕೆ ಬೇಕಾದ ಮೂಲ ಅಗತ್ಯಗಳೆ. ೧೯೭೪ರಲ್ಲಿ ಪ್ರಕಟವಾದ ಅವರ ‘ವರ್ತಮಾನದ ಮುಖಗಳು’ ಕವಿತಾ ಸಂಕಲನದಿಂದ ಹಿಡಿದು ೨೦೧೪ರಲ್ಲಿ ಪ್ರಕಟ ಕಂಡ ಅವರ ‘ದೇವರು ಮತ್ತೆ ಮತ್ತೆ’ ಕವಿತಾ ಸಂಕಲನದವರೆಗೆ ಸುಮಾರು ನಾಲ್ಕುವರೆ ದಶಕಗಳಿಗೂ ಮಿಕ್ಕ ಈ ಸುದೀರ್ಘ ಅವಧಿಯಲ್ಲಿ - ಹನ್ನೊಂದು ಕವಿತಾ ಸಂಕಲನಗಳನ್ನು ಹಾಗೂ ೨೦೦೩ ರಲ್ಲಿ ಪ್ರಕಟವಾದ ‘ಅರವತ್ತರ ತೇರು’ ಎಂಬ ಸಮಗ್ರ ಕಾವ್ಯದಂತಹ ಸಂಪುಟವನ್ನೂ ಹಾಗೆಯೇ ಪೂರ್ವೋತ್ತರ: ೧, ೨ ಎಂಬ ಅವರ ಈ ವರೆಗಿನ ಕಾವ್ಯ ಸಂಪುಟಗಳನ್ನು ಹೊರತುಪಡಿಸಿದರೆ - ಈಗ ‘ಸಮಗ್ರ ಕಾವ್ಯ’ ಪ್ರಕಟಣೆ ಸಿದ್ದವಾಗಿದೆ.

ಈ ನಲವತ್ತೈದು - ಐವತ್ತು ವರ್ಷಗಳ ಸುದೀರ್ಘ ಸಾಹಿತ್ಯ ಯಾನದಲ್ಲಿ ಮೊಗಸಾಲೆಯವರು ಕವಿಯಾಗಿ ತಮ್ಮ ಅಸ್ತಿತ್ವವನ್ನು ಸಾರಸ್ವತ ಲೋಕದಲ್ಲಿ ಸ್ಥಾಪಿಸಿ ಕೊಂಡಷ್ಟೇ ಶ್ರದ್ಧೆಯಿಂದ, ‘ಕಥೆಗಾರ’ರಾಗಿ, ‘ಕಾದಂಬರಿಕಾರ’ರಾಗಿ ಕಾಂತಾವರದ ‘ಕನ್ನಡ ಸಂಘ’ ಹಾಗೂ ‘ಅಲ್ಲಮಪ್ರಭು ಫೀಠ’ಗಳ ಸಂಸ್ಥಾಪಕರಾಗಿ, ಒಬ್ಬ ಸಂಘಟನಾಕಾರನಾಗಿ ತಮ್ಮ ಪ್ರತಿಭೆ ಹಾಗೂ ಸೃಜನಶೀಲತೆಗಳನ್ನು ಧಾರೆ ಎರೆದುಕೊಂಡದ್ದರ ಫಲವಾಗಿ, ಈ ಎಲ್ಲಾ ಕ್ಷೇತ್ರಗಳಲ್ಲೂ ಅವರು ಸಾಕಷ್ಟು ಸಾಧನೆ ಹಾಗೂ ಕೀರ್ತಿ ಸಂಪಾದನೆಯನ್ನು ಮಾಡಿದ್ದರೂ, ಮೊಗಸಾಲೆಯವರ ಸಮಗ್ರ ಪ್ರತಿಭೆಯ ಮೂಲ ಸೆಲೆ ಅತ್ಯಂತ ಪ್ರಜ್ವಲವಾಗಿ ತನ್ನ ಸೂಕ್ಷ್ಮವಾದ ಅಭಿವ್ಯಕ್ತಿಯನ್ನು ಪಡೆದುಕೊಂಡಿರುವುದು ಅವರ ಕಾವ್ಯದಲ್ಲೇ ಎಂಬುದನ್ನು ಯಾರೂ ಅಲ್ಲಗಳೆಯಲಾಗದು. ಕನ್ನಡ ಸಾರಸ್ವತಲೋಕ ಅವರನ್ನು ಕಾದಂಬರಿಕಾರರಾಗಿ, ಸಂಘಟನಾಕಾರರಾಗಿ ಗುರುತಿಸಿದಷ್ಟು ಅವರ ಕಾವ್ಯಪ್ರತಿಭೆಯನ್ನು ವಿಮರ್ಶಾಲೋಕವೂ ಗುರುತಿಸುವಲ್ಲಿ ಸೋತಿದೆ. ಕವಿಯಾಗಿ ಅವರ ಕಾವ್ಯಕೃತಿಗೆ ಒಂದು ಬಾರಿ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಮತ್ತು ಹತ್ತಾರು ಖಾಸಗಿ ಪ್ರಶಸ್ತಿಗಳು ಲಭ್ಯವಾಗಿದ್ದರೂ, ಕುವೆಂಪು, ಬೇಂದ್ರೆ, ಕಣವಿ, ಜಿ.ಎಸ್.ಎಸ್. ಇತ್ಯಾದಿ ಕವಿಗಳ ಕಾವ್ಯ ಪ್ರತಿಪಾದಿಸಿದ ಜೀವಪರತೆ ಸಾಮಾಜಿಕ ಕಳಕಳಿಗಳಿಗೆ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲದ ಕಾವ್ಯವನ್ನು ಮೊಗಸಾಲೆಯವರು ರಚಿಸಿದ್ದರೂ, ನಮ್ಮಲ್ಲಿರುವ ಪ್ರಾದೇಶಿಕ, ಜಾತಿ ಹಾಗೂ ವಿಶ್ವವಿದ್ಯಾಲಯಗಳ ಅಕಾಡೆಮಿಕ್ ಸೋಗಲಾಡಿತನದ ರಾಜಕಾರಣಗಳಿಂದಾಗಿ ಮೊಗಸಾಲೆಯವರ ಕಾವ್ಯ - ಪಠ್ಯಪುಸ್ತಕಗಳ ಒಳಗೆ ಪ್ರವೇಶ ಪಡೆಯಲಾರದ ಅಸ್ಪೃಶ್ಯತೆಗೆ ಒಳಗಾದದ್ದು ಕೂಡಾ ಪ್ರತಿಭಾವಂತನಾದ ಕವಿಯೊಬ್ಬನನ್ನು ಮೂಲೆ ಗುಂಪು ಮಾಡಿಬಿಡುವ ನಮ್ಮ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ರಾಜಕಾರಣದ ಬಲಿಪಶುವಿನಂತೆ ಮೊಗಸಾಲೆ ಹಾಗೂ ಅವರ ಕಾವ್ಯ ಇರುವುದು ಈ ಕಾಲಮಾನದ ಸಾಹಿತ್ಯ ರಾಜಕಾರಣದ ಅತ್ಯಂತ ದುರಂತ ಸಂಗತಿ ಎಂದೆನ್ನಿಸದೆ ಇರಲಾಗದು. ಹಾಗಾಗಿ ಮೊಗಸಾಲೆಯವರ ಮಾನವೀಯ ಅಂತಃಕರಣ ತುಂಬಿದ ಕವಿತೆ ಹೆಚ್ಚು ಜನರನ್ನು ತಲುಪದೆ ಉಳಿದ ಕಾರಣಗಳಲ್ಲಿ ಇದೂ ಒಂದೆನ್ನಿಸುತ್ತದೆ.

 

ಪುಟಗಳು: 750

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)